ಬಿಸಿ ಬಿಸಿ ಸುದ್ದಿ

ಛಲವಿರುವ ಮನುಷ್ಯ ಇತಿಹಾಸ ನಿರ್ಮಿಸುತ್ತಾನೆ

ಪ್ರತಿಯೊಬ್ಬ ಮನುಷ್ಯ ಛಲವನ್ನು ಇಟ್ಟುಕೊಂಡು ಜೀವಿಸಬೇಕು. ಛಲವಿಲ್ಲದ ಮನುಷ್ಯ ಏನೊಂದನ್ನು ಸಾಧನೆ ಮಾಡಲು ಸಾಧ್ಯವಿಲ್ಲ. ಈ ಜಗತ್ತು ಬೆಳೆದಿರುವುದು, ಬೆಳೆಯುತ್ತಿರುವುದು ಛಲವಿರುವ ವ್ಯಕ್ತಿಯಿಂದ ಹೊರತು ಇನ್ನಾರಿಂದಲೂ ಅಲ್ಲ. ಛಲವೆಂಬುದು ಮನುಷ್ಯನೊಳಗೆ ಅಂತರ್ಗತವಾಗಿರುವ ಪಾದರಸದಂತೆ. ಸದಾ ಚಲನೆಯಲ್ಲಿ ಅದು ಇರಬಯಸುತ್ತದೆ. ತನ್ನೊಳಗಿನ ಚಲನ ಶಕ್ತಿಯನ್ನು ಯಾವತ್ತು ಕಳೆದುಕೊಳ್ಳುತ್ತದೊ ಅದು ಪಾದರಸವಾಗಿ ಉಳಿಯುವುದಿಲ್ಲ. ಯಾವ ವಿಷಯಕ್ಕಾಗಿ ಛಲವನ್ನು ಹೊಂದಿದ್ದೇವೆ ಎಂಬುದೂ ಪ್ರಮುಖವಾಗುತ್ತದೆ.

ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾಗೆ ಹೋಗುವ ಸಂದರ್ಭದಲ್ಲಿ ರೈಲ್ವೆಯಿಂದ ಅವರನ್ನು ಹೊರ ಹಾಕದೆ ಹೋಗಿದ್ದರೆ, ಆ ಘಟನೆಯಿಂದ ನೊಂದು ಗಾಂಧೀಜಿ ಪ್ರತಿಭಟಿಸುವ ಛಲ ಇಲ್ಲದೆ ಹೋಗಿದ್ದರೆ ಸತ್ಯಾಗ್ರಹ ಎಂಬ ಪದ ಹಾಗೂ ಅದಕ್ಕಿರುವ ಶಕ್ತಿ ನಮಗೆ ಗೊತ್ತಾಗಲು ಸಾಧ್ಯವೆ ಇರಲಿಲ್ಲ. ಚೈತನ್ಯ ಉಳ್ಳ ಪ್ರತಿಯೊಂದು ಜೀವಿಯೂ ಸಹ ಛಲವನ್ನು ಹೊಂದಿಯೆ ಇರಬೇಕೆಂದು ಹಂಬಲಿಸುವವನು ನಾನು.

ಸಣ್ಣ ಪ್ರಶ್ನೆಗಳನ್ನು ಎದುರಿಸುವ ಛಲ ಇಲ್ಲದವರು ಬದುಕಿನಲ್ಲಿ ಬರುವ ದೊಡ್ಡ ದೊಡ್ಡ ಸವಾಲುಗಳನ್ನು ಹೇಗೆ ಸ್ವೀಕರಿಸಬಲ್ಲರು ? ಯಾರು ಸವಾಲುಗಳನ್ನು ಸ್ವೀಕರಿಸುತ್ತಾರೊ, ಕಷ್ಟ ನಷ್ಟಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಸಿದ್ಧರಾಗಿರುತ್ತಾರೊ ಅವರಿಗೆ ಮಾತ್ರ ಜಗತ್ತು ಕಾದಿದೆ. ಮಹಾತ್ಮ ಬುದ್ಧ ಸವಾಲುಗಳನ್ನು ಸ್ವೀಕರಿಸುವ ಛಲ ಇಲ್ಲದೆ ಹೋಗಿದ್ದರೆ ಒಬ್ಬ ಉತ್ತಮ ರಾಜನಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿ ಹೋಗುತ್ತಿದ್ದರು ಅಷ್ಟೆ. ಅಂದಿನ ಸಂದರ್ಭದಲ್ಲಿ ಸಿದ್ಧಾರ್ಥನಿಗೆ ಎದುರಾದ ಕೋಶಲ ದೇಶದ ನೀರಿನ ಸಮಸ್ಯೆ ಆತನನ್ನು ಸಮಾಜ ಮುಖಿಯಾಗಿ ಧುಮುಕುವಂತೆ ಮಾಡಿತು. ಈಗಾಗಲೇ ಅರ್ಥ ಮಾಡಿಕೊಂಡಿದ್ದ ಬದುಕಿನ ಕ್ಷಣಿಕ ದಿನಗಳು ಅರ್ಥಪೂರ್ಣವಾಗಿ ಕಳೆಯಬೇಕೆಂದು ನಿರ್ಧರಿಸಲು ಕಾರಣವಾಗಿದ್ದವು.

ನರೆ ಕೆನ್ನೆಗೆ, ತೆರೆ ಗಲ್ಲಕೆ,ಶರೀರ ಗೂಡುವೊಗದ ಮುನ್ನ,
ಹಲ್ಲು ಹೋಗಿ ,ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ
ಪೂಜಿಸು ಕೂಡಲಸಂಗಮದೇವನ

ಮನುಷ್ಯ ಜೀವನಕ್ಕೆ ಅಲ್ಪಾಯುಷ್ಯವಿದೆ. ಕೊನೆಗೊಂದು ದಿನ ಕಾಲನ ತುಳಿತಕ್ಕೆ ಒಳಗಾಗಿ ಇಲ್ಲಿಂದ ಜಾಗ ಖಾಲಿ ಮಾಡಲೆಬೇಕು. ಸತ್ತ ಮೇಲೆ ಮುಕ್ತಿ ಎಂದು ಹಂಬಲಿಸಿ, ಜೀವನವನ್ನು ಹಾಳು ಮಾಡಿಕೊಂಡು ಬದುಕುವುದಕ್ಕಿಂತ, ಇರುವಾಗಲೆ ಜೀವನದ ಸವಾಲುಗಳನ್ನು ಸ್ವೀಕರಿಸಿ ಬದುಕಬೇಕು. ಕೆನ್ನೆಗೆ ನರೆ, ಗಲ್ಲಕೆ ತೆರೆ ಬಂದು , ಹಲ್ಲು ಹೋಗಿ ,ಬೆನ್ನು ಬಾಗಿ, ಕಾಲ ಮೇಲೆ ಕೈಯನೂರಿ, ಕೋಲು ಹಿಡಿಯುವ ಮುನ್ನವೆ ಸತ್ಯವನ್ನು ಜೀವಿಸಬೇಕು ಎಂದು ಅರ್ಥ ಮಾಡಿಕೊಂಡ ಸಿದ್ಧಾರ್ಥ ಮಹಾತ್ಮ ಬುದ್ಧನಾದ ಕತೆ ನಮಗೆಲ್ಲ ಗೊತ್ತಿರುವಂಥದ್ದೆ.

ಬಸವಣ್ಣನವರೂ ಸಹ ಎಲ್ಲರೂ ಬಲ್ಲಂತೆ ಬಂಗಾರದ ಚಮಚೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವರೆ. ತಂದೆ ಮಾದರಸ ಬ್ರಾಹ್ಮಣ ಅಗ್ರಹಾರದ ಮುಖ್ಯಸ್ಥ. ಸೋದರಳಿಯ ಬಲದೇವರಸ ಬಿಜ್ಜಳ ರಾಜನಲ್ಲಿ ಭಂಡಾರದ ಮುಖ್ಯಸ್ಥ. ವೇದ ಶಾಸ್ತ್ರ ಆಗಮ ಪುರಾಣಗಳ ಓದು ಸಂಸ್ಕಾರ ಹುಟ್ಟುತ್ತಲೆ ಲಭ್ಯವಾದ ಸಂಗತಿಗಳು. ಆದರೆ ತನ್ನ ಅಕ್ಕ ಅಕ್ಕನಾಗಮ್ಮ£ಗೆ ಇಲ್ಲದ ಧಾರ್ಮಿಕ ಸಂಸ್ಕಾರವನ್ನು ಪ್ರಶ್ನಿಸಿ ಮನೆಯಿಂದ ಹೊರಬೀಳಬೇಕಾಯಿತು.

ಇದ್ದಕಿದ್ದಂತೆ ಮನೆಯಿಂದ ಹೊರಬಿದ್ದ ಬಸವಣ್ಣ ಹಾಗೂ ಅಕ್ಕನಾಗಮ್ಮ ಅನುಭವಿಸಿದ ಕಷ್ಟ ನಷ್ಟಗಳು ನೋವುಗಳು ಅವರಿಬ್ಬರಿಗೆ ಗೊತ್ತು. ವೈದಿಕ ವ್ಯವಸ್ಥೆ ಸಮಾಜದಲ್ಲಿ ಧರ್ಮದ ಹೆಸರಿನ ಮೇಲೆ ನಡೆಸಿದ್ದ ಶೋಷಣೆಯ ನಾನಾ ಮುಖಗಳನ್ನು ಬಸವ ಶೋಧಿಸಿ ಪ್ರಕಟಿಸುವ ಛಲ ಹೊಂದಿದ್ದರೆಂತಲೆ ಇಂದಿಗೂ ಬಸವ ಎಲ್ಲರ ಬದುಕಿಗೆ ಬೆಳಕಾದ ಮಹಾತ್ಮನಾಗಿ ಕಾಣುತ್ತಾರೆ.

ತೀರಾ ಇತ್ತೀಚಿನ ದಿನಗಳಲ್ಲಿ ನಮ್ಮ ನಡುವೆಯೆ ಇದ್ದು ಹೋದ ರಾಮ ಮನೋಹರ ಲೋಹಿಯಾ, ಪೆರಿಯಾರ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ಓಶೋ ಮುಂತಾದವರು ಛಲದಿಂದ ಬಾಳಿ ಬದುಕಿದರೆಂತಲೆ ದೈಹಿಕವಾಗಿ ಅವರು ಇಲ್ಲದೆ ಹೋದರೂ ಸಹ ಅವರ ವಿಚಾರಗಳ ಮೆರವಣಿಗೆ ಸದಾ ನಡೆದೆ ಇರುತ್ತದೆ. ಇದಕ್ಕೆ ಕಾರಣವೆಂದರೆ ಛಲದ ಅವರ ಬದುಕು.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ.
ನಡೆಯೊಳಗೆ ನುಡಿಯ ಪೂರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ £ಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ ಎನ್ನನದ್ದಿ £ೀನೆದ್ದು ಹೋಗು
ಕೂಡಲಸಂಗಮದೇವಾ

ಛಲದ ಬದುಕಿಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದ ಬಸವಣ್ಣನವರು ದೇವರ ಮುಲಾಜಿಯ ಅಡಿಯಲ್ಲಿ ಬದುಕಿದವರಲ್ಲ. ಭಕ್ತಿಯ ಅಂದರೆ ನೇರ ನಿಷ್ಠುರವಾದ ಮಾತುಗಳನ್ನು ನುಡಿಯುವೆ. ಪ್ರಾಮಾಣಿಕ ದುಡಿಮೆಯನ್ನು ಮಾಡುವೆ. ನನ್ನ ಬೆವರ ಹನಿಯ ಮೂಲಕ ಬಂದಿರುವ ಹಣದಲ್ಲಿ ದಾಸೋಹವನ್ನು ಮಾಡಿ ನಿಜ ಭಕ್ತನಾಗುವೆ. ನಾನು ಏನು ಹೇಳುತ್ತೇನೋ ಅದರಂತೆ ಬದುಕುವೆ. £ಮ್ಮ ಕೈಯಲ್ಲಿ ನನ್ನ ಗುಣ ನಡತೆಗಳ ಕುರಿತು ನ್ಯಾಯ £ೀಡುವ ತಕ್ಕಡಿ ಇದೆ. ಯಾವುದೆ ಮುಲಾಜಿಗೆ ಬೀಳದೆ ನನ್ನ ತಪ್ಪುಗಳು ಕಂಡು ಬಂದರೆ ದೇವರೆ £ೀನು ನನ್ನನ್ನು ತುಳಿದು ಹೋಗಬಹುದು ಎಂಬ ಮಾತು ಬಸವಣ್ಣನವರ ಛಲವಂತಿಕೆ ಸಾಕ್ಷಿಯಾಗಿದೆ.

ಅಗ್ಘವಣಿ ಹೊನ್ನಯ್ಯ ಎಂಬ ಶರಣ : ಬದುಕನ್ನು ಅದು ಬಂದಂತೆ ಸ್ವೀಕರಿಸಬೇಕೆಂದು ಹೇಳುವವನಲ್ಲ.
ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು.
ನೇಮದಾತಂಗೆ ಛಲಬೇಕು, ಛಲಬೇಕು.
ಹಿಡಿದುದ ಬಿಡಲಾಗದಯ್ಯಾ.
ಹುಲಿಗೆರೆಯ ವರದ ಸೋಮನಾಥನು
ಮನ ಮುಟ್ಟಿದ ಧೀರಂಗಲ್ಲದೆ ಸೋಲುವನಲ್ಲ

ಹೇಡಿಗಳು- ರಣ ಹೇಡಿಗಳು ಮಾತ್ರ ತಮ್ಮ ಬದುಕನ್ನು ಪಣಕ್ಕೆ ಇಟ್ಟುಕೊಂಡಿರುವುದಿಲ್ಲ. ರಕ್ಷಣಾತ್ಮವಾಗಿ ಬದುಕನ್ನು ರೂಪಿಸಿಕೊಂಡು ಹೋಗುತ್ತಿರುತ್ತಾರೆ. ಇದರಲ್ಲಿ ಸ್ವಲ್ಪವೆ ತಪ್ಪಿದರೂ ಸಹ ಪ್ರಪಾತಕ್ಕೆ ಬಿದ್ದು ಒದ್ದಾಡಿ ಹೋಗುತ್ತಾರೆ. ಆದರೆ ಶರಣರು ಛಲದ ವಿಷಯದಲ್ಲಿ ಆದಂತೆ ಆಗಲಿ, ಮಾದಂತೆ ಮಾಣಲಿ ಎಂದು ಬದುಕಿದವರಲ್ಲ. ಕೊಲುವೆನೆಂಬ ಭಾಷೆ ದೇವರದಾದರೆ ಗೆಲುವೆನೆಂಬ ಭಾಷೆ ಭಕ್ತನದು ಎಂದು ಕ್ಷಾತ್ರತೇಜವನ್ನು ಹೊತ್ತು ಬದುಕಿದವರು. ಮನುಷ್ಯ ಚಿಂತನೆ, ಆದರ್ಶ,ಬದ್ಧತೆ,ಗಳೊಂದಿಗೆ ಮುನ್ನಡೆಯಬೇಕಾಗಿದೆ. ಮನವಿಲ್ಲದೆ ಮಾಡುವ ಕೆಲಸ ಬರೀ ಕೆಲಸವೆ£ಸಿಕೊಳ್ಳುತ್ತದೆ. ಮನ ಮುಟ್ಟಿ, ತನು ಮುಟ್ಟಿ ಮಾಡುವ ಕೆಲಸ ಕಾಯಕವೆ£ಸಿಕೊಳ್ಳುತ್ತದೆ. ಪ್ರತಿ ಕೆಲಸವೂ ಕಾಯಕವಾಗಬೇಕಾದರೆ ತನು ಮುಟ್ಟಿ, ಮನ ಮುಟ್ಟಿ ಮಾಡಲೇಬೇಕಾಗುತ್ತದೆ.

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ

ಪರಧನ, ಪರಸತಿ, ಪರದೈವವನ್ನು ಒಪ್ಪಿಕೊಳ್ಳದ ಛಲ ಯಾರಲ್ಲಿ ಇರುತ್ತದೋ ಆತ ಖಂಡಿತವಾಗಿಯೂ ಧೀರನಾಗಿ ಬಾಳುತ್ತಾನೆ. ಯಾರು ತಾತ್ವಿಕ ಗಟ್ಟಿತವನ್ನು ತನ್ನೊಳಗೆ ರೂಢಿಸಿಕೊಳ್ಳುತ್ತಾನೊ ಆತ ಶಕ್ತಿಯುತನೂ ಅದೆ ವೇಳೆಗೆ ಹೃದಯ ಸಂಪನ್ನನೂ ಆಗುತ್ತಾನೆ. ಯಾರೊಂದಿಗೂ ಹೊಂದಿಕೊಳ್ಳದೆ ಹೋದರೂ ಸಹ ಕಾಣಿಯ ಸೋಲ ಅರ್ಧ ಗಾಣಿಯ ಗೆಲ್ಲ ಎಂಬ ಬಾಳಿ ಕೂಡಲ ಸಂಗಮನಿಗೆ ಆತ ಪ್ರಿಯನಾಗುತ್ತಾನೆ.

ಹಿಡಿದುದ ಬಿಡುವನಲ್ಲ ; ಬಿಟ್ಟುದ ಹಿಡಿವವನಲ್ಲ.
ನಡು ಮಧ್ಯದಲ್ಲಿ ಬಡತನ ಎಡರು ಕಂಟಕ ಬಂದಲ್ಲಿ
ಕಡು ದುಃಖಿಯಾಗಿ ಬಳಲುವವನಲ್ಲ.
ಅಡಿಗಡಿಗೆ ಲಿಂಗಪೂಜೆಯ ,
ಅಡಿಗಡಿಗೆ ಜಂಗಮ ದಾಸೋಹವ ಮರೆವವನಲ್ಲ.
ಇದು ಕಾರಣ ಅಖಂಡೇಶ್ವರಾ,
£ಮ್ಮ ಮಹೇಶ್ವರನ ಚಾರಿತ್ರವು ಇಹಲೋಕದೊಳಗಿಲ್ಲಾ

ಛಲವಿರುವ ಮನುಷ್ಯ ಯಾವ ಮೌಲ್ಯಗಳನ್ನು ಹೊತ್ತುಕೊಂಡು ನಡೆದಿರುವನೊ ಅದನ್ನು ಎಂದು ಬಿಟ್ಟುಕೊಡಲಾರ. ಕಷ್ಟ ನಷ್ಟ ನೋವು ಬಂದರೂ ಅವನ್ನು ಎದುರಿಸಿ ನಿಲ್ಲುವ ಶಕ್ತಿ ಆತನೊಳಗಿನ ಪ್ರಾಣಿಕತೆ ತುಂಬಿರುತ್ತದೆ. ಶ್ರೀಮಂತಿಕೆ ಇಲ್ಲದಿದ್ದರೂ ಬಡತನ ಕ್ಷಣ ಕ್ಷಣಕ್ಕೂ ಕಾಡುತ್ತಿದ್ದರೂ ಸಹ ಅಡಿಗಡಿಗೆ ಲಿಂಗಪೂಜೆ(ಸಾಮಾಜಿಕ ಚಿಂತನೆ) ಅಡಿಗಡಿಗೆ ಜಂಗಮ (ಚಲನಶೀಲ ಸಮಾಜ ಕಟ್ಟುವ ಕಾತುರತೆ) ವನ್ನು ಆತ ಮರೆಯಲಾರ. ಬದುಕಿನಲ್ಲಿ ಛಲವಿದ್ದರೆ ಮಾತ್ರ ನಮ್ಮೊಳಗಿನ ಉದ್ದೇಶ ಈಡೇರುತ್ತದೆ. ಬಯಕೆಗಳು, ಚಿಂತನೆಗಳು ಸಾಕಾರವಾಗುತ್ತವೆ.

  • ಕೃಪೆ: ಶರಣ ಮಾರ್ಗ, ಜುಲೈ-2020
emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

48 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago