ಬಿಸಿ ಬಿಸಿ ಸುದ್ದಿ

ಅಂಬೇಡ್ಕರ್ ಪ್ರಜ್ಞೆ ವಿಸ್ತರಿಸುವ ಕೃತಿ


ಭಾರತೀಯ ಸಮಾಜದ ಬಗ್ಗೆ ಅತಿಯಾಗಿ ಚಿಂತಿಸಿದ ಮಹಾತ್ಮ ಗೌತಮ ಬುದ್ಧನ ತರುವಾಯ ೧೨ನೇ ಶತಮಾನದಲ್ಲಿ ಬಸವಣ್ಣನವರನ್ನು ಬಿಟ್ಟರೆ ೨೧ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾತ್ರ ಸಾಕಷ್ಟು ಚಿಂತಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಿದ ಮಹಾತ್ಮ ಗಾಂಧೀಜಿ ಮುಂದಿನ ಜನ್ಮದಲ್ಲಿ ಅಸ್ಪೃಶ್ಯನಾಗಿ ಜನಿಸಲು ಬಯಸುತ್ತೇನೆ ಎಂದು ಹೇಳಿದರೆ, ಇದೇ ಜನ್ಮದಲ್ಲೇ ಅಸ್ಪೃಶ್ಯನಾಗಿ ಹುಟ್ಟಿದ್ದು ನನ್ನ ಪುಣ್ಯ ಎಂದು ಹೇಳುವ ಮೂಲಕ ಇಡೀ ದಮನಿತ ಲೋಕದ ದನಿ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಸಾಮಾನತೆಯಿಲ್ಲದೆ ರಾಜಕೀಯ, ಆರ್ಥಿಕ ಸಮಾನತೆ ವ್ಯರ್ಥ. ಭಾರತವನ್ನು ಹಾಳು ಮಾಡಿದವರು ಬ್ರಿಟೀಷ್‌ರು, ಮುಸ್ಲಿಂರಲ್ಲ. ಈ ದೇಶದ ಪುರೋಹಿತಶಾಹಿ ವ್ಯವಸ್ಥೆಯೇ ನಾಶ ಮಾಡಿದೆ ಎಂದು ಹೇಳಿ ತರತಮ ಭಾವನೆ ಹುಟ್ಟು ಹಾಕುವ ಮನುಸ್ಮೃತಿಯನ್ನು ಸುಟ್ಟು ಹಾಕಿದವರು ಡಾ. ಬಿ.ಆರ್. ಅಂಬೇಡ್ಕರ್ ಅವರು.
ಯಾವ ದೇಶದಲ್ಲಿ ದೇವಾಲಯಗಳ ಗಂಟೆ ಹೆಚ್ಚಾಗಿ ಬಾರಿಸುತ್ತವೆಯೋ ಆ ದೇಶ ಹಿಂದುಳಿಯುತ್ತದೆ. ಯಾವ ದೇಶದಲ್ಲಿ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶ ಪ್ರಗತಿ ಹೊಂದುತ್ತದೆ ಎಂದು ಹೇಳಿದ ಅವರು, ಸರ್ವರಿಗೂ ಸಮಾನ ಶಿಕ್ಷಣ ಸಿಗಬೇಕು. ಶಿಕ್ಷಣ-ಸಂಘಟನೆ-ಹೋರಾಟವೇ ದಲಿತ ಹಿಂದುಳಿದವರ ಉಸಿರಾಗಬೇಕು ಎಂದು ಹೇಳಿದ್ದಾರೆ.

ಧರ್ಮ ಇರುವುದು ಮನಷ್ಯನಿಗಾಗಿ ವಿನಃ ಧರ್ಮಕ್ಕಾಗಿ ಮಾನುಷ್ಯನಿರಬೇಕಿಲ್ಲ. ಮಾನವೀಯತೆ ಇಲ್ಲದ ಧರ್ಮ ಧರ್ಮವಲ್ಲ. ದೇವರು, ಧರ್ಮದ ಹೆಸರಿನಲ್ಲಿ ಸಾಮಾನ್ಯರನ್ನು ಶೋಷಿಸುವುದು ತಪ್ಪು. ಬಡತನ, ಅನಕ್ಷರತೆ, ಜಾತಿ ಪದ್ಧತಿಗಳು ಪ್ರಜಾಪ್ರಭುತ್ವ ದೇಶದ ಶತ್ರುಗಳು. ವೈಯಕ್ತಿಕ ಹಿತ ಬಂದಾಗ ನಾನು ದೇಶದ ಹಿತ ಎನ್ನುತ್ತೇನೆ. ಹಾಗೆಯೇ ದಲಿತರ, ದೇಶದ ಪ್ರಶ್ನೆ ಬಂದಾಗ ನಾನು ದಲಿತರ ಹಿತವನ್ನೇ ಬಯಸುತ್ತೇನೆ ಎಂದು ಘಂಟಾಘೋಷವಾಗಿ ಘೋಷಿಸಿದ್ದಾರೆ.

ಹೀಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಇಲ್ಲದ ಭಾರತವನ್ನು ಊಹಿಸಲೂ ಕೂಡ ಅಸಾಧ್ಯ. ಅವರನ್ನು ಹೊರಗಿಟ್ಟು ನೋಡಿದರೆ ಭಾರತಕ್ಕೆ ಅರ್ಥವೇ ಇರುವುದಿಲ್ಲ. ಬುದ್ಧ, ಬಸವಣ್ಣನ ಆಶಯಗಳಿಗೆ ಕಾನೂನು ಚೌಕಟ್ಟು ಒದಗಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾರಣರಾದ ಡಾ. ಅಂಬೇಡ್ಕರ್ ಅವರು “ನೆಲದಲ್ಲಿ ಹುಟ್ಟಿದ ಬಸವನ ಹುಳು ಮುಗಿಲಿಗೆ ಹಾರಲು ಪ್ರಯತ್ನಿಸುವಂತೆ” ಇಡೀ ಜಗತ್ತೇ ನಿಬ್ಬೆರಗಾಗುವಂತಹ ಅಪಾರ ಜ್ಞಾನ ಸಂಪಾದನೆ ಮಾಡಿದ್ದರು. ಈ ಮಾತಿಗೆ ಸಾಕ್ಷಿ ಎಂಬಂತೆ ಇಂದು ಅವರ ಜಯಂತ್ಯುತ್ಸವ ದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇಂತಹ ಒಬ್ಬ ಮಹಾನ್ ಮೇದಾವಿಯ, ದಿವ್ಯ ಚೇತವೊಂದರ ಬದುಕು ಹಾಗೂ ಬೋಧನೆಯನ್ನು ಕುರಿತು ಒಂದು ಲೇಖನದಲ್ಲಿ ಇಲ್ಲವೇ ಒಂದು ಕೃತಿಯಲ್ಲಿ ಹಿಡಿದಿಡುವುದು ಅಷ್ಟು ಸುಲಭದ ಕೆಲಸವಲ್ಲ. ಇಂತಹ ಕಷ್ಟದ ಕೆಲಸಕ್ಕೆ ಲೇಖಕ ಪ್ರೊ. ಎಚ್.ಟಿ. ಪೋತೆ ಅವರು ” ಅಂಬೇಡ್ಕರ್ ಭಾರತ” ಎಂಬ ಕೃತಿಯ ಮೂಲಕ ಕೈ ಹಾಕಿದ್ದಾರೆ. ಭಾರತದ ಜೀವದ್ರವ್ಯ ಎನಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಿಚ್ಛಿನ್ನ ಎನ್ನುವಂತೆ ಭಾಷಣ, ವಿಚಾರ ಸಂಕಿರಣ, ಸಂವಾದ, ಚರ್ಚೆ, ಚಿಂತನ, ಮಂಥನದಂತಹ ಕಾರ್ಯಕ್ರಮಗಳು ಜಗತ್ತಿನೆಲ್ಲೆಡೆ ಜರುಗುತ್ತಿವೆ. ಇವರ ಕುರಿತು ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಮುಂತಾದ ಭಾಷೆಗಳಲ್ಲಿ ಈಗಾಗಲೇ ರಾಶಿಗಟ್ಟಲೇ ಪುಸ್ತಕಗಳು ಹೊರ ಬಂದಿವೆ. ಆದರೆ ಅಂಬೇಡ್ಕರ್ ಪೂರ್ವ ಭಾರತ, ಅಂಬೇಡ್ಕರ್ ಭಾರತ, ಅಂಬೇಡ್ಕರ್ ಸಮಕಾಲೀನ ಭಾರತ, ಅಂಬೇಡ್ಕರೋತ್ತರ ಭಾರತ ಎಂದು ನಾಲ್ಕು ಅಧ್ಯಾಯಗಳನ್ನಾಗಿ ವಿಂಗಡಿಸಿ ಅಂಬೇಡ್ಕರ್ ದೃಷ್ಟಿಯ ಭಾರತವನ್ನು ವಿಭಿನ್ನವಾಗಿ ಬಹುಶಃ ಈವರೆಗೆ ಯಾರೂ ನೋಡಿರಲಿಕ್ಕಿಲ್ಲ.

ಅಂಬೇಡ್ಕರ್ ಪೂರ್ವದಲ್ಲಿದ್ದ ಬುದ್ಧ, ಮಹಾವೀರ, ಬಸವಣ್ಣ, ಕಬೀರ, ಕನಕದಾಸ, ಜ್ಯೋತಿಬಾ ಫುಲೆ ಅವರು ಕೈಗೊಂಡಿದ್ದ ಜನಮುಖಿ ಕೆಲಸಗಳೇನು? ಅವುಗಳ ಸ್ವರೂಪ ಹೇಗಿದ್ದವು? ಅವರುಗಳ ಪರಿಶ್ರಮ, ಪ್ರಯತ್ನಗಳೇನು? ಅವರುಗಳು ಬಿಟ್ಟು ಹೋದ ಕೆಲಸವನ್ನು ಅಂಬೇಡ್ಕರ್ ಹೇಗೆ ಸಾಧ್ಯವಾಗಿಸಿದರು. ಇವರೆಲ್ಲರ ಕನಸಿನ ರಥವನ್ನು ಅಂಬೇಡ್ಕರ್ ಹೇಗೆ ಮುಂದುವರಿಸಿಕೊಂಡು ಬಂದರು. ಅವರು ಮತ್ತು ಇವರಿಗಿದ್ದ ಇತಿಮಿತಿಗಳೇನು? ಎಂಬುದನ್ನು ಅವರ ಸಂದೇಶ, ವಚನ, ವಿಚಾರಗಳನ್ನು ಸಾಹೋದಾರಣವಾಗಿ ವಿವರಿಸಿದ್ದಾರೆ.

ಅಂಬೇಡ್ಕರ್ ಭಾರತದಲ್ಲಿ ಅಂಬೇಡ್ಕರ್ ಕಾಲದ ಸಮಾಜ, ಶಿಕ್ಷಣ, ಚಳವಳಿಗಳನ್ನು ತುಂಬಾ ಸೂಕ್ಷ್ಮವಾಗಿ ಗುರುತಿಸಿರುವ ಲೇಖಕರು, ಇವೆಲ್ಲವೂಗಳಿಗೆ ಅಂಬೇಡ್ಕರ್ ಅವರ ಸ್ಪಂದನೆ ಹೇಗಿತ್ತು? ಎಂಬುದನ್ನು ಬೌದ್ಧ ಧರ್ಮದೆಡೆಗೆ, ಅಂಬೇಡ್ಕರ್ ಸ್ತ್ರೀವಾದಿ ದೃಷ್ಟಿ ಲೇಖನಗಳ ಮೂಲಕ ಅತ್ಯಂತ ಸಮರ್ಥವಾಗಿ ಉತ್ತರಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಸಯ್ಯಾಜಿರಾವ ಗಾಯಕವಾಡ ರಾಜ ಮಹಾರಾಜರ ವ್ಯಕ್ತಿತ್ವದ ಜೊತೆಗೆ ಲೋಕಮಾನ್ಯ ತಿಲಕ್, ಪರಿಯಾರ್, ಗಾಂಧೀಜಿ, ಲೋಹಿಯಾ ಮುಂತಾದವರ ಒಲವು ನಿಲುವುಗಳೇನು? ಇದಕ್ಕೆ ಅಂಬೇಡ್ಕರ್ ಅವರ ಅಭಿಪ್ರಾಯ-ಭಿನ್ನಾಭಿಪ್ರಾಯಗಳೇನಿದ್ದವು ಎಂಬುದನ್ನು ಅಂಬೇಡ್ಕರ್ ಸಮಕಾಲೀನ ಭಾರತದಲ್ಲಿ ದಾಖಲಿಸಿದ್ದಾರೆ.

ಅಂಬೇಡ್ಕರೋತ್ತರ ಭಾರತ ಎಂಬ ಅಧ್ಯಾಯದಲ್ಲಿ ಭೀಮಸೇನೆ, ಮೀಸಲಾತಿ, ಒಳ ಮೀಸಲಾತಿ ತಲ್ಲಣಗಳ ಬಗ್ಗೆ ಬರೆಯುತ್ತ ಅಂಬೇಡ್ಕರ್ ತರುವಾಯದ ಹದಗೆಟ್ಟ ರಾಜಕಾರಣ, ಅಂಬೇಡ್ಕರ್ ತರುವಾಯದ ದಲಿತ ಲೋಕ ಹೇಗೆ ದಿಕ್ಕು ತಪ್ಪುತ್ತಿದೆ ಎಂಬುದರ ದುರಂತ ದಿನಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್ ಅವರು ತಂದು ನಿಲ್ಲಿಸಿದ ಹೋರಾಟದ ರಥವನ್ನು ಕಾಸ್ನಿರಾಂ, ಬಿ. ಬಸವಲಿಂಗಪ್ಪ,, ಬಿ. ಶ್ಯಾಮಪ್ರಸಾದ, ದೇವರಾಯ ಇಂಗಳೆ ಮುಂತಾದವರು ಎಳೆದಿರುವುದನ್ನು ನೆನಪಿಸುತ್ತಲೇ ಬಹು ಸಂಖ್ಯೆಯ ದಲಿತ ನಾಯಕರಲ್ಲಿ ರಾಮವಿಲಾಸ ಪಾಸ್ವಾನ್, ಮಾಯಾವತಿ, ಅಠವಲೆ, ಜ್ಯೋಗೇಂದ್ರ ಕವಾಡೆ, ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಯವರು ಅಂಬೇಡ್ಕರ್ ಅವರ ಆಲೋಚನೆಗಳನ್ನು ಸಮಾಜಕ್ಕೆ ಹೇಗೆ ಮುಖಾಮುಖಿಗೊಳಿಸುತ್ತಿದ್ದಾರೆ ಎಂಬುದಕ್ಕೆ ಕಲಬುರಗಿಯಲ್ಲಿ ನಿರ್ಮಿಸಿರುವ ಬುದ್ಧ ವಿಹಾರದ ಉದಾಹರಣೆ ಕೊಡುತ್ತಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆವರೆಗಿನ ಈ ಚಲನೆಯನ್ನೇ ಅಂಬೇಡ್ಕರ್ ಭಾರತ ಎಂದು ಗುರುತಿಸಿದ್ದಾರೆ. ಅಂಬೇಡ್ಕರ್ ಎಂಬ ಮಹಾಪ್ರಜ್ಞೆಯ ಮುಖೇನ ನಾವೆಲ್ಲ ರೂಪುಗೊಳ್ಳಬೇಕು ಎಂಬ ಸದಾಶಯ ಹೊಂದಿದ್ದಾರೆ. ನಮ್ಮ ಬದುಕಿನ ಎಲ್ಲ ಆಯಾಮಗಳ ಬಗ್ಗೆ ಚಿಂತಿಸಿದ ಅಂಬೇಡ್ಕರ್ ಅವರನ್ನು ಎಲ್ಲರೂ ಅಪ್ಪಿಕೊಳ್ಳೋಣ. ಒಪ್ಪಿಕೊಳ್ಳೋಣ ಎಂಬುದನ್ನು ಈ ಕೃತಿಯ ಮೂಲಕ ಮನಗಾಣಿಸಿದ್ದಾರೆ. ಲೋಕವನ್ನು ಸರಿಯಾಗಿ ವಿವರಿಸಿಕೊಳ್ಳುವ ಮೂಲಕ ನಮ್ಮ ಬದುಕಿನ ನಡೆ ತೀರ್ಮಾನವಾಗಬೇಕು ಎಂಬುದನ್ನು ಬಹಳ ಸೂಚ್ಯವಾಗಿ ಹೇಳುವ ಲೇಖಕರು, ಪ್ರಗತಿಪರ ಚಿಂತಕರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಭಾರತವನ್ನು ಎಲ್ಲರೂ ಸೇರಿ ನಿರ್ಮಿಸುವ ಆಶಾಭಾವನೆಯನ್ನು “ಅಂಬೇಡ್ಕರ್ ಭಾರತ”ದ ಮೂಲಕ ಬಹಳ ವಿನೂತನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

-ಶಿವರಂಜನ್ ಸತ್ಯಂಪೇಟೆ
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

37 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago