ಬಸವಕಲ್ಯಾಣದ ಪೂರ್ವ ದಿಕ್ಕಿನಲ್ಲಿ ಬರುವ ಶಿವಪುರ ಹಾಗೂ ಸಮೀಪದ ನಾರಾಯಣಪುರದಲ್ಲಿ ಶರಣರ ಚರಿತ್ರೆಗೆ ಸಂಬಂಧಿಸಿದಂತೆ ಹಲವು ಸ್ಮಾರಕಗಳು ದೊರೆಯುತ್ತವೆ. ಶಿವಪುರದಲ್ಲಿ ಶರಣ ಮುಗ್ಧಸಂಗಯ್ಯನ ಸ್ಮಾರಕವಿದ್ದು, ಮುಗ್ಧತೆಯಿಂದಲೇ ಅವರಿಗೆ ಮುಗ್ಧಸಂಗಯ್ಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಇವರು ಇದೇ ಊರಿನವರು. ಇವರ ವಚನಗಳು ದೊರೆತಿಲ್ಲಲ್ಲಿವರು ದನ ಕಾಯುತ್ತ ಬೆಳೆದವರಾದರೂ ಅಧ್ಯಾತ್ಮದ ಸೆಳೆತ ಇತ್ತು ಎಂಬುದು ಅವರ ವ್ಯಕ್ತಿತ್ವದಿಂದ ನಮಗೆ ತಿಳಿದು ಬರುತ್ತದೆ. ಬಹು ದೊಡ್ಡ ದೇವಾಲಯವಿದೆ. ಅವರು ವಾಸಿಸುತ್ತಿದ್ದ ಸ್ಥಳದಲ್ಲಿ ಮಠವೊಂದಿದೆ. ಅದು ಈಗ ಸಂಪೂರ್ಣವಾಗಿ ಶಿಥಿಲಗೊಂಡ ಸ್ಥಿತಿಯಲ್ಲಿದೆ. ಗವಿ, ಅವರು ಪೂಜಿಸಿದ ಮಲ್ಲಿಕಾರ್ಜುನ ಗುಡಿ ಕೂಡ ಅಲ್ಲಿ ಕಂಡುಬರುತ್ತವೆ.
ವಿಜಯಪುರ ಜಿಲ್ಲೆಯ ಕೊರ್ತಿ ಕೊಲ್ಹಾರದ ಪ್ರತಿಭಾವಂತ ಅದೃಶ್ಯ ಕವಿ “ಪ್ರೌಢದೇವರಾಯನ ಕಾವ್ಯ”ದಲ್ಲಿ ಮನೆ ದೈವ ಊರದೈವ, ಮನದೈವ ಸಂಗಾರ್ಯ ಎಂದು ನೆನಪಿಸಿಕೊಂಡಿದ್ದಾರೆ. ಅವರ ಆ ಕೃತಿಯ ಪ್ರಕಾರ ಮುಗ್ಧಸಂಗಯ್ಯನವರು ಕಲ್ಯಾಣ ತೊರೆದು ಇಂಗಳೇಶ್ವರ ಗುಡ್ಡದ ಅಕ್ಕನಾಗಮ್ಮನ ಗವಿಯಲ್ಲಿ ಆರೇಳು ವರ್ಷ ತಪಸ್ಸು ಮಾಡಿದರು. ನಂತರ ಸುಮಾರು 30 ವರ್ಷ ಉಪ್ಪಲದಿನ್ನಿಯಲ್ಲಿ ಗಾಣ ಹೊಡೆಯುತ್ತಿದ್ದರು ಎಂಬ ಉಲ್ಲೇಖವಿದೆ. ಇದೇ ಕವಿ ರಚಿಸಿದ “ಮುಗ್ಧ ಸಂಗಾರ್ಯರ ಪುರಾಣ” ಕೃತಿ ಸಿಕ್ಕಿಲ್ಲ. ಇವರು ಪವಾಡ ಪುರುಷರಾಗಿದ್ದರು ಎಂದು ಅವರು ಬರೆಯುತ್ತಾರೆ.
ಸೊಲ್ಲಾಪುರದ ಸಿದ್ಧರಾಮ ಶಿವಯೋಗಿಗಳು ಅಲ್ಲಮಪ್ರಭುಗಳ ಜೊತೆಗೂಡಿ ಕಲ್ಯಾಣಕ್ಕೆ ಬಂದು ಸಮೀಪದ ಶಿವಪುರಕ್ಕೆ ಭೇಟಿ ನೀಡಿರಬಹುದಾದ ಕುರುಹುಗಳು ಕಾಣಸಿಗುತ್ತವೆ. ಸಿದ್ಧರಾಮೇಶ್ವರ ಗುಡಿ, ಸಿದ್ಧರಾಮೇಶ್ವರ ಗವಿ ಕಾಣಿಸುತ್ತದೆ. ಈಗಿನ ಸಿದ್ಧರಾಮೇಶ್ವರ ಹೆಸರಿನ ಗುಡಿ ಈ ಮೊದಲು ಶಿವ ದೇವಾಲಯವಾಗಿತ್ತು. ಈ ದೇವಾಲಯದೊಳಗೆ ನಿಂತಿರುವ ಅಪರೂಪದ ಶಿವನ ಶಿಲ್ಪವೊಂದಿದೆ. ದೇವಾಲಯದ ಮುಂದೆ ದೀಪಸ್ತಂಬ, ಅದರ ಮುಂಭಾಗದಲ್ಲಿಕೆರೆ, ಮಗ್ಗಲು ಮತ್ತೊಂದು ಬಾವಿ ಇದೆ. ಕೊಂಡಗುಳಿ ಕೇಶಿರಾಜ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.
ನಾರಾಯಣಪುರ ಮತ್ತು ಶಿವಪುರದ ಮಠಗಳಲ್ಲಿ ಆಗ ನಡೆಯುತ್ತಿದ್ದ ಪುರಾಣ-ಪ್ರವಚನಗಳನ್ನು ಕೇಳುತ್ತಿದ್ದ ಮುಗ್ಧ ಸಂಗಯ್ಯನಿಗೆ ಶ್ರೀಶೈಲ ನೋಡು ಆಸೆಯಿಂದ ಶಿವಪುರ ತೊರೆದ ಎಂದು ಹೇಳಲಾಗುತ್ತಿದ್ದರೂ ಹುಟ್ಟಿದ ಊರು ಬಿಡಬೇಕಾದ ಪ್ರಸಂಗವೊಂದು ಒದಗಿ ಬಂತು. ಹೀಗಾಗಿ ಅವರು ಶ್ರೀಶೈಲಕ್ಕೆ ಹೋದರು. ಬಸವಣ್ಣವರ ಕೀರ್ತಿ ಆಗ ಶ್ರೀಶೈಲದವರೆಗೆ ಹಬ್ಬಿತ್ತು. ಬಿಲ್ವ ವನದಲ್ಲಿ ತಪ್ಪಸ್ಸು ಮಾಡುತ್ತಿದ್ದ ಸಕಲೇಶ ಮಾದರಸರ ಪರಿಚಯ ಆಯಿತು. ಅಲ್ಲಿ ಇಬ್ಬರೂ ಕೂಡಿಯೇ ಇರುತ್ತಿದ್ದರು. ಇಬ್ಬರೂ ಪುನಃ ಕಲ್ಯಾಣದೆಡೆಗೆ ಬಂದರು. ಶಿವಪುರಕ್ಕೆ ಹೋಗದೆ ನಾರಾಯಣಪುರದಲ್ಲಿ ನೆನೆ ನಿಂತರು ಎಂದು ಹೇಳುವುದಕ್ಕೆ ಪುರಾವೆಯಾಗಿ ಚಿಕ್ಕಮಠದ ಅಂಗಳದಲ್ಲಿರುವ ತೋರು ಗದ್ದುಗೆ ಇದೆ. ಮಠದಲ್ಲಿ ಒಂದು ಬೆತ್ತ ಇದೆ. ಬೆತ್ತದ ಕೆಳಗಡೆ ನೀಲಿ ವಸ್ತ್ರದಲ್ಲಿ ಭಸ್ಮದ ಪುಡಿ ಇರುತ್ತದೆ. ಅಲ್ಲಿಗೆ ಬಂದವರಿಗೆ ಆ ಭಸ್ಮದ ಪುಡಿಯನ್ನು ಕೊಡಲಾಗುತ್ತಿದ್ದು, ಮುಗ್ಧಸಂಗಯ್ಯನವರು ಈ ಕೋಲು ಅವರು ಬೆಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದರಂತೆ ನಾರಾಯಣಪುರ ಕೆರೆ ಪ್ರದೇಶದಲ್ಲಿ ಸಕಲೇಶ ಮಾದರಸ ಮಂಟಪವಿದೆ. ಸಕಲೇಶ ಮಾದರಸರ ಮಂದಿರ ಕೂಡ ಇದೆ. ಇಲ್ಲಿಯೂ ಅಪರೂಪದ ಶಿವನ ಶಿಲ್ಪವಿದೆ.
ಆದರೆ ಅದೀಗ ಮುಸ್ಲಿಂ ಜನಾಂಗದ ಶ್ರದ್ಧಾ ಕೇಂದ್ರ ಸಕಾಸಪೀರ ದರ್ಗಾ ಮಾರ್ಪಾಡಾಗಿದೆ. ಹಿಂದುಗಳು ಆಷಾಢ ಮಾಸದಲ್ಲಿ ಸಕಲೇಶ ಮಾದರಸರ ಉತ್ಸವ ಆಚರಿಸಿದರೆ, ರಂಜಾನ್ ವೇಳೆಯಲ್ಲಿ ಮುಸ್ಲಿಂರು ಸಕಾಸ್‍ಪೀರ್ ಉತ್ಸವ ಮಾಡುತ್ತಾರೆ. ಒಕ್ಕಲಿಗ ಮುದ್ದಣ್ಣ, ಶರಣ ಮೃಯ್ಯುಂಜಯ ಎಂಬ ಶರಣರ ಬಗ್ಗೆ ಕೂಡ ಬಹಳ ಅದ್ಭುತವಾದ ಮಾಹಿತಿಗಳು ಈ ಪ್ರದೇಶದಲ್ಲಿ ದೊರೆಯುತ್ತವೆ. ಮುದ್ದಯ್ಯನ ಶಿಷ್ಯ ಮೃತ್ಯುಂಜಯನಾಗಿದ್ದ. ಹೀಗಾಗಿ ಅಕ್ಕ ಪಕ್ಕದಲ್ಲಿಯೇ ಇಬ್ಬರ ಗದ್ದುಗೆಗಳಿವೆ. ಆ ಮಂದಿರಗಳಲ್ಲಿರುವ ಶಿವಲಿಂಗ ಆವರಿಸಿ ಈಗ ಮಜೇರಿ ಮಾಡಿರುವುದನ್ನು ಕಾಣಬಹುದು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…