ಬಿಸಿ ಬಿಸಿ ಸುದ್ದಿ

ಮತ ಎಣಿಕೆಗೆ ಸಕಲ ಸಜ್ಜು: ಪೊಲೀಸರು ಸೇರಿ 4000 ಸಿಬ್ಬಂದಿ ನಿಯೋಜನೆ

ಕಲಬುರಗಿ: ಗುಲಬರ್ಗಾ ಲೋಕಸಭಾ ಹಾಗೂ ೪೨-ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುವ ಗುಲಬರ್ಗಾ ವಿಶ್ವವಿದ್ಯಾಲಯದ ೫ ಕಟ್ಟಡಗಳಲ್ಲಿ ಮೇ 23 ರಂದು ಬೆಳಗ್ಗೆ 8 ಗಂಟೆಯಿಂದ ನಡೆಯಲಿದ್ದು, ಮತ ಎಣಿಕೆಗಾಗಿ ಕೈಗೊಂಡ ಪೂರ್ವಸಿದ್ಧತೆಯನ್ನು ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಟಕೇಶಕುಮಾರ, ಗುಲಬರ್ಗಾ ಲೋಕಸಭಾ ಮತಕ್ಷೇತ್ರದ ಮತ ಎಣಿಕೆ ವೀಕ್ಷಕರಾದ ಸೋನಾಲಿ ಪೋಂಕ್ಷೆ, ಬ್ರಿಟೀಶಚಂದ್ರ ಬರ್ಮನ್ ಹಾಗೂ ಫೂಲ ಸಿಂಗ್ ಧುರ್ವ ಹಾಗೂ ಚಿಂಚೋಳಿ ಕ್ಷೇತ್ರದ ವೀಕ್ಷಕರಾದ ವಿ.ನಾನ ರಾಜು ಅವರು ವಿವಿಧ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು, ಮತ ಎಣಿಕೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆಯಿಂದ ಸಜ್ಜುಗೊಂಡಿದೆ. ಮತ ಎಣಿಕೆ ಕಾರ್ಯಕ್ಕೆ ಸುಮಾರು ೨೦೦೦ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೂರು ಹಂತದ ಭದ್ರತಾ ಸರ್ಪಗಾವಲು ಇರಲಿದೆ. ಭದ್ರತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಎಸ್.ಪಿ., 10 ಜನ ಡಿವೈಎಸ್ಪಿ, ೨೫ ಪೊಲೀಸ್ ಇನ್ಸಪೆಕ್ಟರ್,50 ಪಿ.ಎಸ್.ಐ., 130 ಎ.ಎಸ್.ಐ., ಸಿ.ಪಿ.ಎಂ.ಎಫ್ 181 ಜವಾನರು, 4 ಕೆ.ಎಸ್.ಆರ್.ಪಿ. ತುಕಡಿ, 15 ಡಿಎಆರ್ ತುಕಡಿ, 5 ಸ್ಟ್ರಾಟಿಜಿಕ್ ಭದ್ರತಾ ಪಡೆ ಹಾಗೂ 1000 ಸಿವಿಲ್ ಪೊಲೀಸ್ ಸೇರಿದಂತೆ ಒಟ್ಟಾರೆ 2000 ಜನ ಭದ್ರತಾ ಸಿಬ್ಬಂದಿಗಳು ಮತ ಎಣಿಕೆ ಸುತ್ತಮುತ್ತ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಗುಲಬರ್ಗಾ ಲೋಕಸಭಾ ಚುನಾವಣೆಯ ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಹಾಗೂ ಚಿಂಚೋಳಿ ಉಪ ಚುನಾವಣಾ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗಾಗಿ ೧೪ ಟೇಬಲ್‌ಗಳನ್ನು ಹಾಕಲಾಗಿದೆ. ಪೋಲಿಂಗ್ ಏಜೆಂಟ್ ಹಾಗೂ ಇತರೆ ಸಿಬ್ಬಂದಿ ಪ್ರವೇಶಾವಕಾಶಕ್ಕೆ ಪ್ರತ್ಯೇಕ ಬ್ಯಾರಿಕೇಡ್ ಹಾಕಲಾಗಿದೆ. ಮೊದಲನೇಯದಾಗಿ ಅಂಚೆ ಮತಗಳ ಎಣಿಕೆ ಆರಂಭಿಸಲಾಗುವುದು. ಇದರ ಜೊತೆಯಲ್ಲಿ ಇವಿಎಂ ಮತ ಎಣಿಕೆ ಕಾರ್ಯವು ನಡೆಯಲಿದೆ. ಅಂಚೆ ಮತ, ಇಟಿಪಿಬಿಎಸ್ (Electronic Transmitted Postal Ballot Service Voters) ) ಹಾಗೂ ಇವಿಎಂ ಮತಗಳ ಎಣಿಕೆಯ ನಂತರ ಪ್ರತಿ ವಿಧಾನಸಭಾವಾರು 5 ವಿವಿಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಮತ ಎಣಿಕೆಗೆ ಒಳಪಡಿಸಲಾಗುವುದು. ಈ ಬಾರಿ ವಿವಿಪ್ಯಾಟ್ ಎಣಿಕೆ ಮಾಡುತ್ತಿರುವುದರಿಂದ 3-4 ಗಂಟೆ ಚುನಾವಣಾ ಫಲಿತಾಂಶ ತಡವಾಗುವ ನಿರೀಕ್ಷೆಯಿದೆ. ಗರಿಷ್ಠ 20 ಡೌಂಡ್ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿ ಹಾಗೂ ಪೋಲಿಂಗ್ ಏಜೆಂಟ್‌ಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಲಿಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುತ್ತಲೆ ನಿಗಧಿತ ಸ್ಥಳಕ್ಕೆ ಹೋಗಲು ಅನುಕೂಲವಾಗುವಂತೆ ಸಂಕೇತ ಬೋರ್ಡುಗಳು ಅಲ್ಲಲ್ಲಿ ಸಹ ಅಳವಡಿಸಲಾಗಿದೆ ಎಂದರು.

ಕಲಬುರಗಿ ನಗರದಿಂದ ಸೇಡಂ ಕಡೆಗೆ ಹೋಗುವಾಗ ಸಿಗುವ ವಿಶ್ವವಿದ್ಯಾಲಯದ ಮೊದಲನೇ ಗೇಟ್‌ನಲ್ಲಿ ಅಭ್ಯರ್ಥಿ, ಕೌಂಟಿಂಗ್ ಏಜೆಂಟ್ ಹಾಗೂ ಚುನಾವಣಾ ಎಜೆಂಟ್‌ಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಎರಡನೇ ಗೇಟ್‌ನಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಎಣಿಕೆ ಸಿಬ್ಬಂದಿಗಳಿಗೆ ಪ್ರವೇಶವಿರುತ್ತದೆ. ಅಭ್ಯರ್ಥಿ, ಚುನಾವಣಾ ಏಜೆಂಟ್ ಅಥವಾ ಕೌಂಟಿಂಗ್ ಏಜೆಂಟರ ವಾಹನಗಳಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರವೇಶಾವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.

ಮತ ಎಣಿಕೆ ಎಲ್ಲೆಲ್ಲಿ:- ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರೀಕ್ಷಾ ವಿಭಾಗದ ಹಾಲ್‌ನಲ್ಲಿ ಚಿತ್ತಾಪುರ, ಗುಲಬರ್ಗಾ ಗ್ರಾಮೀಣ ಹಾಗೂ ಜೇವರ್ಗಿ ವಿಧಾನಸಭಾ ಕ್ಷೇತ್ರ, ಒಳಾಂಗಣ ಕ್ರೀಡಾಂಗಣದಲ್ಲಿ ಗುಲಬರ್ಗಾ ಉತ್ತರ ಮತ್ತು ಗುರುಮಿಠಕಲ್ ಮತಕ್ಷೇತ್ರ, ಕನ್ನಡ ಅಧ್ಯಯನ ಕೇಂದ್ರ ಸಭಾಂಗಣದ ನೆಲಮಹಡಿಯಲ್ಲಿ ಸೇಡಂ, ಗಣಿತಶಾಸ್ತ್ರ ವಿಭಾಗದಲ್ಲಿ ಅಫಜಲಪುರ ಹಾಗೂ ಸಸ್ಯಶಾಸ್ತ್ರ ವಿಭಾಗದಲ್ಲಿ ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಹಾಗೆಯೇ ಕನ್ನಡ ಅಧ್ಯಯನ ಕೇಂದ್ರ ಸಭಾಂಗಣದ ಮೊದಲ ಮಹಡಿಯಲ್ಲಿ ಚಿಂಚೋಳಿ ವಿಧಾನಸಭಾ ಉಪಚುನಾವಣೆಯ ಮತಗಳ ಎಣಿಕೆ ನಡೆಯಲಿದೆ.

ಮೊಬೈಲ್, ಮ್ಯಾಚ್ ಬಾಕ್ಸ್ ನಿಷೇಧ:- ಮತ ಎಣಿಕೆ ನಡೆಯುವ ಕೇಂದ್ರದಲ್ಲಿ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿ, ಚುನಾವಣಾ ಏಜೆಂಟ್ ಮತ್ತು ಕೌಂಟಿಂಗ್ ಏಜೆಂಟಗಳು ಮೊಬೈಲ್, ವಾಟರ್ ಬಾಟಲ್, ಬೆಂಕಿ ಪೊಟ್ಟಣ, ಸಿಗರೇಟ್, ಮ್ಯಾಚ್ ಬಾಕ್ಸ್, ಫೌಂಟೇನ್ ಪೆನ್ ಸೇರಿದಂತೆ ಹರಿತವಾದ ಹಾಗೂ ನಿಷೇಧಿತ ವಸ್ತುಗಳನ್ನು ತರುವುದು ನಿಷೇಧಿಸಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೊಬೈಲನ್ನು ತರಕೂಡದು ಎಂದು ಅವರು ಹೇಳಿದ್ದಾರೆ.
ರಸ್ತೆ ಮಾರ್ಗದಲ್ಲಿ ಬದಲಾವಣೆ:- ಮತ ಎಣಿಕೆ ದಿನದಂದು ಸುರಕ್ಷತಾ ದೃಷ್ಠಿಯಿಂದ ಸೇಡಂನಿಂದ ಕಲಬುರಗಿ ನಗರಕ್ಕೆ ಆಗಮಿಸುವ ವಾಹನಗಳು ಬುದ್ಧ ವಿಹಾರ ಬಳಿ ಎಡಕ್ಕೆ ತಿರುವು ಪಡೆದು, ವಿಶ್ವವಿದ್ಯಾಲಯದ ಹಿಂಭಾಗದ ಕುಸನೂರ ರಸ್ತೆ ಮೂಲಕ ಕಲಬುರಗಿ ನಗರಕ್ಕೆ ಒಳಬರಬಹುದು ಎಂದು ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ ಹೇಳಿದರು.

ಮಾಧ್ಯಮ ಕೇಂದ್ರಕ್ಕೂ ಭೇಟಿ:- ನಂತರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ವೀಕ್ಷಕರು ಪ್ರಾಣಿಶಾಸ್ತ್ರ ವಿಭಾಗದ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕೇಂದ್ರಕ್ಕೂ ಭೇಟಿ ನೀಡಿದರು. ಮಾಧ್ಯಮದವರಿಗೆ ತ್ವರಿತವಾಗಿ ಮಾಹಿತಿ ನೀಡಲು ಫಲಿತಾಂಶದ ಟ್ರೆಂಡ್ ವೀಕ್ಷಿಸಲು ಎನ್.ಐ.ಸಿ. ಸ್ಕ್ರೀನ್, ಎಲ್.ಇ.ಡಿ. ಟಿವಿ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೊಗೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

4 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

4 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

6 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

18 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

20 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420