ಕಲಬುರಗಿ: ಸಿಎಂ ಯಡಿಯೂರಪ್ಪ ಅವರು ರೈತ ಮತ್ತು ನೇಕಾರ ನಮ್ಮ ಎರಡು ಕಣ್ಣುಗಳು ಎಂದು ಘೋಷಣೆ ಮಾಡಿದ್ದು, ಕಾರ್ಯರೂಪಕ್ಕೆ ತರಲು ಕಲ್ಯಾಣ ಕರ್ನಾಟಕದ ಪಕ್ಷದ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ನ್ಯಾಯವಾದಿ ವಿನೋದಕುಮಾರ ಜೇನವೆರಿ ಯವರನ್ನು ಪರಿಗಣಿಸಿ ಸಮಾಜ ಸೇವಾ ಅಡಿಯಲ್ಲಿ ನಾಮ ನಿರ್ದೇಶನ ಗೊಳಿಸಿ ಬೇಕು ಎಂದು ಸಮಾಜದ ಸಂಸ್ಥಾಪಕ ಹಾಗೂ ನಿವೃತ್ತ Dy.s.p ಆರ್. ಸಿ. ಘಾಳೆ ಅವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ಆಗ್ರಹಿಸಿದ್ದಾರೆ.
ಅದೇ ರೀತಿ ಜಿಲ್ಲಾ ಕುರವಿನ ಶೆಟ್ಟಿ ಸಮಾಜದ ಅಧ್ಯಕ್ಷ ಅಣ್ಣಾರಾಯ. ಕ. ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ಮ್ಯಾಲಗಿ ಸಭೆಯಲ್ಲಿ ಈ ಭಾಗದಲ್ಲಿ ನಮ್ಮ ನೇಕಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲೇಬೇಕು, ಇಲ್ಲದಿದ್ದರೆ ಕಳೆದ ಎರಡು ದಶಕಗಳಿಂದ ಪಕ್ಷಕ್ಕೆ ನೀಡುತ್ತಿರಿವ ಬೆಂಬಲ ನಾವು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಜಾಗ್ರತಿ ಮೂಡಿಸಿ ಬೇರೆ ಪಕ್ಷಕ್ಕೆ ಮತಾಂತರ ಗೊಳ್ಳಬೇಕಾಗುತ್ತದೆ. ಈ ಭಾಗದಲ್ಲಿ ನೇಕಾರರ ದ್ವನಿಯಾಗಿ ಹೋರಾಡುತ್ತಾ ಪಕ್ಷದಲ್ಲಿ ಸತತ 3 ದಶಕ ಗಳ ಕಾಲ ಪಕ್ಷದಲ್ಲಿ ಸೇವೆ ಗೈಯುತ ಪ್ರತಿ ಶಾಸಕರನ್ನು ಗೆಲ್ಲಿಸಲು ಗಟ್ಟಿಯಾಗಿ ವಸ್ತ್ರ ನೈದ ನೇಕಾರ ನಾಯಕರು ಆದ ವಿನೋದ ಕುಮಾರ ಜೇನವೆರಿ ಯವರಿಗೆ ಪ್ರಥಮ ಆದ್ಯತೆ ಮೇರೆಗೆ ನಾಮ ನಿರ್ದೇಶನ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಮಾತನಾಡುತ್ತಾ 1990 ರಿಂದ ಇಲ್ಲಿಯವರೆಗೆ ಪಕ್ಷದಲ್ಲಿ ಅಜಾತ ಶತ್ರು ದಿ. ಅಟಲ್. ಭಿಹಾರಿ ವಾಜಪೈಯಿ ಯವರ ಆದರ್ಶಗಳು ಅಳವಡಿಸಿ ಕೊಂಡು ಪಕ್ಷದ ಕಟ್ಟಾಳು, ನೇಕಾರ ಪ್ರಕೋಷ್ಠ ದ ನಗರ ಜಿಲ್ಲಾ ಸಂಚಾಲಕ ರಾಗಿ ಸೇವೆಯನ್ನು ಪರಿಗಣಿಸಬೇಕು ಎಂದು ಕೋರಿದರು.
ಇನ್ನೊರವ ಗೆಳೆಯ ಶಿವರಾಜ್ ಅಂಡಗಿ ಮಾತನಾಡುತ್ತಾ ಪಕ್ಷದ ನೈಜ ಕಾರ್ಯಕರ್ತರನ್ನು ಪರಿಗಣಿಸುವ ನಿಟ್ಟಿನಲ್ಲಿ ನ್ಯಾಯವಾದಿ ವಿನೋದ ಕುಮಾರ ಜೇ. ಯವರನ್ನು ಜಿಲ್ಲಾ ಕಮಿಟಿ ಇವರ ಹೆಸರು ಮೊದಲ ಆದ್ಯತೆ ನೀಡಬೇಕು ಅಲ್ಲದೆ ಈ ಭಾಗದ ನೈಜ BJP ನಾಯಕರು ಒಮ್ಮತದ ನಿರ್ಣಯವನ್ನು ತೆಗೆದುಕೊಂಡು ಮಾಜಿ ಸಂಸದರು ಹಾಗೂ ಹಾಲಿ ಶಾಸಕರು ಕೂಡಿಕೊಂಡು ಬಿನ್ನಹ ಒತ್ತಲಿಕೆ ಸರಕಾರಕ್ಕೆ ಕಳಿಸಿಕೊಡಬೇಕು ಎಂದು ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…