ಕಲಬುರಗಿ: ನಗರದ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಅವರಣದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಹಾಯಕ ಅರಣ್ಯ ಸಂರಕ್ಷಕ ಅಧಿಕಾರಿಗಳಾದ ಬಾಬುರಾವ ಪಾಟೀಲ ರವರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.
ಮಾತನಾಡುತ್ತಾ ಸಸಿಗಳನ್ನು ನಮ್ಮ ಇಲಾಖೆಯಿಂದ ಪೂರೈಸಿ, ನೆಟ್ಟುರಕ್ಷಣೆ ಮಾಡುತ್ತೇವೆ, ಇದು ಕೇವಲ ನಮ್ಮೊಬ್ಬರಿಂದ ಮಾತ್ರ ಯಶ್ವಸಿಯಾಗುವುದಿಲ್ಲ. ಒಂದು ವರ್ಷ ಕಾಲ ನೀವು ಸಹ ಜತನದಿಂದಕಾಪಾಡಬೇಕು. ನೀರು, ಗೊಬ್ಬರ ಆರೈಕೆಅಗತ್ಯ. ಕಲಬುರ್ಗಿ ನಗರದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ೩೫ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವಯೋಜನೆ ಜಾರಿಯಲ್ಲಿದೆ ಇನ್ನೂ ಸಾವಿರಾರು ಗಿಡಗಳನ್ನು ನೆಟ್ಟು ಕಲಬುರ್ಗಿಯ ಬೇಸಿಗೆಯ ಧಗೆಯನ್ನುಕಡಿಮೆ ಮಾಡಬೇಕಾಗಿದೆ ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.
ಪರಿಸರ ಪ್ರೇಮಿ ಪ್ರಾಧ್ಯಾಪಕರಾದ ಡಾ.ಶಶಿಶೇಖರರೆಡ್ಡಿ ಯವರು ಮಾತನಾಡಿ ಪರಿಸರ ಸಮತೋಲನ ಕಾಪಾಡಲು ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡುವ ಅಗತ್ಯ ತುಂಬಾ ಇದೆ. ಅರಣ್ಯ ನಾಶದಿಂದ ಮನುಕುಲವೇ ನಾಶವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಪರಿಸರಅಸಮತೋಲನದ ಪರಿಣಾಮಗಳಾಗಿವೆ. ಭೂಮಿಯ ತಾಪಮಾನ ಏರಿಕೆ, ಅತೀವೃಷ್ಟಿ, ಅನಾವೃಷ್ಟಿ, ಸುನಾಮಿ, ಸಾಂಕ್ರಮಿಕ ರೋಗಗಳು, ನೆರೆ ಪ್ರವಾಹಗಳು, ಭೂಕಂಪಗಳು ಮಾನವ ಅತಿಯಾಸೆಯಿಂದ ಪರಿಸರವನ್ನು ನಾಶಗೊಳಿಸುವದರಿಂದ ಸಂಭವಿಸುತ್ತಿವೆ. ಇನ್ನಾದರೂ ಎಚ್ಚತ್ತುಕೊಂಡುಗಿಡ, ಮರ, ಬಳ್ಳಿಗಳನ್ನು ಬೆಳೆಸಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೆ ಸರಿ ಪಡಿಸಬೇಕು. ಇಲ್ಲದಿದ್ದರೆ ಅಮ್ಲಜನಕವನ್ನೂ ಸಹ ಖರೀದಿಸ ಬೇಕಾಗಬಹುದು. ಅದಕ್ಕೂ ಮೊದಲೇಎಚ್ಚತ್ತು ಕೋಳ್ಳೊಣ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ. ಖಂಡೇರಾವ ಮಾತನಾಡುತ್ತಾ ಇವತ್ತುತುಂಬಾ ಸಂತೋಷದಾಯಕವಾದ ದಿನ ಏಕೆಂದರೆ ನಮ್ಮ ಕಾಲೇಜು ಪ್ರಾಂಗಣ ಎರಡು ವರ್ಷಗಳಲ್ಲಿ ಸಂಪೂರ್ಣ ಹಸಿರುಮಯವಾಗಲಿದೆ. ವಿದ್ಯಾರ್ಥಿನಿಯರಿಗೆ ನೆರಳು ಮತ್ತು ತಂಪನ್ನು ನೀಡುವತಾಣವಾಗಲಿ ನಮ್ಮಕಾಲೇಜಿನ ವತಿಯಿಂದ ಇವುಗಳನ್ನು ಜತನದಿಂದ ಕಾಪಾಡುತ್ತೇವೆ ಎಂದರು. ವಲಯಅರಣ್ಯ ಅಧಿಕಾರಿಗಳಾದ ಸುನಿಲಕುಮಾರ ಅವರು ಗಿಡಗಳನ್ನು ಹೇಗೆ ಕಾಪಾಡಬೇಕು ಗೊಬ್ಬರ, ನೀರುಯಾವಾಗ ಮತ್ತು ಹೇಗೆ ನೀಡಬೇಕು. ವಿವಿಧ ಗಿಡಗಳ ಉಪಯೋಗಗಳನ್ನು ತಿಳಿಸಿದರು.
ಅರಣ್ಯರಕ್ಷಕರಾದ ಹೈದರ್‌ಅಲಿಯವರು ೧೦೦ ಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿದರು. ಪ್ರಾಧ್ಯಾಪಕರಾದ ಜ್ಯೋತಿ ಬಳಗಾರ್, ಜ್ಯೋತಿರೆಡ್ಡಿ, ಮೀನಾಕ್ಷಿ, ಡಾ.ಭೀಮಣ್ಣಾ ಮತ್ತು ಗೌರಮ್ಮತಲಾ ಒಂದೊಂದು ಸಸಿ ನೆಟ್ಟು ಆ ಸಸಿಗಳನ್ನು ಕಾಪಾಡುವ ಹೊಣೆ ಹೊತ್ತುಕೊಂಡರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…