ಸುರಪುರ: ನಾಗರ ಪಂಚಮಿ ಬಂದರೆ ನಾಡಿನ ಗ್ರಾಮೀಣ ಭಾಗದಲ್ಲಿ ಜನರ ಪಂದ್ಯಾಟಗಳು ಆರಂಭಗೊಳ್ಳುತ್ತವೆ.ಗುಂಡು ಎಸೆಯುವ ಕಲ್ಲು ತೂರುವ ನಿಂಬೆ ಹಣ್ಣು ಚಿಮ್ಮುವ ಕಬ್ಬಿಣದ ಆರೆಗಳ ಎಸೆಯುವ ಭಾರ ಎಲೆಯುವ ಹೀಗೆ ಅನೇಕ ವಿಧದ ಪಂದ್ಯಗಳು ಆಡುವ ಮೂಲಕ ಅದಕ್ಕೆ ಹಣ ಮತ್ತು ಪಡಿ ಪದಾರ್ಥಗಳನ್ನು ಕಟ್ಟಿ ಪಂದ್ಯಗಳ ಆಚರಿಸುವುದು ಬಹುಕಾಲ ದಿಂದ ನಡೆದು ಕೊಂಡು ಬರುತ್ತಿರುವ ರೂಢಿಯಾಗಿದೆ.
ಅದರಂತೆ ನಾಗರ ಪಂಚಮಿ ಅಂಗವಾಗಿ ಪಂದ್ಯ ಕಟ್ಟಿ ೧೨೦ ಕಿಲೋ ಮೀಟರ್ ನಡೆಯಲು ಮುಂದಾಗಿದ್ದಾನೆ ಇಲ್ಲೊಬ್ಬ ಭೂಪ.ಶಹಾಪುರ ತಾಲೂಕಿನ ಇಟಗಿ ಗ್ರಾಮದಿಂದ ಸುರಪುರ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ೧೬ ಗಂಟೆಗಳಲ್ಲಿ ಕಾಲ್ನಡಿಗೆಯಲ್ಲಿ ಬಂದು ದರುಶನ ಮಾಡಿ ಮರಳಿ ಇಟಗಿ ಗ್ರಾಮಕ್ಕೆ ತಲಪುವ ಪಂದ್ಯವನ್ನು ಕಟ್ಟಿ,ಇದಕ್ಕೆ ೧ ಲಕ್ಷ ರೂಪಾಯಿ ಬಾಜಿ ಕಟ್ಟಲಾಗಿದೆ.
ಪಂದ್ಯ ಕಟ್ಟಿದಂತೆ ಮಲ್ಲಣ್ಣ ಮದರಿ ಬೆಳಿಗ್ಗೆ ೬ ಗಂಟೆಗೆ ಇಟಗಿ ಗ್ರಾಮದಿಂದ ಹೊರಟು ಮದ್ಹ್ಯಾನ ೧ ಗಂಟೆಗೆ ಶ್ರೀ ವೇಣುಗೋಪಾಲ ಸ್ವಾಮಿ ದೇವರ ದರುಶನ ಪಡೆದು ಮರಳಿದ.ಈ ಸಂದರ್ಭದಲ್ಲಿ ಪಂದ್ಯ ಕಟ್ಟಿದವರ ತಂಡದಲ್ಲಿದ್ದ ಮಲ್ಲಯ್ಯ ಸ್ವಾಮಿ ಇಟಗಿ ಮಾತನಾಡಿ,ನಾಗರ ಪಂಚಮಿ ಅಂಗವಾಗಿ ಪಂದ್ಯವನ್ನು ಕಟ್ಟಲಾಗಿದ್ದು ಇಟಗಿ ಗ್ರಾಮದ ಹನುಮಾನ ಮಂದಿರದಿಂದ ಬೆಳಿಗ್ಗೆ ಬಿಟ್ಟಿದ್ದು ರಾತ್ರಿ ೧೦ ಗಂಟೆಯ ವರೆಗೆ ಸಮಯವಿದ್ದು ಆ ಹೊತ್ತಿನೊಳಗೆ ಗ್ರಾಮ ತಲಪುವನೆ ಎಂಬುದನ್ನು ಕಾದು ನೋಡಬೇಕೆದಿ. ಊಟ ನೀರು ಏನು ಬೇಕಾದರು ಸಮಯ ಮಾಡಿಕೊಳ್ಳುವುದು ಬಿಡುವುದು ಆತನಿಗೆ ಬಿಟ್ಟಿದ್ದು,ಆದರೆ ಈ ವರೆಗೆ ನೀರು ಊಟ ಕೂಡ ನಡೆಯುತ್ತಲೆ ಮಾಡಿದ್ದಾನೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಬಾಜಿ ಕಟ್ಟಿದ ಶಿವಶರಣ ಮಾಗಾ ಮತ್ತಿತರರು ಈ ಸಂದರ್ಭದಲ್ಲಿ ಜೊತೆಯಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…