ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿ ಕುಮಾರ ನಾಯಕ್ ಸಾವಿನ ತನಿಖೆಗೆ ಪೋಷಕರ ಆಗ್ರಹ

ರಾಯಚೂರು: ವಿದ್ಯಾರ್ಥಿ ಕುಮಾರ ನಾಯಕ್ ನ ಅಸಹಜ ಸಾವಿನ‌ ಸಮಗ್ರ ತನಿಖೆ ಮತ್ತು ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು SFI ರಾಯಚೂರು ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಹಾಗೂ ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಸಾವನಪ್ಪಿದ ವಿದ್ಯಾರ್ಥಿ ನಾಯಕ್ ಅವರ ಪೋಷಕರೊಂದಿಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವಿ ಪಟ್ಟಣದ ಲೋಯೊಲ ಕಾಲೇಜಿನಲ್ಲಿ ಬಿ.ಕಾಂ ನಾಲ್ಕನೆಯ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿ ಕುಮಾರ್ ನಾಯಕ  ಮೇ 15 ರ ತಡ ರಾತ್ರಿ ಲೋಯೊಲ ಕಾಲೇಜ್ ಪಕ್ಕದ ಬೇವಿನ ಮರಕ್ಕೆ ನೇಣು ಹಾಕಿಕೊಂಡಿದಾನೆಂದು ಶಂಕಿಸಲಾಗಿತ್ತು. ಅದೇ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದ್ದು. ಇದು ಮೇಲ್ನೋಟಕ್ಕೆ ಆತ್ಮಹತ್ಯೆ  ಎಂದು ಕಂಡುಬಂದರೂ ಸಹ ಅಸಹಜ ಸಾವನಪ್ಪಿದ್ದು, ನಾಯಕ್ ಸಾವಿಗೆ ಹಲವು ರೀತಿಯ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ ಎಂದು ತಿಳಿಸಿದ್ದರು.

ನಮಗಿರುವ ಮುಖ್ಯ ಅನುಮಾನಗಳೆಂದರೆ ಹಾಲ್ ಟಿಕೇಟ್ ಬಂದಾಗಲೂ ಕೂಡ ಅದನ್ನು ನೀಡದೆ ಹಾಜರಾತಿಯ ಕೊರತೆಯ ನೆಪವೊಡ್ಡಿ ನಿರಾಕರಣೆ ಮಾಡಿದ್ದು ಶಿಕ್ಷಣ ವಿರೋಧಿ ಯಾಗಿದೆ. ವಿಶ್ವ ವಿದ್ಯಾಲಯವೇ ಹಾಲ್ ಟಿಕೇಟ್ ನೀಡಿರಬೇಕಾದರೆ ಕಾಲೇಜಿನವರು ಯಾಕೆ ತಡೆ ಹಿಡಿದರು?  ಈ ಸಾವಿನ ವಿಚಾರದ ಮಾಹಿತಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಕ್ಕೆ ಕಾಲೇಜು ನೀಡಿರುವುದಿಲ್ಲ ಎಂದು ಕುಲಪತಿಗಳೆ ಕಾಲೇಜಿಗೆ ಭೇಟಿ ನೀಡಿದಾಗ ಒಪ್ಪಿಕೊಂಡು ಕಾಲೇಜಿನ ಮೇಲೆ ಅಸಮಾಧಾನ ಹೊರಹಾಕಿದ್ದಾರು ಎಂದು ತಿಳಿಸಿದ್ದರು.

ಇನ್ನೂ ನೇಣು ಬಿಗಿದ ಸ್ಥಿತಿಯಲ್ಲಿದ್ದ ಆತನ ಶವ ಗಮನಿಸಿದಾಗ ಆತನೇ ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಎಂದು ಪೋಷಕರು ಹಾಗೂ ಸಮಿತಿಯ ಸದಸ್ಯರು ವಿಶ್ವಸ ವ್ಯಕ್ತಪಡಿಸಿದ್ದರು.

ನಾಯಕ್ ವಾಸಿಸುತ್ತಿದ್ದ  ಹಾಸ್ಟೇಲ್ ನಲ್ಲಿ ಸಿ.ಸಿ.ಕ್ಯಾಮರಾಗಳನ್ನು ಬಂದ್‌ ಮತ್ತು ಧ್ವಂಸ ಮಾಡಲಾಗಿದೆ. ಇತನನ್ನು ಯಾರಾದರೂ ಹತ್ಯೆ ಗೈದಿರಬಹುದು ಎಂದು ಅನುಮಾನ ಕಾಡುತ್ತಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆಯ ನಡೆಸುವ ಮೂಲಕ ಸತ್ಯಾ ಸತ್ಯತೆ ಹೋರತರಬೇಕೆಂದು ಅವರು ಒತ್ತಾಯಿದರು.

ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಪ್ರಾಂಶಿಪಾಲರು, ಕ್ಲರ್ಕ್ ರನ್ನು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಮೇಲ್ವಿಚಾರಕ, ಸಿಬ್ಬಂದಿ ಗಳನ್ನು ಸೂಕ್ತ ತನಿಖೆಗೆ ಒಳಪಡಿಸಿ, ಕಾಲೇಜು ಮತ್ತು ಹಾಸ್ಟೇಲ್ ನ ಸಿ.ಸಿ ಕ್ಯಾಮರಗಳ ಮಾಹಿತಿ ಸಂಗ್ರಹಿ ಅಪರಾಧಿಯನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ FIR ನಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿ, ಪ್ರಕರಣ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ವಾರ ಮಾನ್ವಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚಿರಿಕೆ ನೀಡಿದ್ದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ತಂದೆ ಜಮದಗ್ನಿ ಚಿಕ್ಕದಿನ್ನಿ, ವಿದ್ಯಾರ್ಥಿ ತಾಯಿ ಗಂಗಮ್ಮ , ವಿದ್ಯಾರ್ಥಿ ಚಿಕ್ಕಪ್ಪ ಸೇರಿದಂತೆ SFI ಮುಖಂಡ ಲಿಂಗರಾಜ ಕಂದಗಲ್, ಜುನೈದ್ ಬಾಗ್ದಾದ್, ಚಂದ್ರಶೇಖರ ಯಲ್ಹೇರಿ ಸಿರವಾರ, ಮಿಥುನ್ ರಾಜ್. DYFI ಮುಖಂಡ ಸಿದ್ದಪ್ಪ ನಾಯಕ್ ಇದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

4 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

7 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

12 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

14 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420