ಸುರಪುರ: ತಾಲೂಕಿನ ಮಂಗಿಹಾಳ ಗ್ರಾಮದಲ್ಲಿನ ಹನುಮಂತ ದೇವರ ದೇವಸ್ಥಾನಕ್ಕಾಗಿ ಮೀಸಲಿಟ್ಟಿರುವ ಜಮೀನನ್ನು ಒಂದು ವರ್ಷದ ಮಟ್ಟಿಗೆ ವ್ಯವಸಾಯದ ಭೋಗ್ಯಕ್ಕಾಗಿ ಹರಾಜು ನಡೆಸಲಾಯಿತು.ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ನೇತೃತ್ವದಲ್ಲಿ ಹರಾಜು ನಡೆಸಲಾಯಿತು.
ಸೋಮವಾರ ಬೆಳಿಗ್ಗೆ ನಡೆದ ಹರಾಜು ಪ್ರಕ್ರೀಯೆಯಲ್ಲಿ ಗ್ರಾಮದ ನೂರಾರು ಜನ ಭಾಗವಹಿಸಿದ್ದರು.ಒಟ್ಟು 54 ಎಕರೆ ಜಮೀನಿಗೆ ನಡೆದ ಹರಾಜುವಿನ ಸರಕಾರಿ ಸವಾಲು 50 ಸಾವಿರ ರೂಪಾಯಿಗಳಿಂದ ಆರಂಭಿಸಲಾಯಿತು.ನಂತರ ಗ್ರಾಮದ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕೊನೆಯದಾಗಿ ಯಲ್ಲಪ್ಪ ಮಡಿವಾಳಪ್ಪ ಎಂಬುವವರು 24 ಎಕರೆ 2 ಗುಂಟೆ ಜಮೀನನ್ನು 1,29,600 ರೂಪಾಯಿಗಳಿಗೆ ಪಡೆದುಕೊಂಡರು.
ಅದೇರೀತಿಯಾಗಿ 13 ಎಕರೆ 7 ಗುಂಟೆ ಜಮೀನನ್ನು ಸಿದ್ದಪ್ಪ ನಾಗಪ್ಪ ಗಿರಣಿ ಎಂಬುವವರು 59,800 ರುಪಾಯಿಗೆ ಪಡೆದುಕೊಂಡರೆ ಇನ್ನುಳಿದ 17 ಎಕರೆ 1 ಗುಂಟೆ ಜಮೀನನ್ನು ರಾಘವೇಂದ್ರ ತಮ್ಮಣ್ಣ ಎಂಬುವವರು 74,800 ರೂಪಾಯಿಗಳಿಗೆ ಎಲ್ಲರು ಒಂದು ವರ್ಷದ ಭೋಗ್ಯಕ್ಕೆ ಪಡೆದುಕೊಂಡರು.ಈ ಸಂದರ್ಭದಲ್ಲಿ ಆರ್.ಐ ವಿಠ್ಠಲ್ , ಸಿರಸ್ತೆದಾರ ವಿನೋದಕುಮಾರ,ಗ್ರಾಮಲೆಕ್ಕಿಗ ಮುಬಾರಕ್, ಗ್ರಾಮಶೋಕ ಹುಸನಪ್ಪ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…