ಕಲಬುರಗಿ: ನಗರದ ಏಶಿಯನ್ ಮಾಲ್ ಮೊದಲ ಮಹಡಿಯ ಬಟ್ಟೆ ಅಂಗಡಿಯಲ್ಲಿ 10, 12, ಐಟಿಐ, ಡಿಪ್ಲೋಮಾ, ಬಿ.ಇ, ಬಿ.ಟೆಕ್, ಮುತಾಂದ ಪದವಿಗಳ ಯಾವುದೇ ಶಿಕ್ಷಣ ನೀಡದೆ ನೇರವಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲಿ ಅಂಕಪಟ್ಟಿಗಳು ನೀಡುತ್ತಿದ ವ್ಯಕ್ತಿಯ ಅಡ್ಡೆಯ ಮೇಲೆ ದಾಳಿ ನಡೆಸಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಆಯುಕ್ತರಾದ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಎಸಿಪಿ ವಿಜಯಕುಮಾರ ನೇತೃತ್ವದ ತಂಡದ ಸ್ಟೇಷನ್ ಬಜಾರ್ ಪಿಎಸ್.ಐ ಎಲ್.ಎಚ್. ಗೌಂಡಿ, ಸಿಬ್ಬಂದಿಯಾದ ಮಲ್ಲಣ್ಣಗೌಡ, ಶಿವಾನಂದ, ರಾಘವೇಂದ್ರ ಪೊಲೀಸ್ ಠಾಣೆಯ ಪಿ.ಐ ಅರುಣಕುಮಾರ, ಸಿಬ್ಬಂದಿ ಕಿಶೋರ್, ಸಿಕ್ರೇಶ್ವರ, ದಾಳಿ ನಡೆಸಿದರು.
ಆರೋಪಿ ಮಹ್ಮದ್ ಖಾನ್ ಯುಸುಫ್ ಖಾನ್ (37)ಯನ್ನು ಬಂಧಿಸಿ, ಗೌಸ್ ನಗರ ತಾರಫೇಲ್ ಬಡವಾಣೆ ನಿವಾಸಿ ಎಂದು ಗುರುತಿಸಲಾಗಿದೆ. ಎರಡು ಲಕ್ಷ 20 ಸಾವಿರ ನಗದು, ಎರಡು ಲ್ಯಾಪ್ ಟಾಪ್, ಒಂದು ಹಾರ್ಡ್ ಡಿಸ್ಕ್, ವಿವಿಧ ಕಾಲೇಜಿನ ಹೆಸರಲ್ಲಿರುವ ಲೋಗೋ, ಹ್ಯಾಂಡ್ ಬಿಲ್ ಹಾಗೂ ಅನೇಕ ವಿದ್ಯಾರ್ಥಿಗಳ ಹೆಸರಲ್ಲಿರುವ ಅಂಕಪಟ್ಟಿಗಳನ್ನು ಪೊಲೀಸರು ಕಾರ್ಯಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ.
ಓರ್ವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ರಾಘವೇಂದ್ರ ಮತ್ತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಜಂಟಿ ಕಾರ್ಯಚರಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಪಿ.ಐ. ಸಿ.ಇಎನ್. ಹೊಲೀಸ್ ಠಣೆ ಸಂಜೀವಕುಮಾರ ಎನ್. ಕುಂಬಾರಗೆರೆ ಮತ್ತು ಸಿಬ್ಬಂದಿ ಮಹ್ಮದ್ ರಫೀಕ್, ವೇದರತ್ನಂ, ಚಂದ್ರಕಾಂತ, ದೇವಿಂದ್ರಪ್ಪಾ, ಜಗನ್ನಾಥರೆಡ್ಡಿ ಆರೋಪಿ ಮಹ್ಮದ್ ಖಾನ್ ವಿಚಾರಣೆಯಲ್ಲಿ ತಾನು ದೇಶದ ವಿವಿಧ ಭಾಗಗಳಲ್ಲಿರುವ ವಿಶ್ವವಿದ್ಯಾಲಯಗಳನ್ನು ಇಂಟರನೆಟ್‌ನಲ್ಲಿ ಪರಿಶೀಲಿಸಿ 10ನೇ, 12 ನೇ ತರಗತಿ, ಐಟಿಐ ಡಿಹೋಮಾ, ಬಿ.ಇ, ಬಿ.ಟೆಕ್, ಎಂ.ಬಿ.ಎ., ಎಂ.ಸಿ.ಎ, ಎಂ.ಟೆಕ್. ಪದವಿ ಪ್ರಮಾಣಪತ್ರಗಳನ್ನು ನೇರವಾಗಿ ಯಾವುದೇ ಶಿಕ್ಷಣ ನೀಡದೆ 30 ರಿಂದ 40 ದಿನಗಳಲ್ಲಿ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಝೆರಾಕ್ಸ್ ಅಂಕಪಟ್ಟಿ, ಐ.ಡಿ. ಪ್ರೂಫ್ ಮತ್ತು, ಫೋಟೋಗಳನ್ನು ಪಡೆದು, ಬಿ.ಇ. ಬಿಟೆಕ್ ಹದವಿ ಅಂಕಪಟ್ಟಿಗಳಿಗೆ 3 ಲಕ್ಷ ದಿಂದ 3 ವರೆ ಲಕ್ಷ, 90 ಸಾವಿರ ರೇಟ್ಗೆ ಎಂ.ಬಿ.ಎ, ಬಿಕಾಂ, ಬಿ.ಎಸ್.ಸಿ. ಅಂಕಪಟ್ಟಿ ನೀಡುತಿದ್ದು, 40 ರಿಂದ 50 ಸಾವಿರಕ್ಕೆ, ಎಸ್.ಎಸ್.ಎಲ್.ಸಿ. ಪಿ.ಯುಸಿ ನಕಲಿ ಅಂಕಪಟ್ಟಿಗಳನ್ನು ಮಾಡಿಕೊಡುತ್ತಿದ್ದ ಎನ್ನಲಾಗಿದೆ.
ದೇಶದ ಬೇರೆ ಬೇರೆ ರಾಜ್ಯದ ವಿಶ್ವ ವಿದ್ಯಾಲಯದ ನಕಲಿ ಅಂಕಪಟ್ಟಿಗಳನ್ನು ಮಾಡಿಕೊಡುತ್ತಿರುವ ವಿಚಾರಣೆಯಲ್ಲಿ ಬಂಹಿರಂಗ ಪಡಿಸಿದ್ದಾನೆ ಎನ್ನಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…