ಬಿಸಿ ಬಿಸಿ ಸುದ್ದಿ

ಪುಸ್ತಕ ಲೇಖಕರಿಗೆ ಗೌರವಧನ ಪ್ರಶಸ್ತಿ ಯೋಜನೆ ಆಹ್ವಾನ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಯಾದಗಿರ, ಬೀದರ, ರಾಯಚೂರ ಹಾಗೂ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಲೇಖಕರಿಗೆ ಪ್ರಶಸ್ತಿ ನೀಡುವ ಸಲುವಾಗಿ, ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷದಂತೆ, ಈ ವರ್ಷವೂ ಆರು ಜಿಲ್ಲೆಗಳ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ. ಕನ್ನಡದ ಐದು, ಕನ್ನಡ ಜಾನಪದ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ, ತೆಲಗು ಮತ್ತು ಅನುವಾದ ಸಾಹಿತ್ಯ ಹಾಗೂ ಸಮಾಜ ವಿಜ್ಞಾನದ ಒಂದು ಪುಸ್ತಕ ಸೇರಿದಂತೆ ಪ್ರತಿ ಪುಸ್ತಕದ ಲೇಖರಿಗೆ (ಒಟ್ಟು ಹದಿಮೂರು) ತಲಾ ಐದು ಸಾವಿರ ರೂಪಾಯಿಗಳ ಗೌರವಧನ ನೀಡಲಾಗುವುದು. ಈ ಗೌರವಧನ ಪ್ರಶಸ್ತಿಗಾಗಿ ಪುಸ್ತಕ ಕಳಿಸುವ ಲೇಖಕರು ಕನಿಷ್ಠ 5 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸ ಮಾಡಿರಬೇಕು. ಪುಸ್ತಕ ಕನಿಷ್ಠ 100 ಪುಟವಿರಬೇಕು. ಕವನ ಸಂಕಲನ ಕನಿಷ್ಠ 70 ಪುಟಗಳನ್ನೊಳಗೊಂಡಿರಬೇಕು. ಪಿಎಚ್.ಡಿ. ಪ್ರಬಂಧ, ಬೇರೆ ಬೇರೆ ಲೇಖಕರ ಲೇಖನಗಳ ಸಂಪಾದನೆ ಸಂಗ್ರಹ ಗ್ರಂಥಗಳನ್ನು ಪರಿಗಣಿಸಲಾಗುವುದಿಲ್ಲ.

ಗೌರವಧನ ಅಪೇಕ್ಷಿಸುವ ಲೇಖಕರು 2019 ಜನೆವರಿ ಯಿಂದ 31 ಡಿಸಂಬರ್ 2019ರ ಅವಧಿಯೊಳಗೆ ಪ್ರಕಟವಾದ ಪುಸ್ತಕದ 5 (ಐದು) ಪ್ರತಿಗಳನ್ನು 20/08/2020 ರೊಳಗಾಗಿ ನಿರ್ದೇಶಕರು, ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಈ ವಿಳಾಸಕ್ಕೆ ರಜಿಸ್ಟರ್ ಅಂಚೆಯ ಮೂಲಕ ಇಲ್ಲವೇ ಖುದ್ದಾಗಿ ಬಂದು ತಲುಪಿ ಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಸಾರಾಂಗದ ನಿರ್ದೇಶಕರ ಸಹಾಯಕರನ್ನು ಸಂಪರ್ಕಿಸಬಹುದು. ಮೊಬೈಲ್ ನಂ.+91 98800 88643.
ನಿಯಮಗಳು:
1. ಗೌರವಧನ ಪ್ರಶಸ್ತಿಗೆ ಪುಸ್ತಕ ಲೇಖಕರು ಗುಲಬರ್ಗಾ ವಿಭಾಗದಲ್ಲಿ ಕನಿಷ್ಠ 5 ವರ್ಷಗಳಿಂದ ವಾಸ ಮಾಡಿರಬೇಕು.
2. ಭಾರತೀಯ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ಗೊಂಡ ಸ್ವತಂತ್ರ ಸಾಹಿತ್ಯ ಕೃತಿಯಾಗಿರಬೇಕು.
3. ಕನ್ನಡ, ಜಾನಪದ, ವಿಮರ್ಶೆ ಮತ್ತು ಸಂಶೋಧನೆಗೆ ಸಂಬಂಧಿಸಿದ ಕೃತಿಗಳು ಸ್ವತಂತ್ರವಾಗಿರಬೇಕು,
ಸಂಗ್ರಹಗಳಾಗಿರಬಾರದು.
4. ಪುಸ್ತಕಗಳ ಮೊದಲ ಮುದ್ರಣವನ್ನು ಮಾತ್ರ ಪರಿಗಣಿಸಲಾಗುವುದು.
5. ಪುಸ್ತಕಗಳ ಪ್ರಕಾಶಕರು ಯಾವ ಭಾಗದವರೇ ಆಗಿರಬಹುದು.
6. ಪುಸ್ತಕ (1) ಕನಿಷ್ಠ 100 ಪುಟಗಳಾಗಿರಬೇಕು. (2) ಕವನ ಸಂಕಲನ ಕನಿಷ್ಠ 70 ಪುಟಗಳಾಗಿರಬೇಕು.
7. ಪಿಎಚ್.ಡಿ. ಮಹಾಪ್ರಬಂಧ ಮತ್ತು ಬೇರೆ ಬೇರೆ ಲೇಖಕರ ಸಂಪಾದನ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
8. ಪುಸ್ತಕಗಳ ಮೇಲೆ 2019ನೇ ಸಾಲಿನ ಗೌರವಧನ ಯೋಜನೆಗಾಗಿ ಎಂದು ಸ್ಪಷ್ಟವಾಗಿ ಬರೆದಿರಬೇಕು.
9. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಚಿತ್ರಕಲೆಗೆ ಗೌರವಧನ ಯೋಜನೆ

 ನಿಯಮಗಳು:

1. ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯಲ್ಲಿಯೇ ಕನಿಷ್ಠ 5 ವರ್ಷಗಳಿಂದ ವಾಸ ಮಾಡಿದ ಕಲಾವಿದರಿರಬೇಕು.
2. ಒಬ್ಬ ಕಲಾವಿದರು ಒಂದು ಕಲಾಕೃತಿಯನ್ನು ಮಾತ್ರ ಕಳುಹಿಸಬೇಕು.
3. ಕಲಾಕೃತಿ 3ಘಿ2 ಕ್ಕಿಂತ ದೊಡ್ಡದಾಗಿ ಇರಬಾರದು.
4. ಕಲಾಕೃತಿ ಸೂಕ್ತವೂ ಸುಂದರವೂ ಆದ ಫ್ರÉ್ರೀಮ್ ಹೊಂದಿರಬೇಕು. ಕಲಾಕೃತಿಯನ್ನು ಪ್ರಸಾರಾಂಗ ಕಛೇರಿಗೆ ಮುಟ್ಟಿಸುವ ಮತ್ತು ತೆಗೆದುಕೊಂಡು ಹೋಗುವ ಜವಾಬ್ದಾರಿ ಕಲಾಕಾರರದ್ದಾಗಿರುತ್ತದೆ.
5. ಕಲಾಕೃತಿಯೂ ತೈಲವರ್ಣ, ಜಲವರ್ಣ, ಡ್ರಾಯಿಂಗ್, ಗ್ರಾಫಿಕ್ ಯಾವುದೇ ಇರಬಹುದು.
6. ಕಲಾಕೃತಿ ಸ್ವಂತದ್ದಾಗಿರಬೇಕು. ಕಾಪಿ ಮಾಡಿದ್ದನ್ನು ಮಾನ್ಯ ಮಾಡಲಾಗುವುದಿಲ್ಲ.
7. ಬಹುಮಾನ ಪಡೆದ ಕಲಾಕೃತಿಗಳನ್ನು ವಿಶ್ವವಿದ್ಯಾಲಯದಲ್ಲಿಯೇ ಶಾಶ್ವತ ಪ್ರದರ್ಶನಕ್ಕಾಗಿ ಇಟ್ಟುಕೊಳ್ಳಲಾಗುವುದು. ಅವುಗಳನ್ನು ಹಿಂದಿರುಗಿಸಲಾಗುವುದಿಲ್ಲ.
8. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಹೈದ್ರಾಬಾದ ಕರ್ನಾಟಕ ಭಾಗದ ಪ್ರಕಾಶಕರಿಗೆ ಗೌರವಧನ ಪ್ರಶಸ್ತಿ

ನಿಯಮಗಳು :

1. ಈ ಪ್ರಶಸ್ತಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಒಳಪಟ್ಟ ಕನ್ನಡ ಪುಸ್ತಕ ಪ್ರಕಾಶಕರು ಮಾತ್ರ ಅರ್ಹರಾಗಿರುತ್ತಾರೆ.
2. ಪ್ರಕಟಿತ ಪುಸ್ತಕಗಳು ಯಾವುದೇ ಭಾಗದ ಲೇಖಕರವು ಆಗಿರಬಹುದು.
3. ಪ್ರಕಾಶನ ಅಧಿಕೃತವಾಗಿ ನೊಂದಾಯಿಸಿಕೊಂಡಿರಬೇಕು. ಅದರ ಪ್ರತಿ ಲಗತ್ತಿಸಿರಬೇಕು.
4. ಈ ಪ್ರಶಸ್ತಿಯನ್ನು ಪ್ರಕಾಶನ ಸಂಸ್ಥೆಯು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಹಾಗೂ ಸಂಸ್ಥೆಯ ಒಟ್ಟು ಸಾಧನೆಯನ್ನು ಗಮನಿಸಿ ನೀಡಲಾಗುವುದು.
5. ಪ್ರಕಾಶನವು ತನ್ನ ಒಟ್ಟು ಸಾಧನೆ ಹಾಗೂ ಮೂರು ವರ್ಷದ ಪ್ರಕಟಣೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು ಅರ್ಜಿಯೊಂದಿಗೆ ಸಾದರಪಡಿಸಬೇಕು.
6. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಗಡಿನಾಡಿನ ಲೇಖಕರ ಕೃತಿಗೆ ಗೌರವಧನ ಪ್ರಶಸ್ತಿ

ನಿಯಮಗಳು:

1. ಪುಸ್ತಕಗಳ ಮೊದಲ ಮುದ್ರಣವನ್ನು ಮಾತ್ರ ಪರಿಗಣಿಸಲಾಗುವುದು.
2. ಪುಸ್ತಕಗಳ ಪ್ರಕಾಶಕರು ಯಾವ ಭಾಗದವರೇ ಆಗಿರಬಹುದು.
3. ಪುಸ್ತಕ (1) 100 ಪುಟಗಳಾಗಿರಬೇಕು. (2) ಕವನ ಸಂಕಲನ ಕನಿಷ್ಠ 70 ಪುಟಗಳಿರಬೇಕು.
4. ಸ್ವತಂತ್ರ ಕೃತಿ ಇರಬೇಕು. ಅನುವಾದ ಪರಿಗಣಿಸಲಾಗುವುದಿಲ್ಲ.
5. ಪಿಎಚ್.ಡಿ. ಮಹಾಪ್ರಬಂಧ ಮತ್ತು ಬೇರೆ ಬೇರೆ ಲೇಖಕರ ಸಂಕಲನಗಳನ್ನು ಪರಿಗಣಿಸಲಾಗುವುದಿಲ್ಲ.
6. ಪುಸ್ತಕಗಳ ಮೇಲೆ ಗೌರವಧನ ಯೋಜನೆಗಾಗಿ ಎಂದು ಸ್ಪಷ್ಟವಾಗಿ ಬರೆದಿರಬೇಕು.
7. ಪ್ರಶಸ್ತಿಗೆ ಸಲ್ಲಿಸುವ ಕೃತಿಯು ಜನೆವರಿ 2019 ರಿಂದ ಡಿಸಂಬರ್ 2019 ರೊಳಗಾಗಿ ಪ್ರಕಟವಾಗಿರಬೇಕು.
8. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಜನಪದ ಕಲಾವಿದರಿಗೆ ಗೌರವ ಧನ ಪ್ರಶಸ್ತಿ

 ನಿಯಮಗಳು:
1. ಈ ಪ್ರಶಸ್ತಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನಪದ ಕಲಾವಿದರು ಮಾತ್ರ ಅರ್ಹರಾಗಿರುತ್ತಾರೆ.
2. ಜನಪದ ಕಲಾವಿದರು 50 ವರ್ಷ ವಯಸ್ಸಿನ ಮೇಲ್ಪಟ್ಟವರಾಗಿರಬೇಕು.
3. ಅರ್ಜಿಯ ಜೊತೆಗೆ ತಮ್ಮ ಸಾಧನೆಯ ದಾಖಲೆಗಳನ್ನು ಲಗತ್ತಿಸಿರಬೇಕು.
4. ಕಲಾವಿದರ ಒಟ್ಟು ಸಾಧನೆಯನ್ನು ಗಮನಿಸಿ, ಪರಿಣಿತರ ಅಭಿಪ್ರಾಯದ ಮೇರೆಗೆ
ಗೌರವಧನ ನೀಡಲಾಗುವುದು.
5. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕಥಾ ಸ್ಪರ್ಧೆ
 ನಿಯಮಗಳು:

1. ಕಥೆಯು ಕನಿಷ್ಠ ಒಂದು ಸಾವಿರ ಹಾಗೂ ಗರಿಷ್ಠ ಎರಡು ಸಾವಿರ ಶಬ್ದಗಳಲ್ಲಿರಬೇಕು.
ಫುಲ್ ಸ್ಕೇಪ್ ಕಾಗದದ ಒಂದೇ ಬದಿಗೆ ಬೆರಳಚ್ಚಿಸಿದ (ಕಂಪ್ಯೂಟರಿಕರಿಸಿದ) ಐದು ಪ್ರತಿಗಳನ್ನು ರಜಿಸ್ಟರ್ಡ್ ಅಂಚೆಯ ಮೂಲಕ ಅಥವಾ ಖುದ್ದಾಗಿ ಬಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಿಗೆ ಸಲ್ಲಿಸಬೇಕು.
2. ಲಕೋಟೆಯ ಮೇಲ್ಬದಿಗೆ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಾಗಿ ಎಂದು ಬರೆದಿರಬೇಕು.
3. ತೀರ್ಪುಗಾರರ ನಿರ್ಣಯವೆ ಅಂತಿಮವಾಗಿರುತ್ತದೆ.
4. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ವಿಜ್ಞಾನ ಪುಸ್ತಕ ಲೇಖಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಾಗಿ

 ನಿಯಮಗಳು:
1. ಗೌರವಧನ ಪ್ರಶಸ್ತಿಗೆ ಪುಸ್ತಕ ಲೇಖಕರು ಕರ್ನಾಟಕದವರಾಗಿರಬೇಕು.
2. ಪುಸ್ತಕಗಳ ಮೊದಲ ಮುದ್ರಣವನ್ನು ಮಾತ್ರ ಪರಿಗಣಿಸಲಾಗುವುದು.
3. ಪಿಎಚ್.ಡಿ. ಮಹಾಪ್ರಬಂಧ ಮತ್ತು ಬೇರೆ ಬೇರೆ ಲೇಖಕರ ಸಂಪಾದನ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
4. ಪುಸ್ತಕಗಳ ಮೇಲೆ 2019ನೇ ಸಾಲಿನ ಗೌರವಧನ ಯೋಜನೆಗಾಗಿ ಎಂದು ಸ್ಪಷ್ಟವಾಗಿ ಬರೆದಿರಬೇಕು.
5. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಯಾದಗಿರ, ಬೀದರ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ, ಕೊಪ್ಪಲ ಜಿಲ್ಲೆಗಳ ಲೇಖಕರಿಗೆ, ಕಲಾವಿದರಿಗೆ ಹಾಗೂ ಪ್ರಕಾಶಕರಿಗೆ, ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವದಂಗವಾಗಿ ನೀಡುವ ಗೌರಧನಕ್ಕಾಗಿ ಅರ್ಜಿ/ ಕೃತಿಗಳನ್ನು, ಜೋತೆಗೆ ದಿ. ಜಯತೀರ್ಥ ರಾಜ ಪುರೋಹಿತ ಸ್ಮಾರಕ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಸಣ್ಣಕಥೆಗಳನ್ನು ಅಹ್ವಾನಿಸಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ  ಪ್ರೊ.ಎಚ್.ಟಿ.ಪೋತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago