ಬಿಸಿ ಬಿಸಿ ಸುದ್ದಿ

ದೇವಿಕೇರಾ:ಬಡ ಕುಟುಂಬದ ನೆರವಿಗೆ ಬಂದ ವೀರಶೈವ ಲಿಂಗಾಯತ ಯುವ ವೇದಿಕೆ

ಸುರಪುರ: ಇಂದು ಸಮಾಜದ ಸುಧಾರಣೆ ಮತ್ತು ಅಭಿವೃಧ್ಧಿಯಲ್ಲಿ ಮಾದ್ಯಮ ಮತ್ತು ಸಂಘ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮ್ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ತಾಲೂಕಿನ ದೇವಿಕೇರಾ ಗ್ರಾಮದಲ್ಲಿನ ಒಂದೆ ಕುಟುಂಬದಲ್ಲಿ ನಾಲ್ವರು ಬುದ್ಧಿಮಾಂದ್ಯ ಅಂಗವಿಕಲರಿರುವ ಬಡ ಕುಟುಂಬಕ್ಕೆ ನೆರವಿನ ಹಸ್ತ ಚಾಚಿರುವ ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿ ಅನೇಕ ಯುವಕರು ಧನ ಸಹಾಯದ ಮೂಲಕ ಹಮ್ಮಿಕೊಂಡ ಮನೆ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಮಾದ್ಯಮಗಳು ಇಂದು ಸಮಾಜದ ಅಭಿವೃಧ್ಧಿಯಲ್ಲಿ ಹಾಗು ಜನರ ಕಷ್ಟ ಕಾರ್ಪಣ್ಯಗಳನ್ನು ಎತ್ತಿ ತೋರಿಸುವಲ್ಲಿ ಮಹತ್ವದ ಕೆಲಸ ಮಾಡುತ್ತಿವೆ.ಅದರಂತೆ ನಮ್ಮ ವೀರಶೈವ ಲಿಂಗಾಯತ ಯುವ ವೇದಿಕೆಯ ಯುವಕರು ಈ ದೇವಿಕೆರಾ ಗ್ರಾಮದ ಬಡ ಕುಟುಂಬದ ನೆರವಿಗೆ ಬಂದಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ಒಂದೆ ಕುಟುಂಬದಲ್ಲಿ ನಾಲ್ವರು ಅಂಗವಿಕಲರಿದ್ದು,ನಾಲ್ವರನ್ನು ತಾಯಿ ತಂದೆಯರಾಗಿ ಅವರ ಸಹೋದರಿ ನೋಡುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ.

ಈ ಕಟುಂಬದ ನೆರವಿಗೆ ಕೇವಲ ಸುರಪುರ ಮಾತ್ರವಲ್ಲ ಪಕ್ಕದ ತಾಲೂಕಾದ ಶಹಾಪುರದಿಂದಲೂ ಗುರು ಮಣಿಕಂಠ ಮತ್ತಿತರರು ಮುಂದೆ ಬಂದಿರುವುದು ಸಂತೋಷದ ಸಂಗಿತಿಯಾಗಿದೆ ಎಂದರು.ಇನ್ನೂ ಹೆಚ್ಚಿನ ಸಹಾಯವನ್ನು ಎಲ್ಲರು ಸೇರಿ ಮಾಡೋಣ ಎಂದರು.

ವೀರಶೈವ ಲಿಂಗಾಯತ ಯುವ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಡೊಣೂರ ಮಾತನಾಡಿ,ಇಂದು ಅನೇಕರ ನೆರವಿನಿಂದ ಯುವ ವೇದಿಕೆ ನೇತೃತ್ವದಲ್ಲಿ ಮನೆ ದುರಸ್ಥಿಗೊಳಿಸಲಾಗುತ್ತಿದೆ.ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಧನ ಸಹಾಯವನ್ನು ಈ ಕುಟುಂಬಕ್ಕೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಆರಂಭದಲ್ಲಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಭೂಮಿ ಪೂಜೆಯ ಮೂಲಕ ಮನೆ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗುರು ಮಣಿಕಂಠ, ಮಂಜುನಾಥ ಜಾಲಹಳ್ಳಿ, ರಂಗನಗೌಡ ದೇವಿಕೇರಾ, ಮಂಜುನಾಥ ಗುಳಗಿ,ಶಿವುಕುಮಾರ ಕಲಕೇರಿ,ವಿರೇಶ ಪಂಚಾಂಗಮಠ, ಮಹಾಂತಗೌಡ, ಮಲ್ಲಿಕಾರ್ಜುನ ಸಾಹುಕಾರ, ಬಸವರಾಜ ಬೂದಿಹಾಳ,ಶರಣು ಅರಕೇರಿ, ಕೃಷ್ಣಾ ದೇವಿಕೇರಾ,ಧರ್ಮರಾಜ ಮಡಿವಾಳ,ಶರಣು ಕಳ್ಳಿಮನಿ,ನಾಗರಾಜಸ್ವಾಮಿ ರುಮಾಲಮಠ ಸೇರಿದಂತೆ ಅನೇಕರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago