ಕಲಬುರಗಿ: ಕ್ರೂರಿ ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಸಿಗದಂತಹ ಕೆಟ್ಟ ಪರಸ್ಥಿತಿ ಸೃಷ್ಠಿಸಿದೆ. ರೋಗಿಯನ್ನು ಹೊತ್ತು ಸಂಬಂದಿಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ವೆಂಟಿಲೇಟರ್ ಇಲ್ಲ ಎಂಬ ಉತ್ತರ ಸಿದ್ಧವಿರುತ್ತಿದೆ. ಆರೋಗ್ಯ ಸಿಬ್ಬಂದಿಗಳ ಈ ಅಮಾನವೀಯ ಉತ್ತರ ಕೇಳಿಯೇ ರೋಗಿಗಳು ಜೀವ ಬಿಡುತ್ತಿರುವ ಆತಂಕಕಾರಿ ಬೆಳವಣಿಗೆ ದಾಸೋಹಿ ಶರಣರ ನಾಡು ಕಲಬುರಗಿ ನಗರದಲ್ಲಿ ನಿರ್ಮಾಣವಾಗಿದ್ದು ನಿಜಕ್ಕೂ ಖೇದಕರ.
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಪಟ್ಟಣದ ಮರಾಠಿ ಗಲ್ಲಿ ಬಡಾವಣೆಯ ಚಹಾ ವ್ಯಾಪಾರಿ ಶಾಂತಾಬಾಯಿ ಸುಧಾಕರ ಆಕುಸಖಾನೆ (೪೬) ಎಂಬ ಮಹಿಳೆ ವೆಂಟಿಲೇಟರ್ ಸೌಲಭ್ಯ ಸಿಗದೆ ಮಂಗಳವಾರ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ಮಹಿಳೆಗೆ ಪತಿ, ಮೂವರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಎದೆ ನೋವು, ಉಸಿರಾಟದ ತೊಂದರೆ ಹಾಗೂ ಅಧಿಕ ರಕ್ತದೊತ್ತಡ ಕಾಯಿಲೆ ಉಲ್ಬಣಿಸಿದ ಕಾರಣ ಮಹಿಳೆಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಜಯದೇವ, ಜಿಮ್ಸ್, ಕೆಬಿಎನ್ ಸೇರಿದಂತೆ ಇತರ ಖಾಸಗಿ ಆಸ್ಪತ್ರೆಗೆ ಹೋದರೂ ವೆಂಟಿಲೇಟರ್ ಲಭ್ಯವಾಗಲಿಲ್ಲ.
ನಂತರ ಬಸ್ ನಿಲ್ದಾಣ ಮುಂಭಾಗದ ಸನ್ ರೈಸ್ ಆಸ್ಪತ್ರೆಯೊಳಗೆ ರೋಗಿಯನ್ನು ಸಾಗಿಸಿದ ತಕ್ಷಣವೇ ದೇಹದ ಉಸಿರಾಟ ನಿಂತಿತು. ತಕ್ಷಣಕ್ಕೆ ಯಾವೂದಾದರೂ ಒಂದು ಆಸ್ಪತ್ರೆಯವರು ವೆಂಟಿಲೇಟರ್ ಸೌಲಭ್ಯ ನೀಡಿ ಮಾನವಿಯತೆ ಮೆರೆದಿದ್ದರೆ ಬಹುಶಃ ಮಹಿಳೆ ಬದುಕುಳಿಯುತ್ತಿದ್ದರು.
ಎಲ್ಲಾ ಆಸ್ಪತ್ರೆಗಳಲ್ಲೂ ರೋಗಿಯನ್ನು ಕೋವಿಡ್ ದೆವ್ವ ಎಂಬಂತೆ ಕಾಣುತ್ತಿದ್ದಾರೆ ಎಂದು ಪುರಸಭೆ ಸದಸ್ಯ, ಮರಾಠಾ ಸಮಾಜದ ಯುವ ಮುಖಂಡ ಪೃಥ್ವಿರಾಜ ಸೂರ್ಯವಂಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಐದಾರು ದಿನಗಳ ಹಿಂದೆಯಷ್ಟೇ ಪಟ್ಟಣದ ವಾರ್ಡ್-೧೪ರ ನಿವಾಸಿ, ೪೭ ವರ್ಷದ ಲಾರಿ ಚಾಲಕ ಮಹ್ಮದ್ ಮುಸ್ತಫಾ ವೆಂಟಿಲೇಟರ್ ಸಿಗದೆ ಮೃತಪಟ್ಟಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…