ಬಿಸಿ ಬಿಸಿ ಸುದ್ದಿ

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ವಯೋಮಿತಿ ಸಡಲಿಕೆ ಮನವಿ

ಕಲಬುರಗಿ: ಪೊಲೀಸ್ ಸಬ್‌ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಯಲ್ಲಿ ಮೂರು ತಿಂಗಳ ವಯೋಮಿತಿ ಸಡಲಿಕೆ ಮಾಡುವಂತೆ ಆಗ್ರಹಿಸಿ ಅಹಿಂದ ಚಿಂತಕರ ವೇದಿಕೆಯು ಗೃಹ ಮಂತ್ರಿಗಳಿಗೆ ಹಾಗೂ ಅಡಿಷನಲ್ ಡೈರೆಕ್ಟರ್ ಆಫ್ ಪೊಲೀಸ್ ನೇಮಕಾತಿ ಹಾಗೂ ಅಧ್ಯಕ್ಷರುಗಳಿಗೆ ಕಲಬುರಗಿ ಪೊಲೀಸ್ ಆಯುಕ್ತರ ಮುಖಾಂತರ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ಕೋವಿಡ್-೧೯ ನಿಂದ ಮತ್ತು ಲಾಕ್‌ಡೌನ್‌ನಿಂದ ಇಡಿ ದೇಶವೇ ತತ್ತರಿಸಿ ಹೋಗಿರುವದಂತು ನೈಜ ಸಂಗತಿಯಾಗಿದೆ ಮತ್ತು ಸುಮಾರು ಎರಡು ತಿಂಗಳೂಗಳಿಂದ ನಮ್ಮ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು ಯಾವುದೇ ಹೊಸ ಹುದ್ದೆಗಳು ಸೃಷ್ಠಿ ಮಾಡಿರುವುದಿಲ್ಲ. ಆದರೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಯನ್ನು ಅಧಿಸೂಚನೆಯನ್ನು ಮಾಡಲಾಗಿದ್ದು ಈ ಹುದ್ದೆಗಳು ಮಾಚ್- ಏಪ್ರೀಲ್ ತಿಂಗಳಲ್ಲಿ ಕರೆಯಬೇಕಿದ್ದು ಆದ್ದರೆ ಕರೋನಾ ಮಹಾಮಾರಿ ವೈರಸ್‌ನಿಂದಾಗಿ ಈ ಹುದ್ದೆಯ ಅಧಿಸೂಚನೆ ಮುಂದೂಡಿ ಇವಾಗ ಕರೆಯಲಾಗಿರುತ್ತದೆ. ಈ ಹುದ್ದೆಗೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಹಾಗೂ ಹಿಂದೂಳಿದ ವರ್ಗದವರಿಗೆ ೩೦ ವರ್ಷಗಳ ಮತ್ತು ಇತರೆ ಅಭ್ಯರ್ಥಿಗಳಿಗೆ ೨೮ ವರ್ಷ ವಯೋಮಿತಿ ನಿಗದಿ ಪಡಿಸಿರುತ್ತಿರಿ. ಆದರೆ ಸಾವಿರಾರು ಅಭ್ಯರ್ಥಿಗಳ ವಯಸ್ಸು ೧೫ ದಿನ ಮತ್ತು ೩೦ ದಿನಗಳವರೆಗೆ ಅಂತರದಿಂದಾಗಿ ಈ ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಗಂಭೀರವಾಗಿ ಪರಿಗಣಿಸಿ ಈ ಮೇಲ್ಕಾಣಿಸಿದ ಹುದ್ದೆಗೆ ಮೂರು ತಿಂಗಳ ವಯೋಮಿತಿ ಸಡಿಲಿಕೆ ಮಾಡಬೇಕಾಗಿ ಮನವಿ ಮಾಡಲಾಯಿತು.

ಹಲವಾರು ಯುವಕರು ಬೆಂಗಳೂರು, ಧಾರವಾಡ, ವಿಜಯಪೂರ, ಮಂಗಳೂರು ಹೀಗೆ ಹತ್ತಾರು ಕಡೆಗಳಲ್ಲಿ ತರಬೇತಿಗಾಗಿ ಹೋಗಿ ಹಗಲಿರುಳು ಓದಿರುವರು ಮತ್ತು ಇವರ ಹಿಂದೆ ಇವರ ಪಾಲಕರುಗಳ ಶ್ರುಮ ತುಂಬಾ ಇದ್ದು ಈ ಮಕ್ಕಳಿಗೆ ಲಕ್ಷಾಂತರ ರೂ.ಗಳ ಖರ್ಚು ಮಾಡಿ ಕಂಗಾಲಾಗಿದ್ದಾರೆ. ಮಾರ್ಚ್- ಏಪ್ರಿಲ್ ಅಲ್ಲಿ ಪಿಎಸ್‌ಐ ಹುದ್ದೆ ಕರೆಯುವರು ಈ ಹುದ್ದೆಗೆ ಸ್ಪರ್ಧಿಸಿ ಉದ್ಯೋಗ ಪಡೆದು ಸಮಾಜಕ್ಕೆ ಒಬ್ಬ ಒಳ್ಳೆಯ ದಕ್ಷ ಪ್ರಮಾಣಿಕ ಪೊಲೀಸ್ ಅಧಿಕಾರಿ ಆಗಬೇಕೆಂದು ಮಹದಾಶೆಯನ್ನು ಯುವಕರು ಕಂಡಿರುತ್ತಾರೆ. ಮತ್ತು ಹಗಲು ರಾತ್ರಿ ಓದಿ ಪರೀಕ್ಷೆ ಎದುರಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಪಾಲಕರು ತಮ್ಮ ಮಕ್ಕಳಿಗೆ ನೌಕರಿಸಿಗುವುದು ತಮ್ಮ ಕುಟುಂಬದ ಜವಾಬ್ದಾರಿಯನ್ನು ನಮ್ಮ ಮಕ್ಕಳು ವಹಿಸಿಕೊಳ್ಳಲಿ ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಈ ಕರೋನಾ ವೈರಸ್ ನಿಂದ ಇವರುಗಳ ಆಸೆಗಳು ನನಸಾಗದೆ ಇರುವುದೆನೋ ಎಂದು ನೊಂದುಕೊಳ್ಳುತ್ತಿದ್ದಾರೆ. ಆದ ಕಾರಣ ಇವರುಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಿಎಸ್‌ಐ ಹುದ್ದೆಯನೇಮಕಾತಿಯಲ್ಲಿ ಮೂರು ತಿಂಗಳ ವಯಸ್ಸು ಸಡಿಲಿಕೆ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಸೈಬಣ್ಣಾ ಜಮಾದಾರ, ಮುಕೇಶ ರಾಠೋಡ, ಆನಂದ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago