ಇಂದಿನ ಆಧುನಿಕ, ನಾಗಾಲೋಟದ ಜೀವನ ಶೈಲಿ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನುಂಟು ಮಾಡುತ್ತ, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ದೈನಂದಿನ ಕೆಲಸ ಕಾರ್ಯಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಾಲದಂತಾಗಿ, ಅಧ್ಯಾತ್ಮಿಕ ಸಾಧನೆಗಳಿಗಂತೂ ಸಮಯವೇ ಇಲ್ಲ ಅನ್ನುವ ಹಾಗಾಗಿದೆ ನಮ್ಮೆಲ್ಲರ ಪರಿಸ್ಥಿತಿ ! ಆದರೆ ನಮ್ಮ ಜೀವನದ ಸಾರ್ಥಕತೆಯು ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ನಿಭಾಯಿಸಿಕೊಳ್ಳುತ್ತ, ಮನಸ್ಸಿನ ವಿಕಾರತೆಗಳಿಂದ ಮುಕ್ತಿ ಪಡೆದುಕೊಳ್ಳುವದರಲ್ಲೇ ಅಡಗಿದೆ ! ಹಾಗಾಗಿ, ಸ್ವಸ್ಥ ಶರೀರ ಹಾಗೂ ಮನಸ್ಸುಗಳೊಂದಿಗೆ ಜೀವನದಲ್ಲಿ ಶಾಂತಿ-ನೆಮ್ಮದಿಯಂದಿರಲು ನಾವೆಲ್ಲರೂ ಸ್ವಲ್ಪ ಸಮಯವನ್ನಾದರೂ ಬಿಡುವು ಮಾಡಿಕೊಂಡು ಪ್ರತಿನಿತ್ಯ ಪ್ರಾರ್ಥನೆ, ಯೋಗ, ಧ್ಯಾನ ಮಾಡುವದು ಇವತ್ತಿನ ದಿನಗಳ ಅವಶ್ಯಕತೆಯಾಗಿದೆ.

ನಮಗೆಲ್ಲ ಗೊತ್ತಿರುವ ಹಾಗೆ ಭಾರತದ ಸನಾತನ ಯೋಗ ಸಂಸ್ಕೃತಿಗೆ ಪತಂಜಲಿ ಮಹರ್ಷಿಗಳು ಸ್ಪಷ್ಟವಾದ ಸ್ವರೂಪ ನೀಡಿ, ಯೋಗ ಸೂತ್ರಗಳ ಮೂಲಕ ನಮಗೆಲ್ಲ ಅದರ ಪರಿಚಯವನ್ನು ನೀಡಿದ್ದಾರೆ. ‘ ಮನುಜ ತನ್ನ ಆತ್ಮೋದ್ಧಾರಕ್ಕಾಗಿ ಮಾಡುವ ಸಾಧನೆಯೇ ಯೋಗ’ ಎಂದರು. ಜೀವಾತ್ಮನು ಪರಮಾತ್ಮನಲ್ಲಿ ಲೀನವಾಗಲು ಯೋಗ ಸಹಾಯಕವಾಗಬಲ್ಲದು, ಮನುಷ್ಯ ತನ್ನ ಜೀವನ ಶೈಲಿಯನ್ನು ಪ್ರಾರ್ಥನೆ, ಧ್ಯಾನ ಹಾಗೂ ಯೋಗಾಭ್ಯಾಸದಂತಹ ಉತ್ತಮ ಕ್ರಿಯೆಗಳ ಮೂಲಕ ಬದಲಿಸಿಕೊಂಡು ಸಾರ್ಥಕ ಜೀವನ ಸಾಗಿಸಿದರೆ ಆ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಾಗಬಲ್ಲದು ಎಂದು ಯೋಗದ ಔನತ್ಯವನ್ನು ಸಾರಿ ಹೇಳಿದ ಪತಂಜಲಿ ಮಹರ್ಷಿಗಳನ್ನು ‘ಆಧುನಿಕ ಯೋಗ ಪಿತಾಮಹ’ ಎಂದೇ ವಿಶ್ವದೆಲ್ಲೆಡೆ ಗುರುತಿಸಲಾಗುತ್ತದೆ.

ನಮ್ಮ ಭಾರತದ ಪ್ರಾಚೀನ ಪರಂಪರೆಯಾದ ಯೋಗವನ್ನು ಇಂದು ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳೂ ಒಪ್ಪಿಕೊಂಡಿವೆ. ವೈದ್ಯರು, ವಿಜ್ಞಾನಿಗಳನ್ನು ಮೊದಲು ಮಾಡಿ ಇವತ್ತು ಎಲ್ಲರೂ ಯೋಗದ ಮಹತ್ವವನ್ನು ಅರಿತಿದ್ದಾರೆ. ಜೀವಾತ್ಮ- ಪರಮಾತ್ಮನ ನಡುವಿನ ಸಾಮರಸ್ಯಕ್ಕೆ ಸಹಕಾರಿಯಾಗುವ, ಚಿತ್ತ-ವೃತ್ತಿಯನ್ನು ನಿರೋಧಿಸುವ ಯೋಗಕ್ಕೆ ಕಳೆದ ಐದು ವರ್ಷಗಳಿಂದಲಂತೂ ಸುಯೋಗವೇ ಸರಿ !! ಇವತ್ತು ವಿಶ್ವದೆಲ್ಲೆಡೆ ಯೋಗದ ಉತ್ಸವ ! ಯೋಗವನ್ನು ಪ್ರತಿನಿತ್ಯ ಅಭ್ಯಸಿಸುವವರಿಗೆ ನಿತ್ಯೋತ್ಸವ ! ನಿರೋಗಿಯಾಗಿ ಇರಬಯಸುವವರಿಗೆ ಯೋಗ ಕಲಿತು, ಅದನ್ನು ದೈನಂದಿನ ಬದುಕಿನ ಅಂಗವನ್ನಾಗಿಸಿಕೊಳ್ಳಬೇಕು ಎಂಬ ಸಂಕಲ್ಪ ಮಾಡಿಕೊಳ್ಳಬೇಕೆನ್ನುವ ದಿವಸ !!
ಹಾಗಾಗಿ ಬನ್ನಿ ಬಾಂಧವರೇ.

ಜೂನ್ ೨೧, ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಇವತ್ತಿನ ಶುಭ ದಿನದಂದು ಯೋಗವನ್ನು ನಮ್ಮ ದಿನಚರಿಯಲ್ಲಿ ಸೇರಿಸಿಕೊಂಡು ‘ಯೋಗದಿಂದ ರೋಗ ಮುಕ್ತ’ ರಾಗಿ ಬಾಳೋಣ ಎಂಬ ಸಂಕಲ್ಪ, ಆಶಯ ಹಾಗೂ ಭರವಸೆಯೊಂದಿಗೆ ಪ್ರತಿದಿನ ಯೋಗ, ಧ್ಯಾನ ಹಾಗೂ ಪ್ರಾರ್ಥನೆ ಮಾಡುವ ಮೂಲಕ ದೇಹ ಹಾಗೂ ಮನೋಸ್ವಾಸ್ಥ್ಯವನ್ನು ಪಡೆದುಕೊಳ್ಳುತ್ತ ಸ್ವಸ್ಥ, ಸಧೃಡ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಎಲ್ಲರೂ ಕೈಜೋಡಿಸೋಣ ! ಮುಗಿಸುವ ಮುನ್ನ…
ನಿಮ್ಮೆಲ್ಲರೊಂದಿಗೆ ನಾನು ರಚಿಸಿದ “ಯೋಗದ ಹೊಸ ಬೆಳಕಿನಲ್ಲಿ, ಧ್ಯಾನದ ಸಿರಿ ಶಾಂತಿಯಲ್ಲಿ…”ಎಂಬ ಗೀತೆಯ ಸಾಹಿತ್ಯವನ್ನು ಹಂಚಿಕೊಳ್ಳುತ್ತಿರುವೆ.

“ ಯೋಗದ ಮಹಾಬೆಳಕಿನಲ್ಲಿ…. “
ಯೋಗದ ಹೊಸಬೆಳಕಿನಲ್ಲಿ, ಧ್ಯಾನದ ಸಿರಿ ಶಾಂತಿಯಲ್ಲಿ
ಆತ್ಮೋನ್ನತಿ ಸಾಧನೆಯ ಉತ್ತುಂಗದ ಮಾರ್ಗದಲ್ಲಿ
ನಿತ್ಯ ಯೋಗ ಧ್ಯಾನ ವಿಧಿಯ ಸಮಚಿತ್ತದ ಬಾಳಿನಲ್ಲಿ
ನಿತ್ಯೋತ್ಸವ, ನಮಗೆ ನಿತ್ಯೋತ್ಸವ (ಪಲ್ಲವಿ)

ಪತಂಜಲಿ ಮಹರ್ಷಿಗಳ ಅಷ್ಟಾಂಗದ ಯೋಗದಲ್ಲಿ
ಯಮ, ನಿಯಮ, ಧಾರಣದ ಆಸನಗಳ ಸೌಖ್ಯದಲಿ
ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಸಮಾಧಿಯಲ್ಲಿ
ನಿತ್ಯೋತ್ಸವ… ನಮಗೆ ನಿತ್ಯೋತ್ಸವ…

ಭರತಭೂಮಿ ಕೊಡುಗೆಯೇ, ವಿಶ್ವಕ್ಕೆಲ್ಲ (ಸು)ಯೋಗವೇ!
ಚಿತ್ತ ವೃತ್ತಿ ದಮನದಿಂದ ಆರೋಗ್ಯದ ಭಾಗ್ಯವೇ !
ವಿಶ್ವ ಗುರು ಭಾರತದ ಯೋಗ ಶಾಸ್ತ್ರದ ಹಿರಿಮೆಗೆ
ವಿಜಯೋತ್ಸವ…ನಮಗೆ ನಿತ್ಯೋತ್ಸವ….
(ಈ ಹಾಡನ್ನು ೪ ನಿಮಿಷಗಳ ವೀಡಿಯೋ ವೀಕ್ಷಣೆಯೊಂದಿಗೆ
ಕೇಳಬಯಸುವವರು ಇಲ್ಲಿ ಒತ್ತಿ.


ಡಾ.ಗೀತಾ ಪಾಟೀಲ, ಪ್ರೊಫೆಸರ್, ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಕಲಬುರಗಿ (೮೭೯೨೧೭೬೧೭೩)

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

34 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago