ಬಿಸಿ ಬಿಸಿ ಸುದ್ದಿ

ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿ ಕಳಪೆ

ಶಹಾಬಾದ:ಸರಕಾರದ ಅಭಿವೃದ್ಧಿ ಕೆಲಸಗಳು, ಸಾರ್ವಜನಿಕರಿಗೆ ಲಾಭವಾಗುವುದಕ್ಕಿಂತ ಅಧಿಕಾರಿ, ಗುತ್ತಿಗೆದಾರರಿಗೆ ಹಾಗೂ ಜನಪ್ರತಿನಿಧಿಗಳಿಗೆ ಲಾಭ ತಂದು ಕೊಡುತ್ತವೆ ಎನ್ನುವುದು ಗುಟ್ಟಾಗಿ ಏನು ಉಳಿದಿಲ್ಲ. ಇದಕ್ಕೆ ಪೂರಕ ಎನ್ನುವಂತೆ ನಗರದ ಕೆಲ ಕಡೆ ನಡೆದಿರುವ ಕಳಪೆ ಸಿಸಿ ರಸ್ತೆ ಕಾಮಗಾರಿಗಳೇ ಸಾಕ್ಷಿ.

ನಗರದ ಮಧ್ಯಭಾಗದಲ್ಲಿರುವ ವಾರ್ಡ ನಂ. 19ರಲ್ಲಿ ಲೋಕೋಪಯೋಗಿ ಇಲಾಖೆಯ ಎಸ್ ಸಿಪಿ  ಯೋಜನೆಯ 53 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಆದರೆ ಸಿಸಿ ರಸ್ತೆ ಕಾಮಾಗಾರಿ ಕಳಪೆ ಹಾಗೂ ನಿಯಮ ಅನುಸಾರವಾಗಿ ನಡೆಯುತ್ತಿಲ್ಲ. ಗುತ್ತಿಗೆ ಹಿಡಿದ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿರುವುದು ಕಂಡು ಬಂದರೂ ಸಂಬಂಧಪಟ್ಟ ಜೆಇ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯ ವಾರ್ಡನ ಸಾರ್ವಜನಿಕರು ಆರೋಪಿಸಿದ್ದಾರೆ.


ಕ್ರೀಯಾ ಯೋಜನೆಯಲ್ಲಿ 4 ಇಂಚು ನೆಲ ಅಗೆದು, ಮುರುಮ್, ಕಂಕರ್ ಹಾಕಿ ರೋಲರ್ ಮಾಡಬೇಕಿತ್ತು.ಆದರೆ 4 ಇಂಚು ನೆಲ ಅಗೆದಿಲ್ಲ. ಮುರುಮ್ ಹಾಕಿಲ್ಲ. ರೋಲರ್ ಮಾಡಿಲ್ಲ. ನಂತರ ಕಂರ್ ಮುರುಮ್ ಹಾಕಿ ನೀರು ಹಡೆದು, ರೋಲರ್ ಮಾಡಬೇಕಿತ್ತು. ಅದು ಕೂಡ ಮಾಡಿಲ್ಲ. ಕೇವಲ ಇದ್ದ ನೆಲವನ್ನು ಸಮತಲಗೊಳಿಸಿ ನೇರವಾಗಿ ಸಿಸಿ ರಸ್ತೆ ಕಾಮಗಾರಿ ಮಾಡಿದ್ದಾರೆ.

ಅಲ್ಲದೇ ವಾರ್ಡ ಸದಸ್ಯರ ಗಮನಕ್ಕೂ ತರದೇ ಸಿಸಿ ರಸ್ತೆ ಕಾಮಗಾರಿ ಅರ್ಧದಷ್ಟು ಮಾಡಿ ಮುಗಿಸಿದ್ದಾರೆ. ಕ್ರೀಯಾ ಯೋಜನೆ ಪ್ರಕಾರ ಮಾಡದೇ ಇದ್ದರೂ ಅಧಿಕಾರಿಗಳು ಕಂಡು ಕಾಣದಂತೆ ವತರ್ಿಸುತ್ತಿದ್ದಾರೆ.ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಈ ಕಾಮಗಾರಿಯನ್ನು ತಮ್ಮ ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದರಿಂದ ಈ ರೀತಿಯ ಕಳಪೆ ಕಾಮಗಾರಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾರ್ಡ ಸದಸ್ಯ ನಾಗರಾಜ ಕರಣಿಕ್ ಗಂಭೀರವಾಗಿ ಆರೋಪಿಸಿದ್ದಾರೆ.
ಅಲ್ಲದೇ ಕೆಲವೇ ದಿನಗಳಲ್ಲಿ ಈ ರಸ್ತೆ ಬಿರುಕು ಬಿಟ್ಟು, ಹಳ್ಳ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ಮೇಲಾಧಿಕಾರಿಗಳು ಒಮ್ಮೆ ಬೇಟಿ ಪರಿಶೀಲಿಸಿ ಕಳಪೆ ಕಾಮಗಾರಿಯ ವಿರುದ್ಧ ಕ್ರಮ ಕೈಗೊಳ್ಳಲು ನಾಗರಾಜ ಒತ್ತಾಯಿಸಿದ್ದಾರೆ.

emedia line

Recent Posts

ಕಲಬುರಗಿ: ಫರಸಿ ತುಂಬಿದ ಲಾರಿ ಪಲ್ಟಿ: ಹಲವರಿಗೆ ಗಾಯ

ಕಲಬುರಗಿ: 11ಕ್ಕೂ ಹೆಚ್ಚು ಜನ ಕಾರ್ಮಿಕರು ಮತ್ತು ಪರಸಿ ತುಂಬಿದ ಲಾರಿಯೊಂದು ಉರುಳಿಬಿದ್ದು ಹಲವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿ…

16 mins ago

ವಾಡಿ: ಶ್ರಾವಣ ಶನಿವಾರದ ಪ್ರಯುಕ್ತ ಪ್ರಸಾದ ಸಂತರ್ಪಣೆ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವಿರುವ ಶಕ್ತಿ ಆಂಜನೇಯ ದೇವಸ್ಥಾನ ದಲ್ಲಿ ಮೂರನೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ವಡೆ…

19 mins ago

27ಕ್ಕೆ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಗೆ ಪರೀಕ್ಷೆ: ಪರೀಕ್ಷೆ ಸುಸೂತ್ರವಾಗಿ ನಡೆಸುವಂತೆ ಡಿ.ಸಿ. ಸೂಚನೆ

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗೆ…

22 mins ago

ಸೇಡಂನಲ್ಲಿ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಉದ್ಘಾಟನೆ

ಕಲಬುರಗಿ: ಜಿಲ್ಲೆಯ ಹೊಸ ತಾಲೂಕಿನಲ್ಲಿ ನೂತನ‌ ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ವೈದ್ಯಕೀಯ…

28 mins ago

ಅಂಗವಿಕಲ ಫಲಾನುಭವಿಗಳಿಂದ ಹಿರಿಯ ಅಧಿಕಾರಿಗಳಿಗೆ ಅಭಿನಂದನಾ ಮಹಾಪುರ

ಕಲಬುರಗಿ: ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಅಂಗವಿಕಲ ಕಲ್ಯಾಣ…

3 hours ago

ಸೆ. 23ಕ್ಕೆ ಕಲಬುರಗಿಯಲ್ಲಿ ಮುಖ್ಯಮಂತ್ರಿಗಳ ಜನಸ್ಪಂದನಾ ಸಭೆ: ಬಾಕಿ ಕಡತ ತ್ವರಿತ ವಿಲೇವಾರಿಗೆ ಡಿ.ಸಿ. ಸೂಚನೆ

ಕಲಬುರಗಿ; ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೆಪ್ಟೆಂಬರ್ 23 ರಂದು ಕಲಬುರಗಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವ “ಜನಸ್ಪಂದನಾ” ಸಭೆ ನಡೆಸಲಿದ್ದು, ಈ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420