ಜೇವರ್ಗಿ : ಕೇವಲ ರಾಜಕೀಯ ಹಿತಾಸಕ್ತಿಗಳನ್ನು ಉಳಿಸಿಕೊಳ್ಳಲು ನಮ್ಮ ದೇಶದ ಮೂಲ ಅಸ್ಪೃಶ್ಯ ಜನಾಂಗದ ಇಡೀ ಸಮುದಾಯದ ಹಿತವನ್ನು ಬಲಿಕೊಟ್ಟು ಕೆಲವು ಮುಖಂಡರು ವೋಟ್ ಗಾಗಿ ಜಾತಿ ರಾಜಕೀಯ ಮಾಡುತ್ತಿದ್ದು ನಿಜಕ್ಕೂ ಖಂಡನೀಯ ಎಂದು ದಲಿತ ಮುಖಂಡರಾದ ಚಂದ್ರಶೇಖರ್ ಹರನಾಳ ಖಂಡಿಸಿದ್ದಾರೆ.
ಜೇವರ್ಗಿ ಪಟ್ಟಣದಲ್ಲಿ ತಾಲೂಕ ದಲಿತ ಸಮನ್ವಯ ಸಮಿತಿಯ ಸದಸ್ಯರು ರಾಜ್ಯದ ಮುಖ್ಯಮಂತ್ರಿಗಳಿಗೆ ಮೇಲ್ವರ್ಗದ ಸ್ಪರ್ಶ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಡಬೇಕೆಂದು ಆಗ್ರಹಿಸಿ ಜೇವರ್ಗಿ ತಸಿಲ್ದಾರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಮೀಸಲಾತಿ ಈ ಜಾತಿಗಳಿಗೆ ಅನವಶ್ಯಕ: ಸಂವಿಧಾನಬದ್ಧವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ತುಳಿತಕ್ಕೆ ಒಳಗಾದ ದುರ್ಬಲವರ್ಗದ ಜನರಿಗಾಗಿ ರೂಪಿಸಲಾಗಿರುವ ಮೀಸಲಾತಿ ಸೌಲಭ್ಯಗಳನ್ನು ಪಡೆದು, ಅನುಭವಿಸುತ್ತಾ ನಿಜವಾಗಲೂ ತುಳಿತಕ್ಕೊಳಗಾದ ಜನರಿಗೆ ಮೋಸ ಮಾಡಲಾಗುತ್ತಿದೆ, ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇಂಥ ಅವಕಾಶವಾದಿಗಳಿಗೆ ಮೀಸಲಾತಿ ಅವಶ್ಯಕತೆ ಇಲ್ಲ. ಕೇವಲ ತೋರಿಕೆಗಾಗಿ ಮಾತ್ರ ನಾವು ಸಹ ಪರಿಶಿಷ್ಟ ಜಾತಿಗೆ ಸೇರಿದ್ದೇವೆ ಎಂದು ಹೇಳುವವರು ಆದರೆ ವಾಸ್ತವವಾಗಿ ಅಸ್ಪೃಶ್ಯರ ನೋವನ್ನು ಇವರು ಅನುಭವಿಸಿಲ್ಲ.
ಮೇಲ್ವರ್ಗದ ಸ್ಪರ್ಶ ಜಾತಿಗಳು;
ಇಡೀ ದೇಶದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಲಂಬಾಣಿ, ಬೊಯಿ ಕೊರಮ. ಕೊರಚ ಜಾತಿಗಳು ತಲೆತಲಾಂತರಗಳಿಂದಲೂ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಹೊಂದಿದ್ದರೂ ಸಹ ವಾಮಮಾರ್ಗದ ಮೂಲಕ ನಾವು ಅಸ್ಪೃಶ್ಯರು ಎಂದು ಹೇಳಿಕೊಂಡು ಮೀಸಲಾತಿಯ ಸವಿಯನ್ನು ಸವಿಯುವುದು ಬಹುಸಂಖ್ಯಾತರಾಗಿರುವ ಜನರಿಗೆ ಮೀಸಲಾತಿ ಹೆಸರಲ್ಲಿ ಕೊಡಲಿ ಪೆಟ್ಟನ್ನು ನೀಡುತ್ತಿರುವುದು ನಿಜಕ್ಕೂ ವಿಷಾದನೀಯ.
ಮನುವಾದಿಗಳ ಕುತಂತ್ರ: ಮೂಲಭೂತವಾದಿಗಳು ಸೇರಿದಂತೆ ಮನುವಾದಿಗಳು ತಮ್ಮ ಬೆಳೆಯನ್ನು ಬಳಸಿಕೊಳ್ಳಲು ಪರ್ಯಾಯ ಶಕ್ತಿಯನ್ನಾಗಿ ಇತರ ಜಾತಿಗಳಿಗೆ ಬೆಂಬಲವನ್ನು ನೀಡುವ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಕಸಿದುಕೊಳ್ಳುವ ವ್ಯವಸ್ಥಿತವಾದ ಕುತಂತ್ರವನ್ನು ರೂಪಿಸಲಾಗುತ್ತಿದೆ ಇಂತಹ ಸಂದರ್ಭದಲ್ಲಿ ಮೂಲ ಅಸ್ಪೃಶ್ಯರು ಎಚ್ಚೆತ್ತುಕೊಳ್ಳಬೇಕಿದೆ.
ವರದಿ ಸಲ್ಲಿಸಿ ಈ ಜಾತಿಗಳನ್ನು ಕೈಬಿಡಿ : ಸುಪ್ರೀಂ ಕೋರ್ಟಿನ ಆದೇಶದಂತೆ ಕೂಡಲೇ ಈ ಕೊರಚ ಲಂಬಾಣಿ ,ಬೊಮಿ ಸೇರಿದಂತೆ ಕೊರಮ ,ಕೊರಚ ಜಾತಿಯನ್ನು ಅಸ್ಪೃಶ್ಯತೆ ಸಮುದಾಯದ ಪಟ್ಟಿಯಿಂದ ಕೈಬಿಟ್ಟು ಮೂಲ ಅಸ್ಪೃಶ್ಯರಿಗೆ ಸಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ದಲಿತ ಸಮನ್ವಯ ಸಮಿತಿ ಸದಸ್ಯರು ಮನವಿ ಪತ್ರವನ್ನು ಸಲ್ಲಿಸಿದರು .
ಮನವಿ ಪತ್ರವನ್ನು ಸಲ್ಲಿಸುವಾಗ ದಲಿತ ಮುಖಂಡರಾದ ಚಂದ್ರಶೇಖರ್ ಹರನಾಳ, ಭೀಮರಾಯ ನಗನೂರು, ದವಲಪ್ಪ ಮದನ್, ಶ್ರೀಹರಿ ಕರ್ಕಿಹಳ್ಳಿ, ಮಹೇಶ್ ಕೋಕಿಲೆ, ಶರಣಪ್ಪ ಲಕ್ನಾಪುರ, ಮಲ್ಲಪ್ಪ ಮಾರಡಗಿ, ಭಾಗಣ್ಣ ರದ್ದೇವಾಡಗಿ, ಭೀಮ ಶಂಕರ್ ಬಡಿಗೇರ್, ಭಾಗಣ್ಣ ಕಟ್ಟಿ, ಪ್ರಧಾನಿ ಅಂಬರ್ಕೇಡ, ದೇವೇಂದ್ರ ಮುದುವಾಳ, ರಾಜಶೇಖರ್ ಶಿಲ್ಪಿ, ಮಲ್ಲಿಕಾರ್ಜುನ್ ಕಟ್ಟಿ ಕೆಲ್ಲೂರ್ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…