ಬಿಸಿ ಬಿಸಿ ಸುದ್ದಿ

ಶರಣ ಚರಿತೆ; ತ್ರಿಪುರಾಂತಕೆರೆ-ಬಂದವರ ಓಣಿಯ ಶರಣ ಸ್ಮಾರಕಗಳು

ಬಸವಕಲ್ಯಾಣದ ಶರಣ ಸ್ಮಾರಕಗಳ ಜೊತೆಗೆ ಪಶ್ಚಿಮ ದಿಕ್ಕಿನಲ್ಲಿರುವ ತ್ರಿಪುರಾಂತಕೆರೆ, ಗಂಜಿ ಕರೆ ಮತ್ತು ದಕ್ಷಿಣ ದಿಕ್ಕಿನಲ್ಲಿರುವ ಬಂದವರ ಓಣಿಯನ್ನು ನೋಡಲೇಬೇಕು. ಬಸವ ಸಂಘಟನೆಯ ಬಲವರ್ಧನೆ ನಿಟ್ಟಿನಲ್ಲಿ ಸುತ್ತಮುತ್ತಲಿನ ಈ ಪ್ರದೇಶಗಳಲ್ಲಿ ಶರಣರು ನೆಲೆ ನಿಂತಿದ್ದರು ಎಂದು ಕಾಣುತ್ತದೆ. ಬಸವಕಲ್ಯಾಣದ ಮಹಾದ್ವಾರ ದಾಟಿದರೆ ಬಲಗಡೆ ಬಂದವರ ಓಣಿ ಬರುತ್ತದೆ. ಎಡಗಡೆ ತ್ರಿಪುರಾಂತ ಕೆರೆ ಬರುತ್ತದೆ.

ಈ ಕರೆಯೆ ದಂಡೆಯ ಮೇಲೆ ಅನುಭವ ಮಂಟಪ ಕಾಣಿಸುತ್ತದೆ. ಮರಿದೇವರ ಗುಡ್ಡದ ಮೇಲೆ ಭಾಲ್ಕಿ ಹಿರೇಮಠದ ಲಿಂ. ಚೆನ್ನಬಸವ ಪಟ್ಟದ್ದೇವರು ಶರಣರ ಸ್ಮಾರಕಗಳನ್ನು ಉಳಿಸುವ ನಿಟ್ಟಿನಲ್ಲಿ ೧೯೫೫ನೇ ಇಸ್ವಿಯಲ್ಲಿ ಮೈಸೂರು ಅರಮನೆಯ ಜಯಚಾಮರಾಜೇಂದ್ರ ಒಡೆಯರ ಮೂಲಕ ಇಲ್ಲಿ ನೂತನ ಅನುಭವ ಮಂಟಪದ ಕಟ್ಟಡದ ಶಂಕುಸ್ಥಾಪನೆ, ನಂತರದ ಹತ್ತು ವರ್ಷಗಳಲ್ಲಿ ಬಿ.ಡಿ. ಜತ್ತಿಯವರ ಮೂಲಕ ಅಡಿಗಲ್ಲು ಸಮಾರಂಭ ನೆರವೇರಿಸುತ್ತಾರೆ. ೧೯೭೨ರಲ್ಲಿ ಭೀಮಣ್ಣ ಖಂಡ್ರೆಯವರು ೨೦ ಸಾವಿರ ರೂ. ದೇಣಿಗೆಯ ಜೊತೆಗೆ ಜನರಿಂದ ದೇಣಿಗೆ ಸಂಗ್ರಹಿಸಿ ೧೯೮೨ರಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವಲ್ಲಿ ಅಹರ್ನಿಷಿ ಶ್ರಮಿಸುತ್ತಾರೆ.

ಅನುಭವ ಮಂಟಪ ಸಭಾ ಮಂಟಪದ ಪತ್ರಿವನ

ಅಲ್ಲಿಯೇ ರುದ್ರಮುನಿ ರೇವಣಸಿದ್ಧ ಮಠ ಕಾಣಸಿಗುತ್ತದೆ. ರೇವಣಸಿದ್ಧರು ಕೂಡ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಅವರ ವಿಚಾರ ಒಪ್ಪಿಕೊಂಡು ಬಸವಕಲ್ಯಾಣಕ್ಕೆ ಬಂದಿದ್ದರು. ತಮ್ಮ ಜೊತೆಗೆ ಪುತ್ರ ಘನಲಿಂಗ ರುದ್ರಮುನಿಯನ್ನು ಇಲ್ಲಿಗೆ ಕರೆ ತಂದಿದ್ದರು ಎನ್ನುವುದಕ್ಕೆ ಇಲ್ಲಿರುವ ರೇವಣಸಿದ್ಧೇಶ್ವರರ ಜಗುಲಿ, ನಾರಾಯಣಪುರದಲ್ಲಿರುವ ರೇವಣಸಿದ್ಧರ ಕಟ್ಟೆಯೇ ದೊಡ್ಡ ಸಾಕ್ಷಿ. ಕಲ್ಯಾಣ ಕ್ರಾಂತಿಯ ನಂತರ ಶರಣರೆಲ್ಲರೂ ಉಳವಿಯೆಡೆಗೆ ಹೋಗುವಾಗ ಈ ರುದ್ರಮುನಿಯವರು ಕೂಡ ಇದ್ದರು. ಕಾದ್ರೋಳಿ ಬಳಿಯ ಹುಣಸಿಕಟ್ಟೆಯಲ್ಲಿ ಇವರ ಗದ್ದುಗೆ ಇರುವುದನ್ನು ಗುರುತಿಸಬಹುದು.

ಅನುಭವ ಮಂಟಪದ ಎದುರಿಗೆ ಪತ್ರಿವನ ಇದೆ. ಹೂಗಾರ ಮಾದಣ್ಣ, ದಸರಯ್ಯ, ವೀರಮ್ಮನವರು ಆಗ ಇಲ್ಲಿ ಇದ್ದಿರಬಹುದು ಎಂದು ಹೇಳಲಾಗುತ್ತದೆ. ಈ ಪರಿಸರದಲ್ಲಿ ನಮಗೆ ಅನೇಕ ಗವಿಗಳು ಕಾಣಿಸುತ್ತವೆ. ಇಲ್ಲಿರುವ ಪಂಚಲಿಂಗ ಗವಿಯು ಚೆನ್ನಬಸವಣ್ಣನವರು ಲಿಂಗದೀಕ್ಷೆ ಕೊಡುವ ಸ್ಥಳವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ದಿಬ್ಬದ ನಡುವೆ ತೋರು ಗದ್ದುಗೆ, ಮಡಿವಾಳ ಮಾಚಿದೇವರ ಹೊಂಡ, ಜೋಡುಲಿಂಗಗಳು ಕೂಡ ಕಾಣಸಿಗುತ್ತವೆ. ಮಡಿವಾಳ ಮಾಚಿದೇವರ ಗುಡಿ ಈಗ ಜೀರ್ಣೋದ್ಧಾರ ಆಗಿದೆ.

ಘನಲಿಂಗ ರುದ್ರಮುನಿ ಮಠ

ಪ್ರತಿ ವರ್ಷ ಜನವರಿ ೧೪,೧೫,೧೬ರಂದು ಮೂರು ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಅವರಿಗೆ ವೀರಭದ್ರನ ಅವತಾರ ಎಂದು ಹೋಲಿಸುತ್ತಾರೆ. ಮಡಿವಾಳೇಶ್ವರ ಅಗ್ನಿ ತುಳಿಯುವ ಸ್ಥಳ ಕೂಡ ಅಲ್ಲಿಯೇ ಇದೆ. ಮುಂದೆ ಹೋದರೆ ಅಲ್ಲಮಪ್ರಭು ಗವಿಮಠ ಇದೆ. ಅಲ್ಲಮಪ್ರಭುಗಳು ಕಲ್ಯಾಣದಲ್ಲಿದ್ದರು ಎನ್ನುವುದಕ್ಕೆ ಕಲ್ಯಾಣದಲ್ಲಿ ಸಿಗುವ ಅವರ ಒಂದೇ ಒಂದು ನೆಲೆ ಇದು. ಇಲ್ಲಿಯೇ ಪೂಜೆ ಮಾಡಿಕೊಳ್ಳುತ್ತಿದ್ದರು, ಅವರು ಹಚ್ಚಟ್ಟ ದೀಪ ಈಗ ಬೆಳಗುತ್ತಿದೆ. ಅದನ್ನು ಅಲ್ಲಮಪ್ರಭುದೀಪ, ಪ್ರಭುಜ್ಯೋತಿ ಎಂದು ಹೇಳಲಾಗುತ್ತದೆ.

ಮುಂದೆ ನಡೆದರೆ ಹರಳಯ್ಯನ ಗವಿ ಕಾಣಿಸುತ್ತದೆ. ಅಲ್ಲಿಯೇ ಅರಿವಿನ ಮನೆ, ಅಲ್ಲೊಂದು ಬಸವಣ್ಣನ ಮೂರ್ತಿ, ಆವರಣದಲ್ಲಿ ಬಾಬಾಸಾಹೇಬರ ವಾರದ ಅವರ ಸಮಾದಿ ಕಾಣಿಸುತ್ತದೆ. ಮುಂದಿರುವ ವಿಶಾಲ ಸ್ಥಳವನ್ನು ಗಂಜಿಕೆರೆ ಎಂದು ಗುರುತಿಸಲಾಗುತ್ತಿದ್ದು, ಬಸವಣ್ಣನವರನ್ನು ಭೇಟಿಯಾಗಲು ಬಂದ ಜನರಿಗೆ ನಿರಂತರ ದಾಸೋಹ ಇಲ್ಲಿ ನಡೆದಿರಬೇಕು. ಇದು ಇವೊತ್ತಿನ ಗಂಜಿಕೇಂದ್ರದ ಕಲ್ಪನೆಯನ್ನು ಕಟ್ಟಿ ಕೊಡುತ್ತದೆ.

ಇದರ ಮಗ್ಗುಲಿಗೆ ನೀಲಮ್ಮ-ಗಂಗಾಂಬಿಕೆ ಹೆಸರಿನ ಎರಡು ಗವಿಗಳಿವೆ. ನಂತರ ಅಕ್ಕನಾಗಮ್ಮನ ಗವಿ ಕಾಣಿಸುತ್ತದೆ. ತ್ರಿಪುರಾಂತ ಕೆರೆಯ ದಂಡೆಯ ಮೇಲೆ ತ್ರಿಪುರಾಂತಕೇಶ್ವರ ದೇವಾಲಯವಿದೆ. ಅಲ್ಲಿಂದ ನುಲಿಯ ಚಂದಯ್ಯನ ಗವಿ, ನಂತರ ನಡುವೆ ಅಂಬಿಗರ ಚೌಡಯ್ಯನ ಗವಿ, ಅದರ ಮಗ್ಗಲು ಮತ್ತೊಂದು ಗವಿ ಕಾಣಿಸುತ್ತದೆ.

ಅಲ್ಲಮಪ್ರಭುಗಳ ಮಠ

ಇದಾದ ಬಳಿಕ ಬಂದವರ ಓಣಿ ಬರುತ್ತದೆ. ತ್ರಿಪುರಾಂತ ಕೆರೆಯ ನೀರು ನೆಲೆ ನಿಂತ ಈ ಸ್ಥಳದಲ್ಲಿ ಅಕ್ಕಮಹಾದೇವಿ ಗವಿ, ಅಕ್ಕನ ತೀರ್ಥ ಇದೆ. ಕೆರೆಯ ನೀರಿಗೆ ಎದೆಯೊಡ್ಡಿ ನಿಂತ ದೊಡ್ಡ ದೊಡ್ಡ ಗುಡ್ಡದ ಕಲ್ಲುಗಳಿವೆ. ಅಕ್ಕನ ತೀರ್ಥದ ಮಗ್ಗಲು ಮೇಲೇರಿ ನೋಡಿದರೆ ಸುತ್ತಲೂ ಕಾಡು ಕಾಣಿಸುತ್ತದೆ. ಮುಖ್ಯ ರಸ್ಥೆಯಿಂದ ಬರುವಾಗ ತುರುಗಾಯಿ ರಾಮಣ್ಣನ ಗವಿ ಸಿಗುತ್ತದೆ.

ಸ್ಥಳ: ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago