ಬಿಸಿ ಬಿಸಿ ಸುದ್ದಿ

ಭಾಲ್ಕಿ ಶ್ರೀಮಠದಿಂದ ಮೂರು ರಾಜ್ಯಗಳಲ್ಲಿ ಅಂತರ್ಜಾಲ ಮೂಲಕ ಬಸವತತ್ವ ಪ್ರವಚನ

ಭಾಲ್ಕಿ: ಇಂದಿನಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಅತ್ಯಂತ ಹರ್ಷ-ಉಲ್ಲಾಸದಿಂದ ಬಸವಾದಿ ಶರಣರ ವಚನಾಧಾರಿತ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇಂದು ಕೋವಿಡ್-೧೯ ಎಂಬ ಮಹಾಮಾರಿಯಿಂದ ಇಡಿ ಜಗತ್ತನ್ನೆ ಭಯಭಿತಗೊಂಡಿದೆ. ಇಂತಹ ಸಂಧರ್ಭದಲ್ಲಿ ನಾವು ನಮ್ಮ ಧರ್ಮ ಸಂಸ್ಕಾರಗಳು ನಮ್ಮ ನಮ್ಮ ಮನೆಯಲ್ಲಿಯೇ ಆಚರಿಸುವ ಮೂಲಕ ಆತ್ಮಸ್ಥೈರ್ಯದಿಂದ ಬಾಳಬೇಕಾದ ಅನಿವಾರ್ಯತೆ ಬಂದಿದೆ. ಆ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಎಲ್ಲಾ ಬಸವ ಭಕ್ತರು ತಮ್ಮ ಮನೆಯಲ್ಲಿಯೇ ಇಷ್ಟಲಿಂಗ ಪೂಜೆ ಮಾಡಿದ ನಂತರ ಅತ್ಯಂತ ಭಕ್ತಿ ಶೃದ್ಧೆಯಿಂದ ಕಡ್ಡಾಯವಾಗಿ ಬಸವಾದಿ ಶರಣರ ವಚನ ಪಾರಾಯಣ ಮಾಡಬೇಕು. ಪ್ರತಿ ನಿತ್ಯ ಸಾಯಂಕಾಲ ಕುಟುಂಬ ಸದಸ್ಯರು ಎಲ್ಲರು ಸೇರಿ ಸಾಮೂಹಿಕ ಪ್ರಾರ್ಥನೆ, ವಚನ ಚಿಂತನ ಹಾಗೂ ಪೂಜ್ಯರ ಪ್ರವಚನವನ್ನು ಕೇಳುವ ಮೂಲಕ ಬಸವತತ್ವವನ್ನು ಮೈಗುಡಿಸಿಕೊಳ್ಳಬೇಕು.

ಕಳೆದ ಮೂವತ್ತೈದು ವರ್ಷಗಳಿಂದ ಪರಮ ಪೂಜ್ಯರಾದ ಡಾ. ಬಸವಲಿಂಗ ಪಟ್ಟದ್ದೇವರು ಪ್ರವಚನವೆಂಬ ಜ್ಞಾನದೀವಿಗೆಯ ಮೂಲಕ ಭಕ್ತರ ಅಂತರಂಗದ ಅಜ್ಞಾನದ ಕತ್ತಲನ್ನು ಕಳೆಯುತ್ತಾ ಬಂದಿದ್ದಾರೆ. ಭಕ್ತರ ಹಾಗೂ ಸಮಾಜದ ಏಳಿಗೆಯೇ ಅವರ ಪಾಲಿಗೆ ಲಿಂಗ-ಜಂಗಮ ಪೂಜೆ ಆಗಿದೆ. ಪೂಜ್ಯರು ಈ ವರ್ಷ ಪೂಜ್ಯರು ಮಹರಾಷ್ಟ್ರದ ಬಸವಭಕ್ತರಿಗೆ ಲಿಂಗಾಯತ ಸಂಸ್ಕೃತಿ ಪರಿಚಯಿಸುವ ಸದುದ್ದೇಶದಿಂದ ಮರಾಠಿ ಭಾಷೆಯಲ್ಲಿ ದಿನಾಂಕ: ೨೧ ಜುಲೈ ೨೦೨೦ ರಿಂದ ೨೨ ಅಗಸ್ಟ ೨೦೨೦, ಸಾಯಂಕಾಲ ೦೬.೦೦ ರಿಂದ ೬.೩೦ರ ವರೆಗೆ ಲಿಂಗಾಯತ ತತ್ವದರ್ಶನ ಎಂಬ ವಿಷಯದ ಕುರಿತಾದ ಪ್ರವಚನವನ್ನು ಫೇಸ್‌ಬುಕ್ ಲೈವ್ ಮೂಲಕ ಮಾಡಲಿದ್ದಾರೆ. ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಕನ್ನಡದಲ್ಲಿ ಅನುಭವ ಮಂಟಪ ದರ್ಶನ ವಿಷಯದ ಕುರಿತಾಗಿ ೦೬.೩೦ ರಿಂದ ೦೭.೦೦ರ ವರೆಗೆ ಫೇಸ್‌ಬುಕ್ ಲೈವ್ ಮೂಲಕ ಮಾಡಲಿದ್ದಾರೆ. ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ತೆಲುಗು ಭಾಷೆಯಲ್ಲಿ ಸಮಯ: ೦೫.೧೫ ರಿಂದ ೦೫.೪೫ರ ವರೆಗೆ ಫೇಸ್‌ಬುಕ್ ಲೈವ್ ಪ್ರವಚನ ಮಾಡಲಿದ್ದಾರೆ. ಎಲ್ಲಾ ಬಸವ ಭಕ್ತರು https://www.facebook.com/hiremathasamsthanabhalki/live (ಹಿರೇಮಠ ಸಂಸ್ಥಾನ ಭಾಲ್ಕಿ) ಲಿಂಕ್‌ನ್ನು ಬಳಸಿಕೊಂಡು ಪೂಜ್ಯರ ಪ್ರವಚನವನ್ನು ಆಲಿಸಬೇಕೆಂದು ಹಿರೇಮಠ ಸಂಸ್ಥಾನದಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago