ಸುರಪುರ: ಕಳೆದ ಐದು ವರ್ಷಗಳಿಂದ ನಗರದ ಬಸ್ ನಿಲ್ದಾಣ ತಹಸೀಲ್ ರಸ್ತೆ ಸರಕಾರ ನೌಕರರ ಭವನ ಸರದಾರ್ ವಲ್ಲಭಬಾಯಿ ವೃತ್ತ ಮತ್ತಿತರೆಡೆಗಳಲ್ಲಿ ಅನಾಥವಾಗಿ ಇರುತ್ತಿದ್ದ ವಯೋ ವೃದ್ಧೆಯೊಬ್ಬಳಿಗೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಹಾಗು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ ಅವರು ಕೊನೆಗು ಅಜ್ಜಿಗೆ ಆಸರೆ ಕಲ್ಪಿಸಿದರು.
ಕಳೆದ ಕೆಲ ದಿನಗಳಿಂದ ಸರಕಾರಿ ನೌಕರರ ಭವನದಲ್ಲಿ ಅನಾಥವಾಗಿದ್ದು ಸ್ಥಳದಲ್ಲಿಯೆ ಮಲ ಮೂತ್ರ ಮಾಡಿಕೊಂಡು ಒರಾಳುತ್ತಿದ್ದ ವೃದ್ಧೆಯ ಕುರಿತು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು,ಈ ಸುದ್ದಿಗೆ ಸ್ಪಂಧಿಸಿದ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ವೃದ್ಧೆಗೆ ಏನಾದರು ವ್ಯವಸ್ಥೆ ಕಲ್ಪಿಸಬೇಕೆಂದು ಬಯಸಿ ಕಲಬುರ್ಗಿ ಮತ್ತು ಯಾದಗಿರಿಯಲ್ಲಿನ ಅನಾಥಾಶ್ರಮಗಳನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು,ಕೊನೆಗೆ ಬುಧವಾರ ಡಿವೈಎಸ್ಪಿಯವರು ಮತ್ತು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಲಾಲ್‌ಸಾಬ್ ಅವರನ್ನು ಸಂಪರ್ಕಿಸಿ ವೃದ್ಧೆಗೆ ಆಸರೆ ಕಲ್ಪಿಸುವಂತೆ ತಿಳಿಸಿ ಮದ್ಹ್ಯಾನ ಪೊಲೀಸ್ ಪೇದೆ ದಯಾನಂರ ಅವರು ವೃದ್ಧೆಗೆ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ ನಂತರ ಸಿಡಿಪಿಒ ಅವರು ಹುಣಸಗಿಯಲ್ಲಿನ ತಮ್ಮ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ವೃದ್ಧಾಶ್ರಮಕ್ಕೆ ಸಂಪರ್ಕಿಸಿ ಮಹಿಳೆಯನ್ನು ಕಳುಹಿಸುತ್ತಿರುವ ಕುರಿತು ತಿಳಿಸಿದರು.
ಅದರಂತೆ ಬುಧವಾರ ಸಂಜೆಯ ವೇಳೆಗೆ ಪೊಲೀಸ್ ಅಧಿಕಾರಿಗಳಾದ ಡಿವೈಎಸಿ ವೆಂಕಟೇಶ ಹುಗಿಬಂಡಿಯವರು ಮತ್ತು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಅವರು ಸ್ವಸಹಾಯ ದಿಂದ ಅಜ್ಜಿಗೆ ಬಟ್ಟೆ ಬರೆ ಮತ್ತು ಅಗತ್ಯ ವಸ್ತುಗಳು ಕೊಡಿಸುವ ಜೊತೆಗೆ ಬಾಡಿಗೆ ವಾಹನ ಮಾಡಿ ಕೊಟ್ಟು ವೃದ್ಧೆಯನ್ನು ಹುಣಸಗಿಯಲ್ಲಿರುವ ವೃದ್ಧಾಶ್ರಮಕ್ಕೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಐದು ವರ್ಷಗಳಿಂದ ಅನಾಥವಾಗಿ ಹಾದಿ ಬೀದಿಯಲ್ಲಿ ಕಾಲ ಕಳೆಯುತ್ತಿದ್ದ ವೃದ್ಧ ಮಹಿಳೆಗೆ ಕಾಳಜಿ ತೋರಿ ಆಸರೆ ಕಲ್ಪಿಸಲು ಕಾರಣರಾದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮತ್ತು ಪಿಐ ಎಸ್.ಎಮ್.ಪಾಟೀಲ ಹಾಗು ಸಿಡಿಪಿಒ ಲಾಲಸಾಬ್ ಅವರ ಸೇವೆಗೆ ಸುರಪುರ ಜನತೆ ಅಭಿನಂಧಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ನುಡಿಯುತ್ತಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…