ಶಹಾಬಾದ: ವೈದ್ಯರು ಹಾಗೂ ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವ ಎರಡು ಕಣ್ಣುಗಳಿದ್ದಂತೆ ಮಕ್ಕಳ ತಜ್ಞ ಡಾ.ವಿನೋದ ಕವಲಗಿ ಹೇಳಿದರು.
ಅವರು ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ವತಿಯಿಂದ ಪತ್ರಕರ್ತರ ಮತ್ತು ವೈದ್ಯರ ದಿನಾಚರಣೆ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಾದ್ಯಂತ ಕೋವಿಡ್-19 ಮಹಾಮಾರಿ ರೋಗ ತಾಂಡವವಾಡುತ್ತಿದೆ.ನಗರದಲ್ಲಿಯೂ ಹಲವಾರು ಪ್ರಕರಣದ ದಾಖಲಾಗಿವೆ. ಈಗ ಕರೊನಾ ಸಮುದಾಯ ಮಟ್ಟದಲ್ಲಿ ಹಬ್ಬುವ ಸಾಧ್ಯತೆ ಹೆಚ್ಚಿದ್ದು, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಆದ್ದರಿಂದ ಸಣ್ಣ ಜ್ವರ, ನೆಗಡಿ, ಕೆಮ್ಮಿಗೆ ನಿರ್ಲಕ್ಷ ಮಾಡದೆ ಕೂಡಲೇ ವೈದ್ಯರನ್ನು ಸಂಪಕರ್ಿಸಬೇಕು. ಮಾಸ್ಕ, ಸೈನಿಟೈಸರ್ ಬಳಸಿ ನಿಮ್ಮ ಕುಟುಂಬವನ್ನು ಉಳಿಸಿ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೇ ಅನಾಹುತವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ರಮೇಶ ಭಟ್ಟ ಮಾತನಾಡಿ, ಪತ್ರಕರ್ತರು, ವೈದ್ಯರು ಇಬ್ಬರು ಸಮಾಜದ ಸ್ವಾಸ್ಥ್ಯ ಕಾಪಾಡುವವರಾಗಿದ್ದಾರೆ. ವೈದ್ಯರು ಜನರ ಸ್ವಾಸ್ಥ್ಯ ಕಾಪಾಡಿದರೇ, ಪತ್ರಕರ್ತರು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವವರಾಗಿದ್ದಾರೆ ಎಂದು ಹೇಳಿದರು.
ಲೋಹಿತ ಕಟ್ಟಿ ನಿರೂಪಿಸಿದರು, ಶರಣು ವಸ್ತ್ರದ್ ಸ್ವಾಗತಿಸಿದರು. ಸಂಘದ ಕಾರ್ಯದಶರ್ಿ ನಿಂಗಣ್ಣ ಸಂಗಾವಿಕರ ವಂದಿಸಿದರು. ಸಂಘದ ಅಧ್ಯಕ್ಷನಿಂಗಣ್ಣ ಹುಳಗೋಳ, ಉಪಾಧ್ಯಕ್ಷ ಶಿವಾನಂದ ಪಾಟೀಲ, ಶ್ರೀಧರ ಜೋಶಿ, ಸದಾನಂದ ಕುಂಬಾರ, ಮುಖಂಡರಾದ ನಾಗರಾಜ ಮೇಲಗಿರಿ, ಸಂಜಯ ಸೂಡಿ,ಭೀಮಯ್ಯ ಗುತ್ತೆದಾರ, ಚಂದ್ರಕಾಂತ ಮೆಂಗಜಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…