ಇದೇ ಜುಲೈ ತಿಂಗಳಿಗೆ ಬಸವಾದಿ ಶರಣರ ಬದುಕು ಹಾಗೂ ಬೋಧನೆಗೆ ಮೀಸಲಾದ ಶರಣ ಮಾರ್ಗ ಮಾಸಿಕ ಪತ್ರಿಕೆಗೆ ಭರ್ತಿ 6 ವರ್ಷಗಳು ತುಂಬಿವೆ. ಇದಕ್ಕೆ ಓದುಗ ಒಡೆಯರ ಸಹಾಯ-ಸಹಕಾರವೇ ಮುಖ್ಯ ಕಾರಣ ಎಂಬುದನ್ನು ನಾನು ಬಲ್ಲೆ.
ಜುಲೈ-2020 ರ ಶರಣ ಮಾರ್ಗದ ಬಾಗಿಲು ತೆಗೆದರೆ…
ISSN ಸಂಖ್ಯೆ ಹೊಂದಿರುವ ಈ ಪತ್ರಿಕೆಯ ಮುಖ ಬೆಲೆ ಕೇವಲ ₹ 25, ವಾರ್ಷಿಕ ಚಂದಾ ₹ 1000 ಇದ್ದು, ಆಸಕ್ತರು ಖರೀದಿಸಬಹುದು ಹಾಗೂ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ಖದರು ಕಳೆದುಕೊಂಡ ಪತ್ರಿಕೋದ್ಯಮ…
ನಮ್ಮ ತಂದೆಯವರಾದ ಲಿಂಗಣ್ಣ ಸತ್ಯಂಪೇಟೆಯವರು ಆಗ ಈ ಭಾಗದಿಂದ “ಲಂಕೇಶ ಪತ್ರಿಕೆ” ಗೆ ವರದಿ ಮಾಡುತ್ತಿದ್ದರು. ಹೀಗಾಗಿ ಅವರ ಮೇಲೆ ಆಗಾಗ ಹಲ್ಲೆ ಕೂಡ ಆಗಿದ್ದವು. ಅಂತೆಯೇ ಅವರ ಸಾವಿನ ರಹಸ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪಾಟೀಲ ಪುಟ್ಟಪ್ಪನವರ ಪ್ರಪಂಚ, ಲಂಕೇಶರ ಲಂಕೇಶ ಪತ್ರಿಕೆ ಆಗ ತುಂಬಾ ಹೆಸರು ಮಾಡಿದ್ದವು. ಇದಕ್ಕೆ ಅವರು ಕಾಪಾಡಿಕೊಂಡು ಬಂದಿದ್ದ ಬದ್ಧತೆ ಹಾಗೂ ಪತ್ರಿಕಾ ಧರ್ಮವೇ ಕಾರಣ ಎಂದು ಹೇಳಬಹುದು. ಇದಾದ ಬಳಿಕ ರವಿ ಬೆಳಗೆರೆ ಬಂದರು.
ಇದಾಗಿ ಹತ್ತೆಂಟು ವರ್ಷಗಳಲ್ಲಿ ಕನ್ನಡ ದಿನಪತ್ರಿಕೆಗಳು ಜಿಲ್ಲಾವಾರು ಕಚೇರಿ ಆರಂಭಿಸಿ ಪತ್ರಕರ್ತರ ಹುದ್ದೆಗೆ ಆಹ್ವಾನಿಸಿದಾಗ, ನನ್ನಂಥ ಅನೇಕರಿಗೆ ಈ ಕ್ಷೇತ್ರದಲ್ಲಿ ಕಾಲಿಡಲು ಅವಕಾಶ ದೊರೆಯಿತು. ಆಗ ಐಟಿಬಿಟಿಗಿಂತ ಪತ್ರಿಕಾರಂಗಕ್ಕೆ ಬಹಳ ಚಾರ್ಮಿಂಗ್ ಇತ್ತು. ಹೀಗಾಗಿ ನಾನು ಜ್ಯೂನಿಯರ್ ಕಾಲೇಜು ಉಪನ್ಯಾಸಕ ವೃತ್ತಿ ದೊರೆಯುತ್ತಿದ್ದರೂ ಅದನ್ನು ಬಿಟ್ಟು ಈ ಕ್ಷೇತ್ರಕ್ಕೆ ಕಾಲಿಟ್ಟೆ.
ಈ ಮುಂಚೆ ಪಾರ್ಟ್ ಟೈಮ್ ಲೆಕ್ಚ ರ್ ಆಗಿ ಕೆಲಸ ಮಾಡುತ್ತ ಗ್ರಿನೋಬಲ್ಸ್, ಕ್ರಾಂತಿ, ಸಂಜೆವಾಣಿಯಲ್ಲಿ ಶಹಾಪುರದಿಂದ ವರದಿ ಮಾಡಿತ್ತಿದ್ದೆ. ನಂತರ ಹಾಯ್ ಬೆಂಗಳೂರ್!, ಗೌರಿ ಲಂಕೇಶ, ಸದ್ಯ ಸಿಎಂ ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿರುವ ಮಹಾದೇವ ಪ್ರಕಾಶ ಅವರ “ಈ ಭಾನುವಾರ” ಮುಂತಾದ ಪತ್ರಿಕೆಗಳಿಗೆ ಕಲಬುರಗಿಯಿಂದ ವರದಿ ಮಾಡುತ್ತಿದ್ದೆ. ಗೌರಿ ಲಂಕೇಶ ಅವರು ವರದಿಗನುಗುಣವಾಗಿ ತಿಂಗಳ ಸಂಬಳ ನೀಡುತ್ತಿದ್ದರೆ, ರವಿ ಬೆಳಗೆರೆ ಆಗ ತಿಂಗಳಿಗೆ ಎರಡು ಸಾವಿರ ರೂ. ಚೆಕ್ ಕಳಿಸುತ್ತಿದ್ದರು.
ಇದಾದ ಬಳಿಕ ನಾನು ಉಷಾ ಕಿರಣ (2 ವರ್ಷ), ಪ್ರಜಾವಾಣಿ (8 ವರ್ಷ), ವಿಜಯವಾಣಿ (4 ವರ್ಷ) ಯಲ್ಲಿ ಉಪಸಂಪಾದಕ/ ಹಿರಿಯ ವರದಿಗಾರನಾಗಿ ಸುಮಾರು 16 ವರ್ಷ ಸೇವೆ ಸಲ್ಲಿಸುವಂತಾಯಿತು. ಆಕರ್ಷಕ ಸಂಬಳ ಕೂಡ ಇತ್ತು. ನನ್ನ ಎಂಗೇಜ್ಮೆಂಟ್ ವೇಳೆಯಲ್ಲಿ ಹುಡುಗ ಏನು ಮಾಡುತ್ತಾನೆ ಎಂದು ಬೀಗರು ಕೇಳಿದರೆ ನಮ್ಮಪ್ಪ, ಅರೆಕಾಲಿಕ ಉಪನ್ಯಾಸಕ ಮತ್ತು ಪತ್ರಿಕಾ ವರದಿಗಾರನಾಗಿದ್ದಾನೆ ಎಂದು ಹೇಳಿದರು. ಆಗ ಅವರು ಪತ್ರಕರ್ತ ಇದ್ದಾರೆ ಓಕೆ. ಆದರೆ ಉಪನ್ಯಾಸಕ ವೃತ್ತಿ ಕಾಯಂ ಇಲ್ಲವಲ್ಲ ಎಂದು ಹಿಂದೆ ಮುಂದೆ ನೋಡಿದ್ದರು.
ಆದರೆ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿರುವ ಪತ್ರಿಕಾರಂಗ ತನ್ನ ಮೊದಲಿನ ಛಾರ್ಮಿಂಗ್ ಈಗ ಉಳಿಸಿಕೊಂಡಿಲ್ಲ. ಅದು ತನ್ನ ಖದರು ಕಳೆದುಕೊಂಡಿದೆ. ಆಗಿನಂತೆ ಇನ್ವೆಸ್ಟಿಗೇಶನ್ ಜರ್ನಲಿಸಂ ಇಲ್ಲ. ಪತ್ರಕರ್ತನ ಹುದ್ದೆ ಈಗ ಬರೀ ಮಾಲೀಕರ ಮರ್ಜಿ ಕಾಯುವ, ಹಲ್ಲುಗಿಂಜುವ, ರೋಲ್ ಕಾಲ್ ಮಾಡುವ ಹುದ್ದೆಯಾಗಿ ಪರಿಣಮಿಸಿದೆ. ಪತ್ರಕರ್ತರು ಈಗ ಕೇವಲ ಟೈಪರೇಟರ್ ಇಲ್ಲವೇ ಸ್ಟೆನೋಗ್ರಾಫರ್ ಆಗಿದ್ದಾರೆ ಎಂದೆನಿಸುತ್ತದೆ. ಅಂದ ಮಾತ್ರಕ್ಕೆ ಎಲ್ಲರನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಕ ಮಾಡಲು ಬರುವುದಿಲ್ಲ. ಕೆಲವರು ಈ ಮಾತುಗಳಿಗೆ ಅಪವಾದವಾಗಿದ್ದಾರೆ.
ಹಿಂದೊಂದು ಮಾತು ಪ್ರಚಲಿತದಲ್ಲಿತ್ತು. ಒಬ್ಬ ವ್ಯಕ್ತಿಯನ್ನು ಹಾಳು ಮಾಡಬೇಕೆಂದರೆ, ಆತನಿಗೆ ನಾವು ಹಳೆ ಲಾರಿ ತೊಗೋ, ಇಲ್ಲವೇ ಒಂದು ಪತ್ರಿಕೆ ತೆಗೆ ಎಂದು. ಬಹುಶಃ ಈ ಮಾತು ಕೊರೊನಾದ ಈ ಹೊತ್ತು ನಿಜವೆನಿಸುತ್ತಿದೆ. ಮಾಲೀಕರಿಗೆ ಈ ಗತಿಯಾದರೆ ಇನ್ನು ಆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಸ್ಥಿತಿ ಗತಿ ಹೇಗಿರಬೇಡ ನೀವೆ ಊಹಿಸಿ! ಆಗ ThankFull ಆಗಿದ್ದ ಈ ಜಾಬ್ ಇದೀಗ ThankLess ಜಾಬ್ ಆಗಿರುವುದು ಕಾಲದ ದುರಂತವೆಂದೇ ಹೇಳಬೇಕು. ಇದಕ್ಕೆ ಪತ್ರಕರ್ತರಾದ ನಾವೂ ಹೊಣೆಗಾರರಾಗಿದ್ದೇವೆ.
ಅಂತೆಯೇ ಇದೀಗ ನಾನು ಅಪ್ಪ ಹೊರ ತರುತ್ತಿದ್ದ ಬಸವ ಮಾರ್ಗದ ಬದಲಾಗಿ ಶರಣ ಮಾರ್ಗ ಮಾಸಿಕ ಪತ್ರಿಕೆಯ ಜೊತೆಗೆ e-medialine ಆನ್ ಲೈನ್ ಪತ್ರಿಕೆ ಹೊರ ತರುವ ಮೂಲಕ ಹೊಟ್ಟೆಯ ಜೊತೆಗೆ ನೆತ್ತಿ ತುಂಬಿಸಿಕೊಳ್ಳುತ್ತಿದ್ದೇನೆ. ಇದರಲ್ಲೂ ಸಾಕಷ್ಟು ಎಡರು ತೊಡರು, ತೊಂದರೆಗಳಿವೆ. ಕೈ ತುಂಬಾ ಸಂಬಳ ಇಲ್ಲದಿದ್ದರೂ ಈ ಹಾದಿ ಸಾಕಷ್ಟು ಖುಷಿ, ಸಮಾಧಾನ ಕೊಡುತ್ತಿದೆ.
ಪತ್ರಿಕಾ ದಿನಾಚರಣೆಯ ಶುಭಾಶಯಗಳೊಂದಿಗೆ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…