ಕಲಬುರಗಿ: ಡಿಪ್ಲೋಮಾ ವಿದ್ಯಾರ್ಥಿ ಓರ್ವನನ್ನು ಹಳೆ ವೈಷಮ್ಯದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ನಗರದ ಹಳೆ ಜೇವರ್ಗಿ ರಸ್ತೆಯ ಅ೦ಡರ್ ಬ್ರೀಡ್ಜ್ ಸಮಿಪ ಕೊಲೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಟಮ್-ಟಮ್ ಚಾಲಕನಾದ ವಿದ್ಯಾನಗರ ನಿವಾಸಿಯಾದ ಶಿವಕುಮಾರ ಡೂಗ ಶಿವ್ಯಾ ರಾಜು ಹೈಬತಿ (22) ಹಾಗೂ ಎಲೆಕ್ವ್ರಿಶೀಯನ್ ಆಗಿರುವ ಮದಿನಾ ಕಾಲೋನಿ ನಿವಾಸಿ ಮಹ್ಯದ ಶಾಹಿದ ತಾಹೊದ್ದಿನ್ (21) ಬಂಧಿತ ಆರೋಪಿಗಳು.
ಸ್ಟೇಷನ್ ಬಜಾರ್ ಪಿ.ಎಸ್.ಐ ಎಲ್.ಹೆಜ್.ಗೌಂಡಿ ನೇತೃತ್ವದಲ್ಲಿ ರಚಿಸಿದ ತಂಡದ ನಖಮೊದ್ದಿನ್,ಜೈಭೀಮ, ಮಲ್ಲಣ್ಣಗೌಡ, ಶಿವಾಸ೦ದ. ಫಿರೋಜ, ಮಲ್ಲಕಾರ್ಜುನ್. ದೇವೆ೦ದ್ರ, ಸುಸಿಲಕುಮಾರ ಸಿಬ್ಬಂದಿಗಳ ಕಾರ್ಯಚರಣೆಯಲ್ಲಿ ಕೃತ್ಯಕ್ಕೆ ಖಳಸಿದಿ ಒಂದು ಮೋಟಾರ್ ಸೈಕಲ್, ಒಂದು ಮಾರಕಾಸ್ತ್ರವನ್ನು ವಶಪಡಿಸಕೊ೦ಡು ಇಬ್ಬರು ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳು ಸೋಮವಾರ ರಾತ್ರಿ ಬೈಕ್ ಮೇಲೆ ಬಂದು ಡಿಪ್ಲೋಮಾ ವಿದ್ಯಾರ್ಥಿಯಾದ ಸಾಗರ (22) ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದರು.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…