ಬಿಸಿ ಬಿಸಿ ಸುದ್ದಿ

ಡಾ. ಫ.ಗು.ಹಳಕಟ್ಟಿ ಯವರ ಜಯಂತಿ ಆಚರಣೆ

ಕಲಬುರಗಿ: ಡಾ. ಫ.ಗು.ಹಳಕಟ್ಟಿ ಯವರ ಜಯಂತಿಯನ್ನು ರಾಮಲಿಂಗ ಚೌಡೇಶ್ವರಿ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಸ್ಥಳೀಯ ಯುವ ನ್ಯಾಯವಾದಿ, ಬಿಜೆಪಿ ಮುಖಂಡ, ಮಾಜಿ ಸಿಂಡಿಕೇಟ್ ಸದಸ್ಯರಾದ ರಾಘವೇಂದ್ರ ಕುಲಕರ್ಣಿ ಕೋಗನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ವಿದ್ಯಾಲಯ ಮಾಡದ ಕೆಲಸ ಒಬ್ಬ ಬಡ ನೇಕಾರ ಆಗಿನ ಇಂಗ್ಲೀಷ್ ಪ್ರಭಾವದಲ್ಲಿರುವ ವಾತಾವರಣದಲ್ಲಿ ಕನ್ನಡದ ವಚನ ಸಾಹಿತ್ಯ ವನ್ನು ಕಾಪಾಡಲು ತನ್ನ ಜೀವನ ಕಷ್ಟದಲ್ಲಿ ನೂಕಿ, ವೃತ್ತಿಯೂ ಬದಿಗೊತ್ತಿ, ಸಂಪಾದಿಸಿ, ಕೃಡಿಕರಿಸಿ, 12 ನೆ ಶತಮಾನದಲ್ಲಿ ಸಾಮಾಜಿಕ ನ್ಯಾಯ ಹೋಗಲಾಡಿಸಲು ಶ್ರಮಿಸಿದ ಬಸವೇಶ್ವರರನ್ನು ಮರು ಹುಟ್ಟಿಸಿದ ಕೀರ್ತಿ ಡಾ. ಫ.ಗು.ಹಳಕಟ್ಟಿಗೆ ಸಲ್ಲುತ್ತದೆ ಎಂದರು.

ನೇಕಾರರಿಗೆ ಪ್ರಸ್ತುತ ರಾಜಕೀಯದಲ್ಲಿ ತಮ್ಮ ಪಾಲಿನ ಹಕ್ಕುಗಳು ಪಡೆದುಕೊಳ್ಳಲು ಭಾರತದ ಸಂವಿಧಾನ ಅನುವು ಮಾಡಿಕೊಟ್ಟಿದೆ, ಕಲ್ಯಾಣ ಕರ್ನಾಟಕದ ಭಾಗದ ನೇಕಾರ ಸಮುದಾಯದ ವ್ಯಕ್ತಿ ಯನ್ನು MLC ಸ್ಥಾನ ಪಡೆಯಲು ನಾವೆಲ್ಲರೂ ಸಂಘಟಿತರಾಗಬೇಕಾಗಿದೆ ಎಂದು ಹಿರಿಯ ವಕೀಲರಾದ, ಶರಣ ಸಾಹಿತ್ಯ ಪರಿಷತ್ ನ ಸಂಚಾಲಕರಾದ ಅಂಡಗಿ ಶಿವರಾಜ್ ಅಂಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗ ನಾವು ಅಭಿವೃದ್ಧಿ ಯ ಕಡೆ ನಮ್ಮ ನಡೆ ಎನ್ನುವ ನೀತಿ ಅಳವಡಿಸಿ ಕೊಳ್ಳ ಬೇಕಾಗಿದೆ, ಈಗ ಸೂಕ್ತ ಸಮಯವು ಬಂದೊದಗಿದೆ, ನಮ್ಮ ಮುಂದೆ ಇರುವ ಎಲ್ಲಾ ಅಸಮಾನತೆಗಳ್ಳನ್ನು ಹೋಗಲಾಡಿಸಲು ಭೇದ ಭಾವಗಳ್ಳನ್ನು ಬದಿಗೊತ್ತಿ ಸಂಘಟಿತ ಹೋರಾಟವನ್ನು ನಾವೆಲ್ಲರೂ ಕೂಡಿ ಮಾಡಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಬೇಕಾಗಿದೆ, ನೇಕಾರರಲ್ಲೂ ರಾಜಿಕೀಯ ಪ್ರಜ್ಞೆ ಮುಡಿಸಬೇಕಾಗಿದೆ. ನೇಕಾರರಲ್ಲಿ ಒಗ್ಗಟ್ಟು ಬರಲು ಮೊದಲು ನಮ್ಮ ಸಮುದಾಯ ನೈದ ವಸ್ತ್ರವನ್ನು (ಬಟ್ಟೆಯನ್ನು) ತೊಟ್ಟು ಮುಂದಾಳತ್ವ ವಹಿಸಬೇಕಾಗಿದೆ ಎಂದು ಕರೆ ನೀಡಿದರು.

ಬಿಜೆಪಿಯಲ್ಲಿ ಈ ಭಾಗದಿಂದ ನೇಕಾರ ರಾರಿಗೂ ಅವಕಾಶವನ್ನು ನೀಡಿಲ್ಲ ಈ ಕಾರಣಕ್ಕಾದರು ಇಲ್ಲಿನ ಬಿಜೆಪಿ ಜನಪ್ರತಿನಿಧಿಗಳು, ಶಾಸಕರು ಒಗ್ಗಟ್ಟಿನಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸಾಮಾಜಿಕ ನ್ಯಾಯ ನೀಡುವಲ್ಲಿ ಶ್ರಮವಹಿಸಬೇಕಾಗಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ, ನೇಕಾರ ಹೋರಾಟ ಸಮಿತಿಯ ಶಿವಲಿಂಗಪ್ಪಾ ಅಷ್ಟಗಿ, ಮೋಹನ್ ಚಾರ್ಮಾ, ಸತೀಶ ಜಮಖಂಡಿ, ಕಲ್ಲಪ್ಪಾ ಸಕ್ಕರಿ  ಸಂತೋಷ್ ಗುರುಮಿಟ್ಕಲ್,  ಸಿದ್ದಪ್ಪ ಚೌಡಗುಂಡ,  ತಿಪ್ಪಣ್ಣ ಪೂಜಾರಿ, ಬಿಲಗುಂದಿ ಗ್ರಾಮದ  ಎಚ್.ಬಿರಾದಾರ  ಬಸವರಾಜ ಬಿರಾದಾರ ಇತರರು ಉಪಸ್ಥಿತರಿದ್ದರು.

ಇದಕ್ಕು ಮುನ್ನ ಮೊದಲಿಗೆ ಚಿ. ಶರಣಪ್ರಸಾದ ಜೇನ್ವೇರಿ, ಹಳಕಟ್ಟಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಗಮಿಸಿದ ಅತಿಥಿ ಗಣ್ಯ ಮಾನ್ಯ ವ್ಯಕ್ತಿಗಳನ್ನು ಸ್ವಾಗತಿಸಿದರು. ನಂತರ ನೇಕಾರ ಜಾಗ್ರತಿ ಗೀತೆ ಸಂಸ್ಥೆಯ ಕಾರ್ಯದರ್ಶಿ ವಿನೋದ ಕುಮಾರ ಜೇ ವಾಚಿಸಿದರು ಕೊನೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ  ಶರಣಪ್ಪ ಜೇನ್ವೇರಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago