19ನೇ ಶತಮಾನದಲ್ಲಿ ನಡೆದ ಫ್ರಾನ್ಸ್ ಮಹಾಕ್ರಾಂತಿ, ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ ಇವುಗಳ ಮೂಲಕ ವಿಶ್ವ ಸಮುದಾಯಕ್ಕೆ ಹೊಸ ಪ್ರಗತಿಪರ ವಿಚಾರಧಾರೆ ಎರೆದರು. ಸ್ವಾತಂತ್ರ್ಯ, ಭ್ರಾತತ್ವ, ಸಮಾನತೆ ಮಹಿಳೆಯ ವಿಮುಕ್ತಿ ಘೋಷಣೆಗಳು ಮೊಳಗಿದವು. ಧರ್ಮನಿರಪೇಕ್ಷತೆ ಪ್ರಜಾತಂತ್ರ ನೂತನ ಪರಿಕಲ್ಪನೆಗಳು ಮೂಡಿಬಂದವು. ಇದು ನವೋದಯದ ಕಾಲ ಎಂದೇ ಖ್ಯಾತಿ ಪಡೆಯಿತು.
ತಂದೆ ರಮಾಕಾಂತ್ ರವರು ಮತ್ತು ತಾಯಿ ತಾರಿಣಿ ದೇವಿ ಬ್ರಾಹ್ಮಣ ದಂಪತಿಗಳಲ್ಲಿ ಅಪೂರ್ವ ಚೇತನ 1772 ರ ಮೇ 22ರಂದು ಸಾಂಪ್ರದಾಯಿಕ ಕುಟುಂಬದಲ್ಲಿ ಪಶ್ಚಿಮ ಬಂಗಾಳದ ರಾಧಾ ನಗರದಲ್ಲಿ ಜನಿಸಿದರು. ಮನೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಿಂದೂ ಧರ್ಮದ ಪವಿತ್ರ ಗ್ರಂಥಗಳನ್ನು ಮನನ ಮಾಡಿಕೊಂಡರು. ಇಷ್ಟಕ್ಕೆ ಸೀಮಿತರಾಗದೆ ಮೌಲ್ವಿಯಿಂದ ಪಾರಸಿ, ಅರಬ್ಬಿ, ಆಂಗ್ಲ ಮತ್ತು ಪರ್ಸಿಯನ್, ಬಂಗಾಳಿ ಭಾಷೆ ಕಲಿತರು . ಜಗತ್ತಿನ ವಿವಿಧ ಮತಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರು.
15ನೇ ವಯಸ್ಸಿನಲ್ಲಿ ಮೂಢನಂಬಿಕೆ ಕಂದಾಚಾರದಂತ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ ಬಹುಪತ್ನಿತ್ವ ಗಳ ವಿರುದ್ಧ ದನಿಯೆತ್ತಿದರು. ಇಂಥದನ್ನು ವಿರೋಧಿಸಿದ್ದಕ್ಕೆ ಪಾಲಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ತಮ್ಮ ದಾರಿಯನ್ನು ಮಾತ್ರ ಬಿಡಲಿಲ್ಲ. ನಮ್ಮ ದೇಶದಲ್ಲಿಯೂ ವೈಜ್ಞಾನಿಕ ಶಿಕ್ಷಣಕ್ಕಾಗಿ, ಮಹಿಳೆಯರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದರು.ಸ್ತ್ರೀ-ಪುರುಷ ಸಮಾನತೆಗೆ ಮತ್ತು ವಿಧವೆಯರಿಗೆ ಪುನರ್ ವಿವಾಹ ಪ್ರೋತ್ಸಾಹಿಸಿದರು. ಸತಿ ಸಹಗಮನ ಪದ್ಧತಿಯನ್ನು ವಿರೋಧಿಸಿದರು.
ನಂತರದ ಬೆಳವಣಿಗೆಯಲ್ಲಿ 1829 ರಲ್ಲಿ ವಿಲಿಯಂ ಬೆಂಟಿಕ್ ಅವರು “ಸತಿಸಹಗಮನ ಪದ್ಧತಿ”ನಿಷೇಧಿಸಿದ್ದರು. ರಾಜರಾಮ್ ಮೋಹನ್ ರಾಯ್ 1828 ರಲ್ಲಿ ಕಲ್ಕತ್ತದಲ್ಲಿ ‘ಬ್ರಹ್ಮ ಸಮಾಜ’ ಸ್ಥಾಪಿಸಿದರು. ಮೌಢ್ಯತೆ , ಅವೈಜ್ಞಾನಿಕತೆ ಹಳೆಯ ಮೌಲ್ಯಗಳ ನಿವಾರಣೆ, ನೈತಿಕತೆ ಉನ್ನತ ಸಂಸ್ಕೃತಿ ಸಾಮಾಜಿಕ ಪ್ರಗತಿಪರ ವಿಚಾರಗಳನ್ನು ಬಿತ್ತುವ ಅವರ ಮುಖ್ಯ ಉದ್ದೇಶವಾಗಿತ್ತು. ಅಂದಿನ ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೂ ಪ್ರತಿಕ್ರಿಯಿಸುವುದು ಅಷ್ಟೇ ಅಲ್ಲದೆ, ಅನ್ಯಾಯ ಅಸಮಾನತೆ ವಿರುದ್ಧ ಧ್ವನಿಯೆತ್ತಿದ್ದರು. ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಎಲ್ಲಾ ರಂಗಗಳಲ್ಲೂ ಅಳಿಸಲಾರದಂಥ ಛಾಪನ್ನು ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಸದಾ ಸಮಾಜದ ಕಲ್ಯಾಣದ ಕುರಿತಾಗಿ ಚಿಂತಿಸುತ್ತಿದ್ದ ಈ ಮಹಾನ್ ಚೇತನ ಸೆಪ್ಟೆಂಬರ್ 27, 1833 ಇಂಗ್ಲೆಂಡಿನಲ್ಲಿ ಕಣ್ಮರೆಯಾದರು. ಇಂತಹ ಮಹಾನ್ ವ್ಯಕ್ತಿಯ ಜೀವನ, ಬಹುಮುಖ ವ್ಯಕ್ತಿತ್ವ ಇಂದಿನ ಯುವಜನತೆಗೆ ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಎಲ್ಲರಿಗೂ ಸ್ಫೂರ್ತಿ ಮತ್ತು ಆದರ್ಶವಾಗಲಿ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…