ಶಹಾಬಾದ: ನಗರದ ಜೆಡಿಎಸ್ ಪಕ್ಷದ ಅಧ್ಯಕ್ಷ ರಾಜಮಹ್ಮದ್ ರಾಜಾ ಅವರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರಸಭೆಯ ನೂತನ ಪೌರಾಯುಕ್ತ ಕೆ.ಗುರಲಿಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರಸಭೆಯಲ್ಲಿ ಸಾರ್ವಜನಿಕರಿಗೆ ಆನ್‌ಲೈನ್ ಖಾತಾಗಳನ್ನು ವಿತರಣೆ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅದನ್ನು ಸರಳವಾಗಿ ಸಿಗುವಂತೆ ಮಾಬೇಕು. ವರ್ಗಾವಣೆ/ವಿರಾಸತ ಸರಳಗೊಳಿಸಬೇಕು. ಈಗಾಗಲೇ ಕೊಳಚೆ ಪ್ರದೇಶ ಮತ್ತು ಅಭಿವೃದ್ಧಿ ಬಡಾವಣೆಯ ದಾಖಲಾತಿ ಸಲ್ಲಿಸಿದ್ದು, ಅದರ ವರ್ಗಾವಣೆ ಹಾಗೂ ಖಾತ ಪ್ರತಿ ನೀಡಬೇಕು. ನೊಂದಣಿ ಕಾಗದ ಪತ್ರದ ವರ್ಗಾವಣೆ ಶುಲ್ಕ ಹಾಗೂ ಕಟ್ಟಡ ಪರವಾನಗಿ ಶುಲ್ಕ ಕಡಿಮೆ ಮಾಡಬೇಕು.
ಸಾರ್ವಜನಿಕರಿಗೆ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಯ ನಿರ್ಮಿಸಿ ಒಡಬೇಕು. ಕುಡಿಯುವ ನೀರನ್ನು ಶುದ್ಧಿಕರಿಸಬೇಕು ಮತ್ತು ದರ ಕಡಿಮೆಗೊಳಿಸಬೇಕು. ನಾಲಾ ಸೇತುವೆ ಕಳಪೆ ಮಟ್ಟ ಮತ್ತು ಅವೈಜ್ಞಾನಿಕವಾಗಿ ಮಾಡಿದ್ದು, ಅದರ ಬಿಲ್ಲು ತಡೆ ಹಿಡಿದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖಂಡರಾದ ಲೋಹಿತ್ ಕಟ್ಟಿ,ವಿಜಯಲಕ್ಷ್ಮಿ ಬಂಗರಗಿ,ಅಮ್ಜದ್ ಹುಸೇನ್,ಬಸವರಾಜ ಮಯೂರ,ಅಬ್ದುಲ್ ರಶೀದ್,ಸುನೀಲ ಚವ್ಹಾಣ, ನವನಾಥ ಕುಸಾಳೆ,ಯೂಸುಫ್ ಸಾಹೇಬ, ಸುಭಾಷ ಸಾಕ್ರೆ, ಅಬ್ದುಲ್ ಜಬ್ಬಾರ್, ಹೀರಾ ಪವಾರ,ಮುಜೀಬ, ಸೂರ್ಯವಂಶಿ, ಹನುಮಾನ ಕಾಂಬಳೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…