ಕಲಬುರಗಿ: ಕಲ್ಯಾಣ ಕರ್ನಾಟಕದ ಏಕೈಕ ಮೌಲ್ಯಮಾಪನ ಕೇಂದ್ರ ನಗರದ ಹೃದಯ ಭಾಗದಲ್ಲಿರುವ ಗುರುಕುಲ್ ಪಿಯುಸಿ ಕಾಲೇಜು ನಲ್ಲಿ 2019-2020ನೇ ಸಾಲಿನ ದ್ವಿತೀಯ ಪಿಯುಸಿ ಕನ್ನಡ ಮೌಲ್ಯಮಾಪನ ಮೇ 27ರಿಂದ ಪ್ರಾರಂಭವಾಗಿ ನಾಳೆ 14ರಂದು ಮೌಲ್ಯಮಾಪನ ಕಾರ್ಯ ಮುಕ್ತಾಯ ಹಾಗೂ ವಯೋ ನಿವೃತ್ತ ರಾಗುವ ಉಪನ್ಯಾಸಕರಿಗೆ ಸನ್ಮಾನ ಸಮಾರಂಭ ದಲ್ಲಿ ಕಲಬುರಗಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕೊರೊನಾ ರೋಗದ ಮಧ್ಯಯು ಉಪನ್ಯಾಸಕರು ತಮ್ಮ ಜೀವದ ಭಯದಲ್ಲಿಯು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕನ್ನಡ ಮೌಲ್ಯಮಾಪನ ಯಶಸ್ವಿಯಾಗಿ ಮಾಡಿದ್ದಾರೆ ಎಂದು ಹೇಳಿದ್ದರು.
ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಾದ ಅಂಬಾಜಿ ಹಳ್ಳಿ ಖೇಡ ಮಾತನಾಡಿ ಉಪನ್ಯಾಸಕರು ತುಂಬಾ ಶಿಸ್ತು ಹಾಗೂ ಸಂಯಮದಿಂದ ಉತ್ತಮವಾಗಿ ಮೌಲ್ಯಮಾಪನ ಮಾಡಿದರು ಎಂದು ಹೇಳಿದ್ದರು.
ಮೌಲ್ಯಮಾಪನ ಕೇಂದ್ರದಲ್ಲಿತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದರು ಸೆನೆಟೈಸರ ಹಾಗೂ ಮಾಸ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರದ ನಿರೀಕ್ಷಕರಾದ ಅಶೋಕ ಶಾಸ್ತ್ರಿ ಹೇಳಿದರು.
ವೇದಿಕೆಯ ಮೇಲೆ ಗುರುಕುಲ್ ಪಿಯುಸಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಮೌಲ್ಯಮಾಪನ ಕೇಂದ್ರದ ಶಿಬಿರಾಧಿಕಾರಿಗಳಾದ ದಿನೇಶ್ ಕುಲಕರ್ಣಿ ಇದ್ದರು. ವಯೋ ನಿವೃತ್ತ ರಾಗುವ ಉಪನ್ಯಾಸಕರಾದ ಶಂಬುಲಿಂಗ ವಿ ಕೆ,ಪಿ.ಎಸ್ ಬಡಿಗೇರ, ಜಿ ಎಸ್ ಮಾಲಿ ಪಾಟೀಲ,ಅಂಬಾಜಿ ಹಳ್ಳಿ ಖೇಡ, ಅನಂತ ಪೂರ ಶ್ರೀದೇವಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಬಿ.ರಬಿನಾಳ ಅವರಿಗೆ ಸತ್ಕರಿಸಿದರು. ಸವಿತಾ ಕೊಲಕುಂದ ಪ್ರಾರ್ಥನೆ ಮಾಡಿದರು, ಬಿ ಎಚ್ ನಿರಗುಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಲೇಖಾ ಪಾಟೀಲ ರವರು ಸ್ವಾಗತ ಮಾಡಿದರು. ಮಾರುತಿ ರೆಡ್ಡಿ ವಂದನೆ ಮಾಡಿದರು.
ಕಾಯಕ್ರಮದಲ್ಲಿ ಬಸವರಾಜ ಕೋಡಂಬಲ,ಡಾಗೌಸುದ್ದಿನ ತುಮಕೂರಕರ್, ಜಗದೀಶ್ ಕಡಬಗಾಂವ, ಚಂದ್ರಶೇಖರ್ ಪಾಟೀಲ, ಡಾ ಚಿ. ಸಿ.ನಿಂಗಣ, ಡಾ ಶಂಕರ ಬಾಳಿ, ಹಾಗೂ 200ಕ್ಕೂ ಹೆಚ್ಚಿನ ಉಪನ್ಯಾಸಕರು ಭಾಗವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…