ಕಲಬುರಗಿ: ಪ್ರವಾಸಿ ಸ್ಥಳ, ಭಾರತದಲ್ಲಿ ಪ್ರಸಿದ್ಧ ಸೂಫಿ ಸಂತ, ಕಲ್ಯಾಣ ಕರ್ನಾಟಕದ ಶರಣರಾದ ಹಜರತ್ ಖಾಜಾ ಬಂದಾ ನವಾಜ ದರ್ಗಾಕ್ಕೆ ತೆರಳುವ ಮುಖ್ಯ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನೂಕುಲ ಮಾಡಿಕೊಡಬೇಕೆಂದು ಸಿಪಿಐ(ಎಂ) ಪಕ್ಷದ ಮುಖಂಡರಾದ ಶರಣಬಸಪ್ಪ ಮಮಶೇಟಿ ಅವರುವ ಇಲ್ಲಿನ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ದರ್ಗಾ ಪ್ರದೇಶದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿ ನಗರ ಪ್ರದೇಶದಲ್ಲಿನ ಬಹುತೇಕ ಜನರು ಈ ಮಾರ್ಗವಾಗಿ ಸಂಚಿರಿಸುವ ಕೇಂದ್ರ ಬಿಂದುವಾಗಿದೆ. ಇಂತಹ ಸ್ಥಳದಲ್ಲಿ ರಸ್ತೆಗಳು ತೀರ ಹದಗೆಟ್ಟು ಹೋಗಿದೆ, ಎಲ್ಲೆಡೆ ಗಬ್ಬು, ಹೊಲಸು ವಾಸನೆ ನಾರುತ್ತಿದೆ. ತೆಗ್ಗು ಗುಂಡಿಗಳು ಕಾಣಿಸುತ್ತಿವೆ, ಡ್ರೈನೆಜ್ ಗುಂಡಿಗಳು ಕಾಣಿಸುತ್ತಿವೆ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೊಕಸಭಾ ಸದಸ್ಯರ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಂಡು ಅಭಿವೃದ್ಧಿ ಕಾಮಗಾರಿಕೆಯ ವೇಳೆ ನಿದ್ದೆಗೆ ಜಾರಿದ್ದಾರೆ ಎಂದು ಈ ಸಂದರ್ಭದಲ್ಲಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಕಾರ್ಯಕರ್ತರು ಜುಲೈ 7,8,9 ರಂದು ದರ್ಗಾದ ಉರುಸ್ ಜರುಗಲಿದ್ದು, ಕೂಡಲೇ ಪ್ರದೇಶ ಅಭಿವೃದ್ಧಿ ಕಾಮಗಾರಿ ನಡೆಸಿ ಪ್ತವಾಸಿ, ಭಕ್ತಿರಿಗೆ ಅನುಕೂಲ ಮಾಡಬೇಕೆಂದು ಪಾಲಿಕೆ ಆಯುಕ್ತರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ಈ ಕುರಿತು ನಿರ್ಲಕ್ಷ್ಯ ತೋರಿದರೆ ಬೀದಿಗೆಳಿದು ಹೋರಾಟ ನಡೆಸುವುದಾಗಿ ಈ ಸಂದರ್ಭದಲ್ಲಿ
ಎಚ್ಚರಿಕೆ ನೀಡಿದರು.
ಮೇಘರಾಜ ಕಠಾರೆ, ರೇವಣಸಿದ್ದ, ನಾಗಯ್ಯ ಸ್ವಾಮಿ, ಅಲ್ತಾಫ್ ಇನಾಮದಾರ್, ಜಾವಿದ್ ಹುಸೇನ್, ಮಹಿಮುದ ಮಕದುಮ್, ಫೈಜೊದ್ದೀನ್, ಮಿರಾಜ್, ಆನಂದ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…