ಕಲಬುರಗಿ: ಪತ್ರಿಕಾ ದಿನಾಚರಣೆ ನಿಮಿತ್ತ ಇಂದು ನಗರದ ಮಿಸ್ಬಾ ನಗರದ ಅಲ್ ಹುದಾ ಶಾಲೆ ಆವರಣದಲ್ಲಿ ನಯಾ ಸವೇರಾ ಸಂಘಟನೆ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ, ಕಾರ್ಯದರ್ಶಿ ಸಲೀಮ್ ಚಿತ್ತಾಪುರಿ ನೇತೃತ್ವದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಕೆ.ಬಿ.ಎನ್. ಟೈಮ್ಸ್ ಪತ್ರಿಕೆಯ ಸಂಪಾದಕ ಅಜಿಜುಲ್ಲಾ ಸರ್ಮಸ್ತ್ ಮಾತನಾಡಿ, ಸ್ವಾತಂತ್ರ್ಯ ಭಾರತಕ್ಕೆ ಮಾಧ್ಯಮ ಮುಖ್ಯ ಪಾತ್ರ ವಹಿಸಿದೆ. ಆದರೆ ಇಂದಿನ ಪತ್ರಿಕೋದ್ಯಮ ಕ್ಷೇತ್ರ ಉದ್ಯಮವಾಗಿ ಮಾರ್ಪಡಿಗಿದ್ದು, ಎಲೆಕ್ಟ್ರಾನಿಕ್ ಮಾಧ್ಯಮಗಳು ಸೇಲ್ಸ್ ಮಾಡಲ್ ಆಗಿವೆ. ಮಾಧ್ಯಮ ಕ್ಷೇತ್ರವನ್ನು ಸರ್ವನಾಶದತ್ತ ಕೊಂಡುಯುವ ಮೂಲಕ ಸಮಾಜವನ್ನು ವಿನಾಶದ ಕಡೆಗೆ ಕೊಂಡೋಯುತ್ತಿವೆ ಎಂದು ಪ್ರಸ್ತುತ ಮಾಧ್ಯಮದ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಾಂಗ ಕಾರ್ಯಾಂಗಕ್ಕೆ ಕಣ್ಣು ತೆಗೆಯುವ ಕೆಲಸ ಪತ್ರಕರ್ತರು ಮಾಡಬೇಕೆಂದು ಸಾಹಿತಿ ಮಜಿದ್ ದಗ್ಗಿ ಈ ಸಂದರ್ಭದಲ್ಲಿ ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ, ಭಾರತದ ಅಸ್ತಿತ್ವ ನಾಲ್ಕು ಸ್ಥಂಭದ ಮೇಲೆ ನಿಂತಿದೆ. ಇದರಲ್ಲಿ ಮಾಧ್ಯಮ ಕ್ಷೇತ್ರ ಸಮಾಜದ ಬಿಂಬವಾಗಿ ಇರಬೇಕು. ಸಮಾಜದ ನೋವು, ನಲಿವು ಸರಕಾರಕ್ಕೆ ಕನ್ನಡಿಯಾಗಿ ತೋರಿಸಬೇಕು.ಆದರೆ ಮಾಧ್ಯಮ ದಾರಿತಪ್ಪುತಿದೆ, ಗುಲಾಮ ಮತ್ತು ದಲಾಳಿತನಕ್ಕೆ ಮುಂದಾಗಿದೆ. ಒಂದು ಪಕ್ಷದ ಆಳಾಗಿ ಸತ್ಯ ಮುಚ್ಚಿಡುವ ಕೆಲಸ ಕೆಲ ಪತ್ರಕರ್ತ ನಡೆಸುತ್ತಿದ್ದಾರೆ. ಸತ್ಯ ತೋರಿಸುವ ಕೆಲಸ ಪತ್ರಕರ್ತರು ಮಾಡಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಯುನೂಸ್ ಮಾತನಾಡಿ, ಬರವಣೆಗೆಯಿಂದ ಸಮಾಸದ ಡೊಂಕುಗಳು ತಿದ್ದುವ ಕೆಲಸ ಪತ್ರಕರ್ತರು ಮಾಡಿ ಸಮಾಜದ ಭದ್ರತೆ ಮತ್ತು ಸುರಕ್ಷತೆಗಾಗಿ ಶ್ರಮಿಸುವ ನಿಷ್ಠವಂತ ಪತ್ರಕರ್ತರಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.
ಕೆ.ಬಿ.ಎನ್. ಟೈಮ್ಸ್ ಉರ್ದು ಪತ್ರಿಕೆಯ ಸಂಪಾದಕ ಅಜಿಜುಲ್ಲಾ ಸರ್ಮಸ್ತ್, ಹಿರಿಯ ಪತ್ರಕರ್ತ ಶಾಹಿತಿ ಡಾ. ಮಾಜಿದ್ ದಾಗೆ, ಭೀಮಾಶಂಕರ ಫೆರೋಜಾಬಾದ್, ಸಾಜಿದ್ ಅಲಿ, ಸೇಕ್ ಸಲ್ಮಾನ್, ರಾಜ್ ಅಹ್ಮದ್, ಚಾಂದ್ ಅಕ್ಬರ್, ರೀಯಾಜ್ ಖತಿಬ್, ಮುಜಿಬ್ ಅಲಿ ಖಾನ್ ಅವರಿಗೆ ಶಾಲು ಹುದಿಸಿ ಮಾಸ್ಕ್, ಸ್ಯಾನಿಟೈಜರ್ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆಯಲ್ಲಿ ಕೋವಿಡ್-19 ನಲ್ಲಿ ಶ್ರಮಿಸಿದ ಸಮಾಜ ಸೇವಕರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಉಪಾಧ್ಯಕ್ಷರಾದ ಎಜಾಜ್ ಅಲಿ ಇನಾಮದಾರ್, ಎಪಿಜಿ ಅಬ್ದುಲ್ ಕಲಾಂ ಸಂಸ್ಥೆ ಅಧ್ಯಕ್ಷೆ ರಾಫಿಯಾ ಶಿರೀನ್, ಸಾಜಿದ್ ಅಲಿ ರಂಜೋಳ್ವಿ, ರೀಯಾಜ್ ಪಟೇಲ್, ಸೈರಾ ಬಾನು, ಸಲೀಂ ಸಗರಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…