ಕಲಬುರಗಿ: 1ರಿಂದ 10ನೇ ತರಗತಿವರೆಗೆ ರಾಜ್ಯ ಸರಕಾರ ಡಿಡಿ ಚಂದನ ದೂರದರ್ಶನ ಮುಖಾಂತರ ಪಾಠವನ್ನು ಮಾಡಲಾಗುತ್ತಿದ್ದು. ಅದರಲ್ಲಿ ಮಾಧ್ಯಮವನ್ನು ಕಡೆಗಣಿಸಲಾಗಿದೆ ಉರ್ದು ಶಾಲೆಯ ಮಕ್ಕಳು ಶಿಕ್ಷಣಿಕ ವಿಷಯಗಳ ಬಗ್ಗೆ ಸರಕಾರಕ್ಕೆ ಯಾವುದೇ ಆಸಕ್ತಿ ತೊರಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕೂಡಲೆ ಉರ್ದು ವಿದ್ಯಾರ್ಥಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ವಿಷಯಗಳನ್ನು ಅಳವಡಿಸಿಲ್ಲ ತರಬೇತಿ ನೀಡಬೇಕೆಂದು ಎಂದು ನಯಾ ಸವೇರಾ ಸಂಘಟನೆ ಕಾರ್ಯಕರ್ತು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಮಾತನಾಡಿ, ದೇಶದ ಹಲವಾರು ಜನರು ಉರ್ದು ಭಾಷೆಗಳನ್ನು ಆಡುತ್ತಾರೆ. ಹಲವಾರು ಕವಿಗಳು ಉರ್ದು ಭಾಷೆಯಲ್ಲಿ ಇದ್ದಾರೆ .ಹಲವಾರು ವಿದ್ವಾಂಸರು ಉರ್ದು ಭಾಷೆಯಲ್ಲಿ ಪಿ.ಎಚ್.ಡಿ ಪದವಿಯನ್ನು ಹೊಂದಿರುತ್ತಾರೆ .ಇಷ್ಟೆಲ್ಲಾ ಗೊತ್ತಿದ್ದರೂ ಪ್ರತಿ ಸಲ ಉರ್ದು ಭಾಷೆ ಕಡೆಗಣಿಸುತ್ತಿರುವುದು ಬೇಸರದ ಸಂಗತಿಯಾಗಿದ್ದು, ಯಾವುದೇ ಕಾರಣಕ್ಕೂ ಭಾಷೆ ಮತ್ತು ಉರ್ದು ಶಾಲೆಗಳನ್ನು ಕಡೆಗಣಿಸಬಾರದು, ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ನಂತರ ಅತಿಹೆಚ್ಚು ಬಳಸುವ ಭಾಷ ಉರ್ದುವಾಗಿದೆ ಈ ಉರ್ದುವನ್ನು ದ್ವೀತಿಯ ಭಾಷೆಯಾಗಿ ಜನರು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದರು.
ಉರ್ದುವಿನಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಈ ಒಂದು ವಿಷಯವನ್ನು ಅಳವಡಿಸಿಲ್ಲ, ಡಿಡಿ ಚಂದನ ಮತ್ತು ದೂರದರ್ಶನದಲ್ಲಿ ಉರ್ದುಭಾಷೆ ವಿಷಯಗಳನ್ನು ಅಳವಡಿಸಿ ಉರ್ದು ವಿಭಾಗದ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಣ ಸಚಿವರಿಗೆ ಪತ್ರ ಬರೆದು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಚಿತಾಪುರ, ಯೂನುಸ್ ಅಲಿ, ಸೈಯದ್ ಏಜಾಜ್ ಅಲಿ ಇನಮ್ದಾರ್, ಸಾಜಿದ್ ಅಲಿ ರಂಜೋಳವಿ, ಶಿರಾಜ್ ಪಾಷಾ, ಹೈದರಲಿ ಇನಮ್ದಾರ್, ಸೈರಾ ಬಾನು, ಅಬ್ದುಲ್ ವಾಹಿದ್, ಸಲೀಂ ಸಗರಿ, ಸಾದಿಕ್ ಪಟೇಲ್, ರಾಬಿಯಾ ಶಿಕಾರಿ, ಗೀತಾ ಮುದುಗಲ್, ಮುಬೀನ್ ಅನ್ಸಾರಿ ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…