ಸುರಪುರ: ಯಾದಗಿರಿ ಜಿಲ್ಲೆಯಾದ್ಯಂತ ಸಾವಿರಾರು ಕುಟುಂಬಗಳ ಜನರು ಹೊರ ರಾಜ್ಯಗಳಿಂದ ಬಂದು ಎರಡು ವಾರಗಳ ಕಾಲ ದಿಗ್ಬಂಧನ ಕೇಂಧ್ರಗಳಲ್ಲಿದ್ದು ಬಂದಿದ್ದಾರೆ.ಆ ಕುಟುಂಬಗಳು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟ ಪಡುವಂತಾಗಿದೆ.ಅಂತಹ ಕ್ವಾರಂಟೈನ್ ಕೇಂದ್ರದಲ್ಲಿದ್ದು ಬಂದ ಜಿಲ್ಲೆಯಲ್ಲಿನ ಎಲ್ಲಾ ಕುಟುಂಬಗಳಿಗೆ ಅಜೀಂ ಪ್ರೇಮ್‌ಜಿ ಪೌಂಡೇಶನ್ ವತಿಯಿಂದ ಉಚಿತವಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಎಪಿಎಫ್ ಕೋಆರ್ಡಿನೇಟರ್ ಸುರೇಶ ಗೌಡರ್ ತಿಳಿಸಿದರು.
ಇಂದು ನಾರಾಯಣಪುರ ಭಾಗದ ಅನೇಕ ತಾಂಡಾಗಳಲ್ಲಿನ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಿ ಮಾತನಾಡಿ,ಯಾದಗಿರಿ ಜಿಲ್ಲೆಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಕುಟುಂಬಗಳು ಇರಬಹುದೆಂಬ ಅಂದಾಜಿದೆ. ಈಗಾಗಲೆ ಹುಣಸಗಿ ತಾಲೂಕಿನಲ್ಲಿಯ ಸುಮಾರು ೧೦೨೬ ಕುಟುಂಬಗಳಿಗೆ ಈಗ ಕಿಟ್ ವಿತರಿಸಲಾಗುತ್ತಿದೆ. ಮುಂದೆ ಸುರಪುರ ಮತ್ತು ಶಹಾಪುರ ತಾಲೂಕುಗಳಲ್ಲಿಯೂ ಕಿಟ್ ವಿತರಣೆ ನಡೆಯಲಿದೆ.ಇದರಲ್ಲಿ ಅಕ್ಕಿ ಬೇಳೆ ಅಡುಗೆ ಎಣ್ಣೆ ಸಾಬೂನು ಸೇರಿದಂತೆ ಅಗತ್ಯ ವಸ್ತುಗಳುಳ್ಳ ಕಿಟ್ ಮಾಡಲಾಗಿದ್ದು.
ಇದರಿಂದ ಹೊರ ರಾಜ್ಯದಿಂದ ಬಂದು ಕ್ವಾರಂಟೈನಲ್ಲಿದ್ದು ಮನೆಗೆ ಬಂದವರಿಗೆ ನಿತ್ಯದ ಬದುಕಿನ ಅಗತ್ಯ ವಸ್ತುಗಳ ಸಮಸ್ಯೆ ಕಾಡದಿರಲೆಂದು ನಮ್ಮ ಎಪಿಎಫ್ ಮುಖ್ಯಸ್ಥರು ಜನರ ಪರವಾದ ಕಾಳಜಿವಹಿಸಿ ಕಿಟ್ ವಿತರಣೆಗೆ ಮುಂದಾಗಿದ್ದಾರೆ.ಜನತೆ ಇದರ ಉಪಯೋಗವನ್ನು ಪಡೆಯುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಫ್‌ನ ಅನ್ವರ್ ಜಮಾದಾರ,ಗ್ರಾಮ ಲೆಕ್ಕಿಗ ವೆಂಕಟೇಶ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.
ಅದೇರೀತಿಯಾಗಿ ಕಚಕನೂರ ಗ್ರಾಮದಲ್ಲಿಯೂ ಕಿಟ್ ವಿತರಿಸಿದರು.ಎಪಿಎಫ್‌ನ ಪರಮಣ್ಣ ಹಾಗು ಗ್ರಾಮ ಲೆಕ್ಕಿಗ ಮಹೇಂದ್ರ ಮತ್ತು ಆಶಾ ಕಾರ್ಯಕರ್ತೆಯರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…