ಕಲಬುರಗಿ: ಪ್ರಸ್ತುತ ಬೇಸಿಗೆ ಕಾಲದಲ್ಲಿ ಕಲಬುರಗಿ ನಗರದಲ್ಲಿ ನೀರಿನ ಕುಡಿಯುವ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಕುಡಿಯುವ ನೀರು ಸರಬರಾಜು ಕುರಿತು ಸಾರ್ವಜನಿಕರಿಂದ ಬರುವ ದೂರುಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಜಲಮಂಡಳಿಯ ಅಧಿಕಾರಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ ಕಲಬುರಗಿ ನಗರದ ಪ್ರತಿ 5 ವಾರ್ಡಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ಜೂನ್ ೧೦ರವರೆಗೆ ನಿಯೋಜಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಅವರು ಆದೇಶಿಸಿದ್ದಾರೆ.
ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಜಲಮಂಡಳಿಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಜಲಮಂಡಳಿ ಅಧಿಕಾರಿಗಳ ಹೆಸರು ಹಾಗೂ ನಿರ್ವಹಿಸುವ ವಾರ್ಡುಗಳ ವಿವರ ಹಾಗೂ ಪಾಲಿಕೆಯ ನೋಡಲ್ ಅಧಿಕಾರಿಗಳ ಹೆಸರು ಹಾಗೂ ಮೇಲ್ವಿಚಾರಣೆ ಮಾಡುವ ವಾರ್ಡುಗಳ ವಿವರ ಇಂತಿದೆ.
ವಾರ್ಡ ಸಂಖ್ಯೆ 16P 17P 24, 25, 26, 27P, 29P,30, 31, 39P, 41, 42, 43, 44P 45P, 46, 47, 48P ಗಳನ್ನು ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ದೀಲಿಪ್ ಸಿಂಗ್ (ಮೊಬೈಲ್ ಸಂಖ್ಯೆ 9448650051) ಹಾಗೂ ಉಮೇಶ ಪಂಚಾಳ (ಮೊಬೈಲ್ ಸಂಖ್ಯೆ 9480689519) ಅವರು ನಿರ್ವಹಿಸುತ್ತಿದ್ದಾರೆ. ಈ ವಾರ್ಡುಗಳ ಮೇಲ್ವಿಚಾರಣೆಗಾಗಿ ಪಾಲಿಕೆಯಿಂದ ನೋಡಲ್ ಅಧಿಕಾರಿಯಾಗಿ ಸಹಾಯಕ ಇಂಜನೀಯರ್ ರಾಜನ್ ಮೊಬೈಲ್ ಸಂಖ್ಯೆ 900981323ಇವರನ್ನು ನೇಮಿಸಿದ್ದು, ಇವರಿಗೆ ವಾರ್ಡ ಸಂಖ್ಯೆ 02, 17, 24, 25 ಮತ್ತು ೨೬ರ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ ಕಿರಿಯ ಇಂಜಿನಿಯರ್ ದತ್ತು ಮೊಬೈಲ್ ಸಂಖ್ಯೆ 7760732441 ಇವರಿಗೆ ವಾರ್ಡ್ ಸಂ. ೪೪, ೪೫, ೪೬, ೪೭ ಮತ್ತು ೪೮ ಹಾಗೂ ಕಿರಿಯ ಇಂಜಿನಿಯರ್ ಶಾಂತಪ್ಪ ನಂದೂರ ಮೊಬೈಲ್ ಸಂಖ್ಯೆ 9449634100 ಇವರಿಗೆ ವಾರ್ಡ್ ಸಂ. 43, 51, 52, 49 ಗಳಿಗೆ ನಿಯೋಜಿಸಲಾಗಿದೆ.
ವಾರ್ಡ ಸಂಖ್ಯೆ 1, 3, 6, 7, 8, 16P, 17P, 18, 19, 20, 22, 23, 32 ಗಳನ್ನು ಜಲಮಂಡಳಿಯ ಸಹಾಯಕ ಇಂಜಿನಿಯರ್ ಕೆ.ಎಂ. ಜೋಶಿ ಅವರು (ಮೊಬೈಲ್ ಸಂಖ್ಯೆ ೯೪೮೦೬೮೯೫೧೮) ನಿರ್ವಹಿಸುತ್ತಿದ್ದಾರೆ. ಈ ವಾರ್ಡುಗಳ ಮೇಲ್ವಿಚಾರಣೆಗಾಗಿ ಮಹಾನಗರ ಪಾಲಿಕೆಯಿಂದ ನೋಡಲ್ ಅಧಿಕಾರಿಯಾಗಿ ಸಹಾಯಕ ಇಂಜಿನಿಯರ್ ಸೈಯದ್ ಮಲೀಕ್ ಮೊಬೈಲ್ ಸಂಖ್ಯೆ 7019941495 ಇವರನ್ನು ನೇಮಿಸಿದ್ದು, ಇವರಿಗೆ ವಾರ್ಡ ಸಂಖ್ಯೆ ೩, ೬, ೭, ೮ ಮತ್ತು ೩೫ರ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ ಕಿರಿಯ ಇಂಜಿನಿಯರ್ ಪ್ರಭಾಕರ ಭರ್ಗೆ ಮೊಬೈಲ್ ಸಂಖ್ಯೆ 9740752816 ಇವರಿಗೆ ವಾರ್ಡ ಸಂಖ್ಯೆ 18, 19, 22, 23 ಮತ್ತು ೩೪, ಕಿರಿಯ ಇಂಜಿನಿಯರ್ ಅಲ್ಲಾವುದ್ದೀನ ಮೊಬೈಲ್ ಸಂಖ್ಯೆ9108193486 ಇವರಿಗೆ ವಾರ್ಡ ಸಂಖ್ಯೆ 20, 21, 40, 41 ಮತ್ತು ೪೨ ಹಾಗೂ ಕಿರಿಯ ಇಂಜಿನಿಯರ್ ಖಾಜಾ ನಿಜಾಮುದ್ದೀನ ಮೊಬೈಲ್ ಸಂಖ್ಯೆ 8105327777 ಇವರಿಗೆ ವಾರ್ಡ ಸಂಖ್ಯೆ 22, 33, 36, 37 ಮತ್ತು ೩೯ ಗಳಿಗೆ ನಿಯೋಜಿಸಲಾಗಿದೆ.
ವಾರ್ಡ ಸಂಖ್ಯೆ 2, 4, 5, 9, 10, 12, 13, 14, 15, 16P, 27P, 28, 29P, 32P, 38P, 48P, 50, 53, 54 ಹಾಗೂ ೫೫ ಗಳಿಗೆ ಜಲಮಂಡಳಿಯ ಸಹಾಯಕ ಇಂಜಿನಿಯರ್ ಅಬ್ದುಲ್ ಬಾಸೀತ್ (ಮೊಬೈಲ್ ಸಂಖ್ಯೆ ೯೪೮೦೬೮೯೫೧೬) ನಿರ್ವಹಿಸುತ್ತಿದ್ದಾರೆ. ಈ ವಾರ್ಡುಗಳ ಮೇಲ್ವಿಚಾರಣೆಗಾಗಿ ಮಹಾನಗರ ಪಾಲಿಕೆಯ ನೋಡಲ್ ಅಧಿಕಾರಿಯಾಗಿ ಸಹಾಯಕ ಇಂಜಿನಿಯರ್ ಯುವರಾಜ ಮೊಬೈಲ್ ಸಂಖ್ಯೆ 8951875797ಇವರನ್ನು ನೇಮಿಸಿದ್ದು, ಇವರಿಗೆ ವಾರ್ಡ ಸಂಖ್ಯೆ 5,10,11,12,14,28ರ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ ಕಿರಿಯ ಇಂಜಿನಿಯರ್ ರವಿಂದ್ರನಾಥ ಚವ್ಹಾಣ ಮೊಬೈಲ್ ಸಂಖ್ಯೆ 9448645213 ಇವರಿಗೆ ವಾರ್ಡ ಸಂ. 1, 15, 16, 26, 27, 29, ಕಿರಿಯ ಇಂಜಿನಿಯರ್ ಸುನೀಲ ಒಂಟಿ ಮೊಬೈಲ್ ಸಂಖ್ಯೆ 9449051111 ಇವರಿಗೆ ವಾರ್ಡ ಸಂಖ್ಯೆ 30, 32, 13, 04 ಮತ್ತು ೦೯) ಹಾಗೂ ಕಿರಿಯ ಇಂಜಿನಿಯರ್ ಜಹಾಂಗೀರ ಮೊಬೈಲ್ ಸಂಖ್ಯೆ 8762274441 ಇವರಿಗೆ ವಾರ್ಡ ಸಂಖ್ಯೆ 31, 50, 53, 54 ಮತ್ತು ೫೫) ಗಳಿಗೆ ನಿಯೋಜಿಸಲಾಗಿದೆ.
ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹ್ಮದ್ ರಿಯಾಜ್ (ಮೊಬೈಲ್ ಸಂಖ್ಯೆ 8494856409) ಇವರು ಈ ಕಾರ್ಯದ ಮೇಲ್ವಿಚಾರಣೆ ಮಾಡಲಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ.ಪಾಟೀಲ್ ಮೊಬೈಲ್ ಸಂಖ್ಯೆ 9480813143 ಇವರು ಈ ಎಲ್ಲ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆ ಮಾಡಲಿದ್ದಾರೆ.
ಆಯಾ ವಾರ್ಡಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರವಾಣಿ ಮುಖಾಂತರ ಕುಡಿಯುವ ನೀರು ಪೂರೈಕೆ ಕುರಿತು ದೂರುಗಳು ಸಲ್ಲಿಸಿದ್ದಲ್ಲಿ ಅವುಗಳಿಗೆ ಮೇಲ್ಕಂಡ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅಗತ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಚಾಚು ತಪ್ಪದೆ ಮಾಡಬೇಕು. ನಂತರ ಇದರ ಅನುಸರಣಾ ವರದಿಯನ್ನು ಮೇಲ್ವಿಚಾರಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಪಾಲಿಕೆಯಿಂದ ಮಂಡಳಿಗೆ ನಿಯೋಜಿಸಿದ ಸಿಬ್ಭಂದಿಗಳನ್ನು ಜೂನ್ ೧೦ರ ನಂತರ ಹಿಂಪಡೆಯಲಾಗುತ್ತದೆ. ಕುಡಿಯುವ ನೀರು ಸರಬರಾಜು ಸಂಪೂರ್ಣ ಜವಾಬ್ದಾರಿ ಜಲಮಂಡಳಿಯದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…