ಚಿತ್ತಾಪುರ: ತಾಲೂಕಿನ ಕದ್ದರ್ಗಿ ಮತ್ತು ಜೀವಣಗಿ ಗ್ರಾಮಗಳು ನೂತನ ಶಹಾಬಾದ್ ತಾಲೂಕಿಗೆ ಸೇರ್ಪಡೆ ಮಾಡಿರುವುದಕ್ಕೆ ವಿರೋಧವಿದೆ, ಕೂಡಲೇ ಕೈಬಿಡುವಂತೆ ಆಗ್ರಹಿಸಿ ಎರಡು ಗ್ರಾಮಗಳ ಗ್ರಾಮಸ್ಥರು ಕಂದಾಯ ಸಚಿವರಿಗೆ ಬರೆದ ಮನವಿ ಪತ್ರ ಮಂಗಳವಾರ ತಹಸಿಲ್ದಾರ್ ಅವರಿಗೆ ಸಲ್ಲಿಸಿದರು.
ಗ್ರಾಮದ ಮುಖಂಡರಾದ ಜಗದೇವ ಎಸ್ ಕುಂಬಾರ ಮಾತನಾಡಿ ನೂತನ ಶಹಾಬಾದ್ ತಾಲೂಕಿಗೆ ಚಿತ್ತಾಪುರನ 7 ಗ್ರಾಮಗಳು ಸೇರ್ಪಡೆ ಮಾಡಿದೆ. ಆದರೆ ಚಿತ್ತಾಪುರಗೆ ಸಮೀಪ ಇರುವ ಕದ್ದರ್ಗಿ ಮತ್ತು ಜೀವಣಗಿ ಗ್ರಾಮಗಳ ಸೇರ್ಪಡೆ ಕೈಬಿಟ್ಟು ಚಿತ್ತಾಪುರ ತಾಲೂಕಿನಲ್ಲಿಯೆ ಮುಂದುವರಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೀವಣಗಿ ಗ್ರಾಮದ ಮುಖಂಡ ಆಂಜನೇಯ ಮಸಬೋ ಮಾತನಾಡಿ ಎರಡು ಗ್ರಾಮಗಳ ಗ್ರಾಮಸ್ಥರ ಎಲ್ಲಾ ವ್ಯಾಪಾರ-ವಹಿವಾಟು ಮತ್ತು ಮಕ್ಕಳ ವಿದ್ಯಾಭ್ಯಾಸ ಕೂಡ ಚಿತ್ತಾಪುರದಲ್ಲಿ ಇರುತ್ತದೆ, ಮತ್ತು ಚಿತ್ತಾಪುರಗೆ ಹೋಗಲು ಕೇವಲ 7 ಕಿ.ಮೀ ಅಷ್ಟೇ ಆದರೆ ಶಹಾಬಾದಗೆ ಹೋಗಲು 13 ಕಿ.ಮೀ. ದೂರವಾಗುತ್ತದೆ. ಹಾಗೂ ಮಳೆಗಾಲದಲ್ಲಿ ಕಾಗಿಣಾ ನದಿ ತುಂಬಿ ಹರಿವುದರಿಂದ ಶಹಾಬಾದಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು ಆದ್ದರಿಂದ ಚಿತ್ತಾಪುರ ತಾಲೂಕಿನಲ್ಲಿಯೆ ಕದ್ದರ್ಗಿ,ಜೀವಣಗಿ ಗ್ರಾಮಗಳು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಎರಡು ಗ್ರಾಮಗಳ ಗ್ರಾಮಸ್ಥರು ಮೂಲ ತಾಲೂಕಿನಲ್ಲಿ ಉಳಿಯಲು ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಗ್ರಾಮಗಳ ಹಾಗೂ ವಿವಿಧ ಸಂಘಟನೆಗಳೊಂದಿಗೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ಕದ್ದರ್ಗಿ ಗ್ರಾಮಸ್ಥರಾದ ಬಸವರಾಜ್ ಗುಡ್ಡಾಪುರ್, ಹಣಮಂತ ದೇಸಾಯಿ, ರಾಘವೇಂದ್ರ ಗುತ್ತೇದಾರ್, ನಾಗೇಂದ್ರ. ಜೀವಣಗಿ ಗ್ರಾಮಸ್ಥರಾದ ಸಾಬಣ್ಣ ಕೂಬಾಕ್, ಜಗಣಗೌಡ ಮಾಲಿ ಪಾಟೀಲ್, ಮಲ್ಲಿನಾಥ್ ದಳಪತಿ, ಬಸಯ್ಯಸ್ವಾಮಿ, ಸೇರಿದಂತೆ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…