ಸುಮ್ಮನೊಂದು ಇಳಿ ಸಂಜೆಯಲ್ಲಿ ಒದ್ದೆಯಾದ ಮನೆಸ್ಸಿನೊಂದಿಗೆ ಮನೆಯ ರಸ್ತೆಯ ಬದಿಗೆ ನಿಂತಿದ್ದೆ. ಮೋಡ ಕವಿಯಲು ಶುರುವಾಯ್ತು. ಮೋಡ ನೀರು ಉಯ್ಯಲು ಭರದ ಸಿದ್ಧತೆಗಳು ನಡೆಸಿಕೊಳ್ಳುತ್ತಿತ್ತು. ಒಂದೊಂದೇ ಹನಿ ಇಳಿಯೋಕೆ ಶುರುವಾಯ್ತು. ಅದಾಗಲೇ ಒದ್ದೆಯಾಗಿದ್ದ ನಾನು ಅಂಚು ಹುಡುಕುವ ಊಸಾಬಾರಿಗೆ ಹೋಗಲಿಲ್ಲ. ಮಳೆ ಜಿಟಿ ಜಿಟಿಯಾಗಿ ಬೀಳಲು ಆರಂಭವಾಯ್ತು. ಕೆಲವು ಸಾಲುಗಳ ನೆನಪಾಯ್ತು.
ಕತ್ತಲು ಕವಿಯಲು ಶುರುವಾಯ್ತು. ಚಂದಿರ ಬಂದು ಕೂತಿದ್ದ. ಮಳೆ ತೋಯ್ದಿತ್ತು. ಮೋಡ ನನ್ನ ಮಾತು ಕೇಳಿ ಓಡಿ ಹೋಗಿದ್ದ. ನಾನೂ ಸುಮ್ಮನಾದೆ. ಒಮ್ಮೊಮ್ಮೆ ಹೀಗೂ ಆಗುವುದುಂಟು. ಆ ಕ್ಷಣಕ್ಕೆ ನಿಮ್ಮ ಜೊತೆಗಿರಲು ಜನರಿಲ್ಲಿ ನೂರಾರು. ಆದರೆ ಅದಾದ ಮೇಲೆ..? ಅದಕ್ಕೆ ನಾನು ಮೋಡದ ಬಳಿ ಹೇಳಿದ್ದು, ಬಾ ನಿನಗೊಂದು ಗುಟ್ಟು ಹೇಳುತ್ತೇನೆ ಎಂದು. ಆ ಪುಣ್ಯಾತ್ಮ ಇಳಿದು ಬರಲೇ ಇಲ್ಲ. ಬಂದಿದ್ದರೆ, ಅಳವುದ ನಿಲ್ಲಿಸು ಓ ಮೋಡವೇ.. ಬಾ ಆಳೂದ ಕಲಿಸಿಕೊಡುತ್ತೇನೆ ಎಂದು ಹೇಳುವವನಿದ್ದೆ.
ಕಗ್ಗತ್ತಲ ರಾತ್ರಿ ಆಕಾಶ ತುಂಬಿ ಮಲಗಿರುವಾಗ ಪಿಸುಮಾತಿಗಾದರೂ ಹೆಗಲೊಂದು ಇರಬೇಕು..? ಅದಷ್ಟೇ ನನ್ನ ಬೇಡಿಕೆಯಾಗಿತ್ತು. ನಾನೊಂದು ತಪ್ಪು ಮಾಡಿದೆ. ಆರಂಭದಲ್ಲೇ ನನ್ನ ಜೋಳಿಗೆ ತುಂಬಾ ಪ್ರೀತಿ ತುಂಬಿಸಿ ಆಕೆಯ ಮುಂದೆ ಸುರಿದು ಬಿಟ್ಟೆ. ನನಗೆ ವ್ಯಾಪಾರ ವಹಿವಾಟು ಹೊಂದಾಣಿಕೆಯಾವುದಿಲ್ಲ. ಹತ್ತು ಕೊಟ್ಟರೆ ಇಪ್ಪತ್ತು ವಾಪಾಸು ಕೊಡುತ್ತೇನೆ. ಇನ್ನೆಲ್ಲಿ ವ್ಯಾಪಾರ ಯಶ ಕಂಡೀತು.? ಹಾಗೇ ಪ್ರೀತಿಯನ್ನೂ ಕುದುರಿಸಿಬಿಟ್ಟೆ. ನನಗೆ ಬಹಳ ದೊಡ್ಡ ನಷ್ಟವಾಯ್ತು.
ರಾತ್ರಿ ಮಲಗಿ ಹೇಳುವಾಗ ಹೀಗೆ ನೂರೆಂಟು ಯೋಗ್ಯವಲ್ಲದ ಮಾತುಗಳನ್ನು ನಾನು ನನ್ನ ಜತೆಗೇ ಆಡಿಕೊಳ್ಳುತ್ತೇನೆ. ಯಾಕೋ ಅವೆಲ್ಲವನ್ನೂ ಈ ಜಗದ ಮುಂದೆ ಬಿಚ್ಚಿಡಲು ಭಯ ನನಗೆ. ಅವಳೊಂದು ಅರ್ಥ ಮಾಡಿಕೊಳ್ಳಬೇಕಿತ್ತು. ಪ್ರೇಮವೆಂಬುದು ದೊಡ್ಡದು ಕನಾ. ಕಷ್ಟವಾಗಬಹುದೇನೋ..? ಆದರೂ ಅರ್ಥ ಮಾಡಿಕೊಳ್ಳಬೇಕಿತ್ತು. ಹೋಗಲಿ ಬಿಡಿ. ಉದುರಿದ ಮತ್ತು ಆಡಿದ ಮಾತು ಯಾವತ್ತು ವಾಪಾಸು ಸೇರುವುದಿಲ್ಲ.
ಕಾಲದ ಸರದಿಂದ ಉದುರಿ ಹೋದ ಮುತ್ತುಗಳೇ
ನೆನಪಿರಲಿ, ಉದುರಿದಷ್ಟು ಸಲೀಸಾಗಿ ನೀವು ಮತ್ತೆ ಸರ ಸೇರಿಕೊಳ್ಳಲಾರಿರಿ ನೀವು ಸೂಜಿಯ ಹುಡುಕುವ ಗೋಜಿಗೆ ಬೀಳಬೇಕು…
ಇದು ನಾನು ನನ್ನ ಬದುಕಿನಲ್ಲಿ ಕಂಡುಕೊಂಡ ಕಟು ಸತ್ಯ. ನಾನು ಈ ಜಗತ್ತಿನಲ್ಲಿ ಸುಳ್ಳು ಎಂಬುದೊಂದು ಇದೆ ಎಂದು ನಂಬುವುದಿಲ್ಲ. ಸತ್ಯದ ಹಲವು ಮುಖಗಳೇ ಎಲ್ಲವೂ. ಅದಕ್ಕೇ ಆಕೆಯನ್ನು ನಾನು ದ್ವೇಷಿಸುವುದಿಲ್ಲ. ಒಂದು ವೇಳೆ ನಾನು ಸುಳ್ಳು ಈ ಜಗದ ಮೇಲಿದೆ ಎಂದು ನಂಬಿ ಬಿಟ್ಟರೆ, ಆಕೆ ಮಾಡಿಟ್ಟು ಹೊರಟ ಗಾಯಗಳನ್ನು ಹೇಗೆ ಗುಣಪಡಿಸಲಿ. ಯಾವ ಮುಲಾಮು ಹಚ್ಚಲಿ.? ಆಕೆಯೂ ಸತ್ಯ. ನಾನೂ ಸತ್ಯ.
ಕಾಲ ನಮ್ಮನ್ನು ಎಳೆದಾಡಿ ಹಿಂಸಿಸಿ ಬಿಡುತ್ತವೆ. ನಿರ್ದಾಕ್ಷಿಣ್ಯವಾಗಿ ಹಿಗ್ಗಾಮುಗ್ಗ ಥಳಿಸಿ ಮುಖದ ರೂಪವನ್ನೇ ಬದಲಿಸಬಿಡುತ್ತವೆ. ಈಗೊಂದು ಕಥೆ ನೆನಪಾಗುತ್ತಿದೆ ನನಗೆ.
ಒಮ್ಮೆ ಜಿಂಕೆಯೊಂದು ಕಾಡಿನಲ್ಲಿ ವಿಹಾರ ಮಾಡಿಕೊಂಡು ಓಡಾಡುತ್ತಿತ್ತು. ಹುಲಿಯೊಂದು ಜಿಂಕೆಯನ್ನು ನೋಡುತ್ತಾ ಬೆನ್ನು ಬಿದ್ದಿತು. ಪಾಪ.. ಆ ಜಿಂಕೆ ಇದೂ ನನ್ನಂತೆಯೇ ಒಂದು ಪ್ರಾಣಿ. ಈ ಕಾಡು ನನ್ನಂತೆ ಆ ಹುಲಿಗೂ ಸಲ್ಲಬೇಕು ಎಂದು, ಹುಲಿ ಬರುವುದ ನೋಡಿ ನಿಂತಲ್ಲೇ ನಿಂತು ಕೊಂಡಿತು. ಹುಲಿ ಬಂದು ಹಠಾತ್ತನೇ ಜಿಂಕೆಯ ಕತ್ತು ಕಚ್ಚಿ ಆ ಹೊತ್ತಿನ ಹಿಟ್ಟಾಗಿಸಿ ಬಿಟ್ಟಿತು. ಜಿಂಕೆ ಆಡಿದ ಆ ಮಾತುಗಳು ಅಲ್ಲೇ ಅದೇ ಕಾಡಿನ ಮರ ಬಳ್ಳಿ ಹುಲ್ಲುಗಳ ಕಿವಿ ತಾಕಿ ಹಾಗೇ ಉಳಿದುಕೊಂಡಿತು.
ಇದಿಷ್ಟೇ ನೋಡಿ ವಿಚಾರ. ನೀವೇನು ಹೇಳುತ್ತೀರೋ ಅದನ್ನು ಕೇಳಿಸಿಕೊಳ್ಳಬೇಕಾದವರು ಕೇಳಿಸಿಕೊಳ್ಳದೆ ಹೋಗುತ್ತಾರೆ. ಅಲ್ಲಿ ಜಿಂಕೆ ತನ್ನವ ಎಂದು ಕೊಂಡ ಹುಲಿಯ ಬಗ್ಗೆ ನುಡಿದಿದ್ದು ಹುಲಿಗೆ ಕೇಳಿಸಲೇ ಇಲ್ಲ. ಮತ್ಯಾವುದೋ ಹುಲ್ಲು ಕಡ್ಡಿಗಳಿಗೆ ಕೇಳಿಸಿಕೊಂಡಿತು ಅಷ್ಟೇ. ನೋಡಿ ಹಲ್ಲು ಕಡ್ಡಿಗಳು ಜಿಂಕೆಯ ಆಹಾರ ಎಂದು ಮಾತ್ರ ಮರೆಯದಿರಿ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…