ಸುರಪುರ: ಜಗತ್ತಿನಲ್ಲಿಯ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವದ ಬಗ್ಗೆ ತೋರುವಷ್ಟು ಕಾಳಜಿಯನ್ನು ಪರಿಸರದ ಮೇಲು ತೋರಬೇಕಿದೆ.ಮನುಷ್ಯನ ಜೀವಕ್ಕೆ ಪರಿಸರವೇ ಮೊದಲ ಆಸರೆಯಾಗಿದೆ ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ತಿಳಿಸಿದರು.
ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಅಂಗವಾಗಿ ತಹಸೀಲ್ ಕಚೇರಿ ಮುಂದೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ,ಇಂದು ಎಲ್ಲರಿಗೂ ಶುದ್ಧ ಗಾಳಿ ನೀರು ಸಿಗದಂತೆ ಸ್ಥಿತಿ ನಿರ್ಮಾಣವಾಗುತ್ತಿದೆ.ಇದಕ್ಕೆ ಕಾರಣವೆಂದರೆ ಜನರು ಮಾಡುತ್ತಿರುವ ಪರಿಸರ ನಾಶವೆ ಕಾರಣವಾಗಿದೆ.ಹೀಗೆಯೆ ಪರಿಸರ ಹಾಳು ಮಾಡುತ್ತಾ ಹೋದರೆ ಮುಂದೊಮ್ಮೆ ಗಾಳಿ ನೀರು ಇಲ್ಲದೆ ಜನರು ಸಾವಿಗೀಡಾಗುವ ಪರಸ್ಥಿತಿ ಬರಬಹುದು ಅದಕ್ಕಾಗಿ ಎಲ್ಲರು ಮರಗಳನ್ನು ಬೆಳೆಸುವ,ಪರಿಸರ ಸ್ವಚ್ಛತೆ ಬಗ್ಗೆ ಕಾಳಜಿವಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ತಹಸೀಲ್ ಕಚೇರಿ ಮುಂದೆ ಅನೇಕ ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ತಹಸೀಲ್ ಸಿರಸ್ತೆದಾರ್ ನಿಸಾರ್ ಅಹ್ಮದ್, ಕೊಂಡಲನಾಯಕ, ರಾಜು, ಭೀಮು ಯಾದವ್ ಹಾಗು ಅರಣ್ಯ ಇಲಾಖೆಯ ಸಿಬ್ಬಂದಿಗಳಿದ್ದರು.
ಅಕ್ಷರ ದಾಸೋಹ ಕಚೇರಿ: ನಗರದ ಅಕ್ಷರ ದಾಸೋಹ ಕಚೇರಿ ಬಳಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಕಚೇರಿ ಬಳಿಯಲ್ಲಿ ಸಸಿ ನೆಡುವ ಮೂಲಕ ಆಚರಿಸಿದರು,ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಅಭೀವೃಧ್ಧಿ ಬ್ಯಾಂಕ್: ನಗರದ ಹಳೆ ತಹಸೀಲ್ ಕಚೇರಿ ಬಳಿಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭೀವೃಧ್ಧಿ ಬ್ಯಾಂಕ್ ಕಚೇರಿ ಬಳಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಬ್ಯಾಂಕ್‍ನ ಅಧ್ಯಕ್ಷ ರಾಮನಗೌಡ ಸುಬೇದಾರ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.ಉಪಾಧ್ಯಕ್ಷ ನಿಂಗಣ್ಣ ಕವಡಿಮಟ್ಟಿ,ವಾಮನರಾವ್ ದೇಶಪಾಂಡೆ,ಧರೆಪ್ಪ ಬೂದಿಹಾಳ,ರಾಮಚಂದ್ರ ಪೂಜಾರಿ,ಶರಣು ನಾಯಕ ಬೈರಿಮರಡಿ,ಶರಣಬಸವ ಅಂಗಡಿ,ಬಸನಗೌಡ ಪಾಟೀಲ ದೇವಾಪುರ ಹಾಗು ವ್ಯವಸ್ಥಾಪಕ ರಾಜು ಇತರರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಕಚೇರಿ: ನಗರದ ಹಳೆ ಆಸ್ಪತ್ರೆ ಬಳಿಯ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಸಸಿ ನೆಟ್ಟು ನೀರೆರೆಯುವ ಮೂಲಕ ಪರಿಸರ ದಿನವನ್ನು ಆಚರಿಸಿದರು.ನಗರ ಆಸ್ಪತ್ರೆಯ ವೈದ್ಯರು ಹಾಗು ಸಿಬ್ಬಂದಿಗಳು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…