ಬಿಸಿ ಬಿಸಿ ಸುದ್ದಿ

ಕಲಬುರಗಿ ರಂಗಾಯಣ: ತಂತ್ರಜ್ಞರು ಹಾಗೂ ಕಲಾವಿದರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕಲಬುರಗಿ: ರಂಗಾಯಣದಿಂದ 3 ಜನ ತಂತ್ರಜ್ಞರು ಹಾಗೂ 12 ಜನಕಲಾವಿದರನ್ನು ತಾತ್ಕಾಲಿಕವಾಗಿ ಮೂರು ವರ್ಷಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ರಂಗಾಯಣ ಆಡಳಿತಾಧಿಕಾರಿಗಳಾದ ಜಗದೀಶ್ವರಿ ಶಿವಕೇರಿ ಅವರು ತಿಳಿಸಿದ್ದಾರೆ.
ಸಂಗೀತ, ಧ್ವನಿ-ಬೆಳಕು, ರಂಗಸಜ್ಜಿಕೆ, ಪರಿಕರ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರುವ, ಕನ್ನಡ ಭಾμÉ ಓದುವ, ಬರೆಯುವ ಮತ್ತು ಮಾತಾನಾಡುವ ಸಾಮಥ್ರ್ಯವಿರುವ ತಂತ್ರಜ್ಞರನ್ನು ಆಯ್ಕೆ ಮಾಡಲಾಗುವುದು. ರಂಗಾನುಭವ ಮತ್ತು ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು. ಯಾವುದೇ ಭತ್ಯೆರಹಿತ ಮಾಸಿಕ ಗೌರವ ಸಂಭಾವನೆ 20,000 ರೂ. ನೀಡಲಾಗುತ್ತದೆ.
ಕಲಾವಿದರ ನೇಮಕದಲ್ಲಿ 4 ಜನ ಮಹಿಳೆಯರು ಮತ್ತು 4 ಜನ ಪ.ಜಾತಿ/ವರ್ಗದ ಕಲಾವಿದರಿಗೂ ಅವಕಾಶವಿದ್ದು, ಪ್ರಾದೇಶಿಕ ವಲಯದ, ರಂಗಪರಿಣಿತಿ ಹೊಂದಿರುವ, ರಂಗ ಪ್ರಯೋಗಗಳಲ್ಲಿ ಭಾಗವಹಿಸುವವರಿಗೆ, ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದವರಿಗೆ, ರಂಗಶಿಕ್ಷಣದ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ನೇಮಕಗೊಂಡ ಕಲಾವಿದರು ರಪರ್ಟಿಯಭಾಗವಾಗಿದ್ದು, ರಂಗ ಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ಮಾಸಿಕ ಶಿಷ್ಯವೇತನ ಯಾವುದೇ ಭತ್ಯೆ ರಹಿತಸಂಚಿತವಾಗಿ ತಿಂಗಳಿಗೆ 12,000 ರೂ., ಎರಡನೇ ವರ್ಷ 14,000 ರೂ. ಹಾಗೂ ಮೂರನೇ ವರ್ಷದಲ್ಲಿ 16,000 ರೂ.ಗಳನ್ನು ನೀಡಲಾಗುವುದು. ಕಲಾವಿದರ ವಯೋಮಿತಿ 25 ವರ್ಷದೊಳಗಿರಬೇಕು.
ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನೆಲೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆಮಾಡಿಕೊಳ್ಳಲಾಗುತ್ತದೆ. ಆಸಕ್ತರು ಸ್ವವಿವರದೊಂದಿಗೆ 2020ರ ಜುಲೈ 31 ರೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲರಸ್ತೆ, ಕಲಬುರಗಿ – 585105, ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ rangayanakalaburgi@gmail.com, rangayanakalaburagi@gmail.com ಮೂಲಕ ಅರ್ಜಿ ಸಲ್ಲಿಸಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರಂಗಾಯಣದ http://www.rangayanakalaburagi.com ವೆಬ್ಸೈಟ್ನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-227735ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago