ವಾಡಿ: ರಾಜ್ಯದ ಯಾವೂದೇ ಮೂಲೆಯಲ್ಲಿ ಲಾಕ್‌ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿ ನಾಲ್ಕು ದಿನಗಳು ಕಳೆದಿದ್ದರೂ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯ ಆಡಳಿತ ಮಂಡಳಿ ಮಾತ್ರ ತನ್ನ ಕಾರ್ಮಿಕರ ಕಾಲೋನಿಯ ಲಾಕ್‌ಡೌನ್ ಮುಂದು ವರೆಸುವ ಮೂಲಕ ಸರಕಾರದ ಆದೇಶವನ್ನು ಧಿಕ್ಕರಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಕಾರ್ಮಿಕರ ಕಾಲೋನಿಯ ನಿವಾಸಿಗಳು ಮಾರುಕಟ್ಟೆಗೆ ಹೋಗುವ ಎರಡು ಪ್ರಮುಖ ಪ್ರವೇಶ ದ್ವಾರಗಳನ್ನು ಶಾಸ್ವತವಾಗಿ ಮುಚ್ಚಿ ಬೀಗ ಜಡಿದಿದೆ. ಆರೋಗ್ಯ ವೃದ್ಧಿಸಿಕೊಳ್ಳಲು ಬೆಳಗಿನ ವ್ಯಾಯಾಮಕ್ಕೂ ಕಡಿವಾಣ ಹಾಕಲಾಗಿದೆ. ಉದ್ಯಾನವನಕ್ಕೆ ವಾಯುವಿಹಾರಿಗಳ ಪ್ರವೇಶ ನಿಷೇಧಿಸಲಾಗಿದೆ. ದೈಹಿಕ ಕಸರತ್ತಿಗಾಗಿ ಯುವಕರು ಆಟದ ಮೈದಾನಕ್ಕೆ ಬರುವುದನ್ನೇ ನಿರ್ಬಂಧಿಸಲಾಗಿದೆ. ಕಾಲೋನಿ ಪ್ರವೇಶಕ್ಕೆ ಒಂದು ದ್ವಾರ ಮಾತ್ರ ಉಪಯೋಗಿಸಲಾಗುತ್ತಿದ್ದು, ಹೊರಗಡೆ ಹೋಗುವವರ ಮತ್ತು ಒಳಗಡೆ ಬರುವವರ ಮಾಹಿತಿ ದಾಖಲಿಸಲಾಗುತ್ತದೆ. ವಾಯುವಿಹಾರಕ್ಕೆ ಬರುವವರನ್ನು ದ್ವಾರದಲ್ಲೇ ತಡೆದು ಹೊರ ನೂಕಲಾಗುತ್ತಿದೆ. ಕೊರೊನಾ ರೋಗದಿಂದ ಸುರಕ್ಷತೆ ಕಾಪಾಡಲು ಬೆಳಗಿನ ವ್ಯಾಯಾಮ ಮಾತ್ರ ಧಿವ್ಯ ಔಷಧಿಯಾಗಿದ್ದು, ಅದನ್ನೂ ಎಸಿಸಿ ಭದ್ರತಾ ಸಿಬ್ಬಂದಿಗಳು ಕಸಿದುಕೊಂಡು ಜನರನ್ನು ರೋಗದಿಂದ ಮತ್ತಷ್ಟು ಹೆದರುವಂತೆ ಮಾಡುತ್ತಿದ್ದಾರೆ ಎಂದು ಜಾಗಿಂಗ್ ವಂಚಿತ ಯುವಕರು ದೂರಿದ್ದಾರೆ.
ಅನಗತ್ಯವಾಗಿ ಕಾಲೋನಿ ಪ್ರವೇಶ ಪಡೆಯುವವರನ್ನು ಮತ್ತು ರೋಡ್ ರೋಮಿಯೋಗಳನ್ನು ನಿರ್ಬಂದಿಸಬೇಕಾದ ಎಸಿಸಿ ಅಧಿಕಾರಿಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಮನೆಯಿಂದ ವಾಕಿಂಗ್‌ಗೆ ಬರುವವರನ್ನು ಸಂಶಯದಿಂದ ಕಾಣುವ ಮೂಲಕ ಅಘೋಷಿತ ಲಾಕ್‌ಡೌನ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ವಿವಿಧ ಅಗತ್ಯ ದಿನಬಳಕೆ ವಸ್ತುಗಳನ್ನು ಖರೀದಿಸಲು ಹೊರಗಡೆ ಹೋಗುವ ಮಾರುಕಟ್ಟೆ ರಸ್ತೆಯನ್ನು ಬಂದ್ ಮಾಡಿ ಜನರ ಅನಾನುಕೂಲತೆಗೆ ಕಾರಣರಾಗಿದ್ದಾರೆ.
ಎಸಿಸಿ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಗಳು ಮಾಡಿದ್ದೇ ಕಾನೂನು ಎಂಬಂತಾಗಿ ಬೇಸತ್ತಿದ್ದೇವೆ. ರಾಜ್ಯದಲ್ಲಿ ಲಾಕ್‌ಡೌನ್ ತೆರವಾಗಿದೆ. ಎಸಿಸಿಯ ಗೇಟ್‌ಗಳು ಮಾತ್ರ ಇನ್ನೂ ಮುಚ್ಚಿ ತೊಂದರೆ ಕೊಡಲಾಗುತ್ತಿದೆ. ಮಕ್ಕಳು, ವಯಸ್ಸಾದವರು, ಅಂಗವಿಕಲರು ಕಾಲೋನಿಯಿಂದ ಹೊರಗಡೆ ಬರಲು ಪರದಾಡುವಂತಾಗಿದೆ. ಈ ಕುರಿತು ಕಂಪನಿ ಮುಖ್ಯಸ್ಥ ಕೆ.ಆರ್.ರೆಡ್ಡಿ ಮತ್ತು ಎಚ್‌ಆರ್ ಮ್ಯಾನೇಜರ್‌ಗೆ ಮನವಿ ಪತ್ರ ಕೊಟ್ಟಿದ್ದೇನೆ. ಆದರೂ ಅಘೋಷಿತ ಲಾಕ್‌ಡೌನ್ ಮುಂದುವರೆಸಲಾಗಿದೆ ಕಾಲೋನಿಯ ನಿವಾಸಿ ವಿಜಯಕುಮಾರ ಯಲಸತ್ತಿ ದೂರಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…