ಬಿಸಿ ಬಿಸಿ ಸುದ್ದಿ

ಕೋವಿಡ್ ಬಗ್ಗೆ ಭಯಪಡುವುದು ಬೇಡ ಜಾಗೃತೆಯಿಂದ ಇರಬೇಕು: ಶಾಸಕ ರಾಜುಗೌಡ

ಸುರಪುರ: ಕೊರೊನಾ ವೈರಸ್ ಹರಡುವಿಕೆ ನಿತ್ಯವು ಹೆಚ್ಚಾಗುತ್ತಿದೆ.ಇಂತಹ ಸಮಯದಲ್ಲಿ ಜನರು ಎಚ್ಚರಿಕೆಯಿಂದಿರುವುದು ತುಂಬಾ ಅವಶ್ಯಕವಾಗಿದೆ. ವೈರಸ್‌ನ ಕುರಿತು ಜನರು ಭಯಪಡುವುದನ್ನು ಬಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕ ನರಸಿಂಹನಾಯಕ(ರಾಜೂಗೌಡ) ಅವರು ಹೇಳಿದರು.

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಸ್ವ-ಇಚ್ಛೆಯಿಂದ ಬಂದು ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಣೆಗೊಳಪಟ್ಟು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಈಗಾಗಲೇ ನನ್ನ ಕ್ಷೇತ್ರ ,ಜಿಲ್ಲೆ ಸೇರಿದಂತೆ ಇತರೆಡೆ ಹೋಗಿ ಬಂದಿದ್ದೇನೆ ಹಾಗೂ ನಾನು ಟೆಸ್ಟ್ ಮಾಡಿಸಿ ಕೊಳ್ಳುವುದರಿಂದ ಜನರಿಗೆ ಜಾಗೃತಿ ಮೂಡಿಸಲು ಈ ಪರೀಕ್ಷೆಗೆ ಒಳಪಟ್ಟಿರುವುದಾಗಿ ತಿಳಿಸಿದರು.

ಆರಂಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಿದರು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಲ್ಲರೂ ಭಾವಿಸಿದರು, ಆದರೆ ಲಾಕ್ ಡೌನ್ ಸಡಿಲಿಕೆ ಯಾದಗಿನಿಂದ ಕೊರಾನಾ ಹೋಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ ಅದು ತಪ್ಪು ಕಲ್ಪನೆಯಾಗಿದೆ. ಈಗ ಕೊರಾನಾ ಸೊಂಕು ಹರಡುವಿಕೆ ಹೆಚ್ಚಾಗುತ್ತಿದೆ ಅದನ್ನು ಹೋಗಲಾಡಿಸುವುದು ಸರಕಾರದ ಜವಾಬ್ದಾರಿ ಇದೆ ಅನ್ನುವುದಕ್ಕಿಂತ ನಮ್ಮ ನಿಮ್ಮ ಜವಾಬ್ದಾರಿ ಎಂದು ತಿಳಿದು ಜನರು ಅನಗತ್ಯವಾಗಿ ಹೊರಗಡೆ ಬರುವುದನ್ನು ನಿಲ್ಲಿಸಬೇಕು,ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಯಾರಿಗಾದರೂ ಕೆಮ್ಮು ನೆಗಡಿ, ಜ್ವರ ಇದ್ದಲ್ಲಿ ಭಯಪಡದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ, ಏಕೆಂದರೆ ಪ್ರತಿಯೊಬ್ಬರ ಮನೆಯಲ್ಲಿ ವೃದ್ದರು ಮಕ್ಕಳು ಇರುವುದರಿಂದ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು.

ವೈದ್ಯರು, ನಗರಸಭೆ, ಪೊಲೀಸ್‌ರು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿದಂತೆ ತಮ್ಮ ಹಾಗೂ ಕುಟುಂಬ ರಕ್ಷಣೆ ಮರೆತು ನಮ್ಮ-ನಿಮ್ಮ ರಕ್ಷಣೆಗಾಗಿ ಕೊರಾನಾ ಹೋಗಲಾಡಿಸಲು ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ಕೊರೊನಾ ವಾರಿಯರ್ಸ್‌ನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಇಒ ಅಂಬ್ರೇಶ,ಶಾಸಕರ ಆಪ್ತ ವಿರುಪಾಕ್ಷಿ ಕೋನಾಳ ಗಂಟಲು-ಮೂಗಿನ ದ್ರವ ಪರೀಕ್ಷೆಗೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ವಿ.ನಾಯಕ, ಹಿರಿಯ ವೈದ್ಯಾಧಿಕಾರಿ ಡಾ:ಓಂಪ್ರಕಾಶ ಅಂಬುರೆ, ಡಾ:ಷವರ್ಧನ ರಫಗಾರ, ಜಿಪಂ.ಮಾಜಿ ಸದಸ್ಯ ಎಚ್.ಸಿ.ಪಾಟೀಲ್ ಯುವ ಮುಖಂಡರಾದ ಶಂಕರನಾಯಕ, ಶ್ರೀನಿವಾಸನಾಯಕ ದರಬಾರಿ, ಮಂಜುನಾಥ್ ಬೈರಮಡ್ಡಿ ಸೇರಿದಂತೆ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

18 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago