ಬಿಸಿ ಬಿಸಿ ಸುದ್ದಿ

ಶಿಕ್ಷಣದಲ್ಲಿನ ಧರ್ಮ ನಿರಪೇಕ್ಷತೆಗೆ ಕತ್ತರಿ: ಆಕ್ರೋಶ

ವಾಡಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಣತಿಯ ಮೇರೆಗೆ 9ನೇ ತರಗತಿಯಿಂದ 12ನೇ ತರಗತಿಯ ಪಠ್ಯಕ್ರಮದಿಂದ ಧರ್ಮ ನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ, ಮುಂತಾದ ಪ್ರಮುಖ ಅಧ್ಯಾಯಗಳನ್ನು ತೆಗೆದುಹಾಕುವ ಸಿಬಿಎಸ್‍ಇ ನಿರ್ಧಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಖಂಡಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಆಲ್ ಇಂಡಿಯಾ ಸೇವ್ ಎಜುಕೇಷನ್ ಕಮೀಟಿ( ಎಐಎಸ್‍ಇಸಿ) ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ ಹಾಗೂ ನಗರ ಸಮಿತಿ ಸಂಚಾಲಕ ಯೇಸಪ್ಪ ಜಿ.ಕೆ, ಶಿಕ್ಷಣದ ಮೇಲೆ ಹೊಸ ನಿರಂಕುಶ ಮತ್ತು ಅಪ್ರಜಾತಾಂತ್ರಿಕ ದಾಳಿ ನಡೆಸುತ್ತಿದೆ ಎಂದು ಸಿಬಿಎಸ್‍ಇ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಣತಿಯ ಮೇರೆಗೆ, ಕೋವಿಡ್-19 ಪಿಡುಗಿನ ಪರಿಣಾಮ ಲಾಕ್‍ಡೌನ್ ಆಗಿ, ಶಾಲೆಗಳಲ್ಲಿ ಪಾಠಗಳು ನಡೆಯದಿದ್ದರಿಂದ, ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಇಳಿಸುವ ಕುಂಟು ನೆಪವೊಡ್ಡಿ, 9ನೇ ತರಗತಿಯಿಂದ 12ನೇ ತರಗತಿಯ ಪಠ್ಯಕ್ರಮದಿಂದ ಹಲವು ವಿಷಯಗಳನ್ನು ತೆಗೆದುಹಾಕಿದೆ ಎಂದು ಆಪಾದಿಸಿದ್ದಾರೆ.
ದೇಶದಾದ್ಯಂತ ಶಿಕ್ಷಣ ತಜ್ಞರುಗಳಿಂದ ಪಡೆದ 1500ಕ್ಕೂ ಅಧಿಕ ಸಲಹೆಗಳ ಆಧಾರದ ಮೇಲೆ, ಮೂಲ ಸಾರವನ್ನು ಉಳಿಸಿಕೊಂಡು ಪಠ್ಯಕ್ರಮದಲ್ಲಿ ಶೇ.30ರಷ್ಟು ಕಡಿತ ಮಾಡಿರುವ ನಿರ್ಧಾರವನ್ನು ಸ್ವತಃಕೇಂದ್ರ ಮಾನವ ಸಂಪನ್ಮೂ¯ ಅಭಿವೃದ್ಧಿ ಸಚಿವರೇ ಘೋಷಿಸಿದ್ದಾರೆ.  ಆದರೆ ರಾಷ್ಟ್ರಮಟ್ಟದಲ್ಲಿ ಹೆಸರು ಹೊಂದಿರುವ ಯಾವುದೇ ಶಿಕ್ಷಣ ತಜ್ಞರೊಂದಿಗೆ, ವಿದ್ಯಾರ್ಥಿ-ಶಿಕ್ಷಕರ ಸಂಘಟನೆಯೊಂದಿಗೆ ಅಥವ ಉಳಿದ ಪಾಲುದಾರರೊಂದಿಗೆ ಇಲ್ಲಿ ಸಮಾಲೋಚನೆ ನಡೆಸಿಲ್ಲ ಎಂದು ದೂರಿದ್ದಾರೆ.

ಧರ್ಮ ನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ, ಪೌರತ್ವ, ರಾಷ್ಟ್ರೀಯತಾವಾದದಂತಹ ಪ್ರಮುಖ ವಿಷಯಗಳನ್ನು ರಾಜನೀತಿಶಾಸ್ತ್ರ, ಸಮಾಜ ಶಾಸ್ತ್ರ ಮತ್ತು ಇತಿಹಾಸದ ಪಠ್ಯಕ್ರಮಗಳಿಂದ ತೆಗೆದುಹಾಕಿರುವುದು, ಇಲ್ಲಿ ಬೇರೆಯದೇ ಹುನ್ನಾರವಿರುವುದನ್ನು ಸೂಚಿಸುತ್ತದೆ. ಸರ್ಕಾರದ ಈ ನಿರ್ಧಾರವು, ದೇಶದ ಸ್ವಾತಂತ್ರ್ಯ ಹೋರಾಟದ ದಿನಗಳಿಂದ ಇಲ್ಲಿಯವರೆಗೂ ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಬಂದು ಹೋಗಿರುವ ಹಲವು ಗಣ್ಯರ ಜೀವನಪರ್ಯಂತ ಹೋರಾಟದ ಫಲವಾಗಿ ಬಂದಿರುವ ಪಠ್ಯಕ್ರಮ ರೂಪಿಸುವ ಸಾಂವಿಧಾನಿಕ-ಸಾಂಪ್ರದಾಯಿಕ ಚೌಕಟ್ಟಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ.

ಪ್ರಮುಖವಾದ ವಿಷಯಗಳನ್ನು ಈ ರೀತಿ ತೆಗೆದುಹಾಕಿರುವ ಪರಿಣಾಮವಾಗಿ ಸಂಪೂರ್ಣ ಪಠ್ಯಕ್ರಮವು, ಆಳ್ವಿಕ ಆರೆಸ್ಸೆಸ್-ಬೆಜೆಪಿ ಜೋಡಿಯು ಪ್ರತಿಪಾದಿಸುವ ರಾಷ್ಟ್ರತ್ವದ ಪರಿಕಲ್ಪನೆಯನ್ನು ಒಪ್ಪಲು ಬೇಕಾಗಿರುವ ಮಟ್ಟಿಗೆ ವಿದ್ಯಾರ್ಥಿಗಳ ಜ್ಞಾನ ಮತ್ತು ಮನಸ್ಥಿತಿಯನ್ನು ಬೆಳೆಸುವ, ಕ್ರಮವಿಲ್ಲದ ವಿಷಯಗಳ ಗುಚ್ಛವಾಗುತ್ತದೆ. ಅಷ್ಟೇ ಅಲ್ಲದೇ, ಈ ಕಡಿತಗೊಳಿಸಿದ ಪಠ್ಯಕ್ರಮವು, ಸಮಕಾಲೀನ ಪ್ರಸ್ತುತತೆ ಮತ್ತು ಪ್ರಾಮುಖ್ಯತೆ ಹೊಂದಿರುವ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ವಿಚಾರದಲ್ಲಿ ತೀವ್ರ ತೊಡಕನ್ನುಂಟು ಮಾಡುವುದರಿಂದ, 12ನೇ ತರಗತಿಯ ನಂತರ ಉನ್ನತ ಶಿಕ್ಷಣಕ್ಕಾಗಿನ ಪ್ರವೇಶ ಪರೀಕ್ಷೆಗಳಲ್ಲಿ ಹಾಜರಾಗುವ ವಿದ್ಯಾರ್ಥಿಗಳ ಹಿತಾಸಕ್ತಿಗೆ ಇದು ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜುಲೈ 8ರಂದು, ಪಠ್ಯಕ್ರಮದಲ್ಲಿ ಕಡಿತ ಮಾಡುತ್ತಿರುವುದಕ್ಕೆ ಕಾರಣವೇನೆಂದು ವಿವರಿಸಿ ಪತ್ರಿಕಾ ಪ್ರಕಟಣೆಯೊಂದನ್ನು ಸಿಬಿಎಸ್‍ಇ ಬಿಡುಗಡೆ ಮಾಡಿದೆ. ಆದರೆ ಈ ಪ್ರಕಟಣೆಯೇ ವಿರೋಧಾಭಾಸ ಮತ್ತು ಗೊಂದಲಗಳಿಂದ ತುಂಬಿದೆ. ಮೊದಲನೆಯದಾಗಿ, ಇಲ್ಲಿ ಎಷ್ಟು ವಿಷಯಗಳನ್ನು ಬದಲಾಯಿಸಲಾಗಿದೆ ಮತ್ತು ಈ ವರ್ಷಕ್ಕೆ ಮಾತ್ರ ಸೀಮಿತವೇ ಎಂಬುದು ಅಪ್ರಸ್ತುತ.

ಪ್ರಶ್ನೆಯೆಂದರೆ, ಧರ್ಮನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆಯಂತಹ ಪ್ರಮುಖ ವಿಷಯಗಳನ್ನು ಇಲ್ಲಿ ತೆಗೆದುಹಾಕಲಾಗುತ್ತಿದೆ. ಈ ವಿಷಯದಲ್ಲಿ ಸಿಬಿಎಸ್‍ಇ ತದ್ವಿರುದ್ಧ ಹೇಳಿಕೆಗಳನ್ನು ನೀಡಿದೆ. ಸಿಬಿಎಸ್‍ಇ ಹೇಳುವಂತೆ, ಕೈಬಿಡಲಾಗುತ್ತಿರುವ ಈ ವಿಷಯಗಳನ್ನು ಸುಧಾರಿಸಿದ ಪಠ್ಯಕ್ರಮದಲ್ಲಿ ಬೋಧಿಸಲಾಗುತ್ತದೆ ಇಲ್ಲವೆ ಎನ್‍ಸಿಇಆರ್‍ಟಿ ರೂಪಿತ ಪರ್ಯಾಯದಲ್ಲಿ ಇವುಗಳು ಇವೆ. ಎರಡು ಪರ್ಯಾಯಗಳಾದರೂ ಏಕೆ? ಈ ವಿಷಯಗಳು ಸುಧಾರಿತ ಪಠ್ಯಕ್ರಮದಲ್ಲಿ ಇಲ್ಲದೆಯೂ ಇರಬಹುದು.

ಹಾಗಿದ್ದರೆ, ಒಂದರಿಂದ ತೆಗೆದು, ಮತ್ತೊಂದರಲ್ಲಿ ಹಾಕುವುದರ ಉದ್ದೇಶವಾದರೂ ಏನು? ಎಂದು ಸಿಬಿಎಸ್‍ಇಯ ಕ್ರಮವನ್ನು ಪ್ರಶ್ನಿಸಿದ್ದಾರೆ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಜೊತೆಗೆ, ಸರ್ಕಾರವು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಲು, ದೇಶದ ಎಲ್ಲಾ ಸಹಹೃದಯಿ ಮತ್ತು ಶಿಕ್ಷಣಪ್ರೇಮಿ ಜನತೆಯು ಈ ನಡೆಯ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕೆಂದು ಮನವಿ ಮಾಡಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago