ರಾಯಚೂರು: ಕವಿತಾಳ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಕಿರಾಣಿ ದಿನಸಿ ಮತ್ತು ತರಕಾರಿ ಮಾರಾಟ ಮಾಡುವ ಮಾರಾಟಗಾರರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಲು ಒತ್ತಾಯಿಸಿ SFI & DYFI ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕೋರೋನಾ ವೈರಸ್ (ಕೋವೀಡ್19) ಮಹಾಮಾರಿ ರೋಗದಿಂದ ಸಾಮಾನ್ಯ ದಿನಗಳಿಗಿಂತಲೂ ಈಗ ನೀರಿನ ಸಮಸ್ಯೆ ತೀವ್ರವಾಗಿದೆ ಇತ್ತ ಲಾಕ್ ಡೌನ್ ನಿಂದ ಮನೆಯಿಂದ ಹೊರಬರಲು ಆಗಿತ್ತಿಲ್ಲ ಆತ್ತ ಮನೆಯ ಮತ್ತು ಓಣಿಯ ನಲ್ಲಿಗೆ ನೀರು ಬರುತ್ತಿಲ್ಲ ಇದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ಬಂದರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಅಲ್ಲದೆ ಲಾಕ್ ಡೌನ್ ನಿಂದಾಗಿ ಜನತೆಯು ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಬದುಕಿನ ಬಂಡಿ ಸಾಗಿಸಲು ಹರಸಹಾಸ ಪಡುತ್ತಿದ್ದಾರೆ. ಆದರೆ ಪಟ್ಟಣದ ಕಿರಾಣಿ, ದಿನಸಿ ಮತ್ತು ತರಕಾರಿ ಮಾಂಸ ಮಾರಾಟಗಾರರು ಸಾಮಾನ್ಯ ದಿನಗಳಗಿತ ಅಧಿಕ ಬೆಲೆಗೆ ಆಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಇದು ಕೂಡ ತಮ್ಮ ಗಮನಕ್ಕೆ ಇರಬಹುದೆಂದು ಭಾವಿಸುತ್ತೇವೆ.
ಕೂಡಲೇ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕು ಹಾಗೂ ಕಿರಾಣಿ, ದಿನಸಿ ಮತ್ತು ತರಕಾರಿ ಮಾರಾಟಗಾರರಿಗೆ ಒಂದು ನಿರ್ಧಿಷ್ಟ ಬೆಲೆಯನ್ನು ನಿಗದಿ ಮಾಡಿ ತಮ್ಮ ಕಾರ್ಯಾಲಯದ ಮೂಲಕ ಆದೇಶ ಮಾಡಬೇಕೆಂದು, ಜನ ಸಾಮಾನ್ಯರ ಇತರ ಗಂಭಿರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು.
ಪಟ್ಟಣದ ಎಲ್ಲಾ ವಾರ್ಡ್ ಗಳ ನೀರಿನ ಸಮಸ್ಯೆಯನ್ನು ಬಗೆಹರಿಸಿ ನಿತ್ಯ ವು ಒಂದು ಬಾರಿ ನೀರು ಬಿಡುವಂತೆ ಮಾಡಬೇಕು. ಪಟ್ಟಣದ ಎಲ್ಲಾ ಕಿರಾಣಿ, ದಿನಸಿ ಮತ್ತು ತರಕಾರಿ ಮಾರಾಟ ಗಾರರಿಗೆ ತಾವು ಸೂಚಿಸಿದ ನಿಗದಿತ ಬೆಲೆಯಲ್ಲೆ ಮಾರಾಟ ಮಾಡಲು ಆದೇಶ ಹೊರಡಿಸಬೇಕು. ಪಟ್ಟಣದ ಎಲ್ಲಾ ವಾರ್ಡ್ ಗಳ ರಸ್ತೆ, ಚರಂಡಿ ಸ್ವಚ್ಛತೆ, ವಿದ್ಯುತ್ ದೀಪ ಅಳವಡಿಕೆ (ರಿಪೇರಿ) ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ನಿರ್ಲಕ್ಷ್ಯ ತೋರಿದಲ್ಲಿ SFI & DYFI ನೇತೃತ್ವದಲ್ಲಿ ಪಂಚಾಯತಿ ಮುಂದೆ ಧರಣಿಗೆ ಮುಂದಾಗಬೇಕಾಗುತ್ತದೆ ಎಂದು ಈ ಮನವಿ ಮುಖಾಂತರ ಮಾಡಿ ಎಚ್ಚರಿಸಿದರು.
ಈ ಸಂಧರ್ಭದಲ್ಲಿ SFI ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ SFI & DYFI ಮುಖಂಡರಾದ ವೆಂಕಟೇಶ, ನಾಗಮೋಹನ್ ಸಿಂಗ್, ಯಾಸೀನ್, ಶರಣು, ಕುಪ್ಪಣ್ಣ, ಮೌನೇಶ, ಅಬ್ದುಲ್, ದೇವರಾಜ್, ಹುಲುಗಪ್ಪ, ನಿಂಗಪ್ಪ, ಸುರೇಶ ಸೇರಿದಂತೆ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…