ಬಿಸಿ ಬಿಸಿ ಸುದ್ದಿ

ಹಾನಿಗೀಡಾದ ಪ್ರದೇಶಗಳ ಸರ್ವೇ ಮಾಡಿ ವರದಿ ಸಲ್ಲಿಸಿರಿ: ಡಾ. ಎನ್.ವ್ಹಿ. ಪ್ರಸಾದ

ಕಲಬುರಗಿ: ಮಹಾನಗರದಲ್ಲಿ ನಿನ್ನೆ 11 ಸೆಂ.ಮೀ.ನಷ್ಟು (110 ಮಿ.ಮೀ.) ಮಳೆಯಾಗಿದ್ದು, ಹಾನಿಯಾಗಿರುವ ಪ್ರದೇಶಗಳ ಸರ್ವೇ ಮಾಡಿ ಇವತ್ತೇ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ. ಎನ್.ವ್ಹಿ. ಪ್ರಸಾದ ಅವರು ಸೂಚಿಸಿದರು.
ಗುರುವಾರ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ತುರ್ತಾಗಿ ಕರೆದಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಿನ್ನೆಯ ರೀತಿ ಇನ್ನೂ ಮಳೆಯಾಗುವ ಸಂಭವವಿದ್ದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬುಲ್ಡೋಜರ್, ಹಿಟಾಚಿ ಹಾಗೂ ಕಾರ್ಮಿಕರನ್ನು ನಿಯೋಜಿಸಿ ಕೆಲಸ ನಿರ್ವಹಿಸಲು ಸಜ್ಜಾಗುವಂತೆ ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಆರ್.ಪಿ.ಜಾಧವ ಅವರಿಗೆ ತಿಳಿಸಿದರು.
ನಿನ್ನೆಯ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ಸರ್ವೇ ಮಾಡಿ ಅದರಲ್ಲಿ ಹಾನಿಯಾಗಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಬೇಕು, ಅವರಿಗೆ ಕೂಡಲೇ ಪರಿಹಾರ ನೀಡುವ ಕೆಲಸವಾಗಬೇಕು ಹಾಗೂ ನಗರದಲ್ಲಿ ಈಗಾಗಲೇ ಬೀಳುವ ಸ್ಥಿತಿಯಲ್ಲಿರುವ ಮನೆ, ಕಟ್ಟಡ ಹಾಗೂ ಕಚೇರಿ ಕಟ್ಟಡಗಳನ್ನು ಗುರುತಿಸಿ, ಅಲ್ಲಿರುವ ಜನತೆ ಹಾಗೂ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕು ಎಂದರು.
ಈ ಸಂಬಂಧ ನಗರದ ಕೆಲವು ವಾರ್ಡಗಳನ್ನು ಒಳಗೂಡಿಸಿ, ವಲಯವಾರು ಒಂದು ತಂಡ ರಚಿಸಿ ತುರ್ತಾಗಿ ಕೆಲಸಗಳ ಕೈಗೊಳ್ಳಬೇಕು ಎಂದು ಹೇಳಿದರು. ಮಳೆಯ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವಂತೆ ಹೆಲ್ಪ್ಪ್ಡೆಸ್ಕ್ ರಚಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ಮಾತನಾಡಿ, ಈಗಾಗಲೇ ಮಹಾನಗರ ಪಾಲಿಕೆಗೆ ಸಂಬಂಧಿಸಿದ ದೂರುಗಳನ್ನು ನೀಡಲು ಎರಡು ವಾಟ್ಸಾಪ್ ನಂಬರ್ಗಳನ್ನು ರಚಿಸಲಾಗಿದೆ. ಮೊಬೈಲ್ ನಂಬರ್ 63635 44601 ಹಾಗೂ 63635 38302 ವಾಟ್ಸಾಪ್ಗೆ ಸಮಸ್ಯೆಯ ಒಂದು ಛಾಯಾಚಿತ್ರ ತೆಗೆದು ಸಂಪೂರ್ಣ ಮಾಹಿತಿ ನೀಡಿದಲ್ಲಿ ಕೂಡಲೇ ಕ್ರಮಕೈಗೊಳ್ಳುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡಲಿದೆ.
ಮಳೆಯಾದ ಸಂದರ್ಭದಲ್ಲಿ ಒಳಚರಂಡಿ, ಮ್ಯಾನ್ಹೋಲ್, ರಸ್ತೆ ಇನ್ನಿತರವುಗಳ ಬಗ್ಗೆÀ ದೂರುಗಳನ್ನು ವಾಟ್ಸಾಪ್ಗೆ ಛಾಯಾಚಿತ್ರ ಸಮೇತ ಸಂಪೂರ್ಣ ಮಾಹಿತಿ ನೀಡಿದಲ್ಲಿ ಕೂಡಲೆ ಕ್ರಮ ಕೈಗೊಳ್ಳಲಾಗುದು ಎಂದು ವಿವರಿಸಿದರು.
ಪ್ರಾದೇಶಿಕ ಆಯುಕ್ತರು ಮಾತನಾಡಿ, ಮಳೆಯಿಂದ ಜಲಾವೃತವಾಗಿರುವ ಪ್ರದೇಶಗಳ ನಾಗರಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಒಂದು ಸ್ಥಳವನ್ನು ಪಡೆದು ಗಂಜಿ ಕೇಂದ್ರಗಳನ್ನು ನಿರ್ಮಿಸುವಂತೆ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಅವರಿಗೆ ಸೂಚಿಸಿದರು.
ಕೋವಿಡ್-19 ಅತೀಯಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಂಜಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಂಜಿ ವಿತರಿಸುವ ಕೆಲಸವಾಗಬೇಕು. ಇದರಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದರು.
ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಮಾತನಾಡಿ, ನಗರದ ಪ್ರತಿಯೊಂದು ಟ್ರಾನ್ಸಫಾರ್ಮರ್ ಹಾಗೂ ಕೇಬಲ್ವೈಯರ್ ಸ್ಥಿತಿಗಳನ್ನು ಪರಿಶೀಲಿಸಬೇಕು, ದುರಸ್ತಿಯಲ್ಲಿದ್ದರೆ ಇಂದೇ ಸರಿಪಡಿಸಿ ವರದಿ ನೀಡುವಂತೆ ಜೆಸ್ಕಾಂ ವ್ಯವಸ್ಥಾಪಕರೂ ಆದ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಅವರಿಗೆ ಸೂಚಿಸಿದರು.
ಪ್ರತಿಯೊಂದು ಟ್ರಾನ್ಸಫಾರ್ಮರ್ಗಳ ಹತ್ತಿರ ಜನಸಾಮಾನ್ಯರು ಹೋಗದಂತೆ ಒಂದು ಡೇಂಜರ್ ಝೋನ್ ಗುರುತಿನ ಫಲಕ ಅಳವಡಿಸಬೇಕು ಅಥವಾ ಟ್ರಾನ್ಸಫಾರ್ಮರ್ ಸುತ್ತಲೂ ಬ್ಯಾರಿಕೇಡ್ ತರಹ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಜೆಸ್ಕಾಂ ದೂರು ಕೋಶಕ್ಕೆ ಕರೆ ಮಾಡಿದಲ್ಲಿ ಯಾವಾಗಲೂ ಕಾರ್ಯನಿರತವಾಗಿದೆ (ಬಿಜಿ) ಅಂತ ಉತ್ತರ ಬರತ್ತದೆ, ಜನರು ಇದರಿಂದ ತುಂಬಾ ತೊಂದರೆಗೊಳಪಡುತ್ತಾರೆ, ಈ ದೋಷ ಸರಿಪಡಿಸಬೇಕೆಂದು ಅವರು ಅಧಿಕಾರಿಗಳಿಗೆ ತಿಳಿಸಿದರು.  ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ಶರತ್.ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಡಿಸಿಪಿ ಕಿಶೋರ ಬಾಬು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಉದ್ಯಾನವನದಲ್ಲಿ ನೀರು ತುಂಬಿರುವುದನ್ನು ವೀಕ್ಷಣೆ: ನಿನ್ನೆ ಬಿದ್ದ ಮಳೆಯಿಂದ ರೈಲ್ವೆ ಬಿಜ್ಡ್ ಹತ್ತಿರದ ದತ್ತ ನಗರದ ಉದ್ಯಾನವನದಲ್ಲಿ ನೀರು ತುಂಬಿರುವುದನ್ನು ವೀಕ್ಷಣೆ ಮಾಡಿ, ಉದ್ಯಾನವನದಲ್ಲಿ ತುಂಬಿರುವ ನೀರನ್ನು ತುರ್ತಾಗಿ ಖಾಲಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ. ಎನ್.ವ್ಹಿ. ಪ್ರಸಾದ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೇರಿದಂತೆ ಉಪಸ್ಥಿತರಿದ್ದರು.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago