ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ೩೫ ಲಕ್ಷ.ರೂ ವೆಚ್ಚದ ಕುಡಿಯುವ ನೀರು ಸರಬರಾಜು ಮತ್ತು ೧ ಕೋಟಿ ರೂ. ವೆಚ್ಚದ ಯಾತ್ರಿಕ ನಿವಾಸ ಕಾಮಗಾರಿಗಳಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಮಾಡಿಯಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಗಂಭೀರವಾಗಿತ್ತು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಒಂದು ಬಾವಿ ತೋಡಿದ್ದೇವು ದೇವರ ಅನುಗ್ರಹದಿಂದ ಅಲ್ಲಿ ನೀರಿನ ಮೂಲ ಸಮೃದ್ಧವಾಗಿದ್ದು ಈಗ ಮೋಟಾರ ಅಳವಡಿಸಿ ನೀರು ಸರಬರಾಜಿಗೆ ಚಾಲನೆ ನೀಡಲಾಗಿದೆ ಎಂದರು.
ಮಾಡಿಯಾಳ ಗ್ರಾಮದ ಚನ್ನಮಲ್ಲೇಶ್ವರ ಮಠವು ಭಕ್ತರ ಭಕ್ತಿಯ ತಾಣವಾಗಿದೆ ಇಲ್ಲಿಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಯಾತ್ರಿಕ ನಿವಾಸ ನಿರ್ಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದು ಅಪಾರ ಭಕ್ತರನ್ನು ಸೆಳೆಯಲಿದೆ. ಮಠ ಮಂದಿರಗಳು ಅಭಿವೃದ್ಧಿಯಾದರೇ ಸಮಾಜದಲ್ಲಿ ಉನ್ನತ ವಿಚಾರಗಳು ಬರುತ್ತವೆ ಜೊತೆಗೆ ಆಧ್ಯಾತ್ಮಿಕವಾಗಿ ಹೆಚ್ಚು ಬೆರೆಯುವದರಿಂದ ಸಕಾರಾತ್ಮಕ ಯೋಚನೆಗಳು ಬರುತ್ತವೆ. ಧರ್ಮ ಕಾರ್ಯದಲ್ಲಿ ತೊಡಗಿರುವವರಿಗೆ ಯಾವುದೇ ತೊಂದರೆಗಳು ಬರುವುದಿಲ್ಲ ಅವರನ್ನು ಮತ್ತಷ್ಟು ಸನ್ಮಾರ್ಗಕ್ಕೆ ಕೊಂಡುಯ್ಯತ್ತವೆ ಎಂದು ಹೇಳಿದರು.
ಬಡದಾಳದ ಚೆನ್ನಮಲ್ಲ ಶಿವಾಚಾರ್ಯರು ಅಫಜಲಪೂರ ತಾಲೂಕಿಗೆ ಮಾತ್ರ ಸೀಮಿತರಾಗಿದ್ದರು ಎನ್ನುವ ಮಾತು ಮೊದಲು ಕೇಳಿ ಬರುತಿತ್ತು ಆದರೆ ಈಗ ಮಾಡಿಯಾಳ ಗ್ರಾಮದ ಮಠದ ಅಭಿವೃದ್ಧಿಯಾದ ಮೇಲೆ ಅವರ ಸಂಬಂಧ ಆಳಂದ ತಾಲೂಕಿಗೆ ಇನ್ನಷ್ಟು ಹತ್ತಿರವಾಗಲಿದೆ ಮುಂದೆ ಶ್ರೀಗಳು ನಿರಂತರವಾಗಿ ಈ ಭಾಗದಲ್ಲಿ ಸಂಚರಿಸಿ ಧರ್ಮ ಕಾರ್ಯಗಳನ್ನು ಕೈಗೊಂಡು ಭಕ್ತರನ್ನು ಉದ್ಧರಿಸಲಿ ಎಂದರು.
ಸಾನಿಧ್ಯ ವಹಿಸಿದ್ದ ಚೆನ್ನಮಲ್ಲ ಶಿವಾಚಾರ್ಯರು ಮಾತನಾಡಿ, ಶಾಸಕರ ಸತತ ಪರಿಶ್ರಮದಿಂದ ಯಾತ್ರಿಕ ನಿವಾಸ ಕಾರ್ಯ ಆರಂಭಗೊಂಡಿದೆ ಹಿಂದಿನ ಸರ್ಕಾರದ ಸಚಿವರ ಕಚೇರಿಯವರೆಗೆ ಸ್ವತ: ತಾವೇ ಫೈಲ್ ಹಿಡಿದುಕೊಂಡು ಹೋಗಿ ಪಟ್ಟು ಹಿಡಿದು ಕಾಮಗಾರಿ ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ ಅವರಿಗೆ ರಾಜಕೀಯವಾಗಿ ಉನ್ನತ ಸ್ಥಾನ ಪ್ರಾಪ್ತವಾಗಲಿ ಎಂದು ಆಶೀರ್ವಚನ ನೀಡಿದರು.
ಉದ್ದೇಶ ಸರಿಯಾಗಿದ್ದರೇ ಭಗವಂತ ಫಲ ಕೊಡುತ್ತಾನೆ ಎನ್ನುವುದಕ್ಕೆ ಈ ಕಾಮಗಾರಿಯೇ ಸಾಕ್ಷಿ. ಕಾಮಗಾರಿಗೆ ಚಾಲನೆ ಕೊಡುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಈ ವಿಷಯವನ್ನು ರಾಜಕೀಕರಣ ಮಾಡುವುದಕ್ಕೆ ಪ್ರಯತ್ನ ಪಟ್ಟರು ಆದರೆ ಅವರ ಅಪನಂಬಿಕೆ ಹುಸಿಯಾಗಿ ಜನರ ಭರವಸೆಯಂತೆ ಇಂದು ನೀರು ಬರುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮರುಳಸಿದ್ಧ ಸ್ವಾಮೀಜಿ, ಪ್ರಭಾಕರ ರಾಮಜಿ, ಪ್ರಭು ಸರಸಂಬಿ, ಸೂರ್ಯಕಾಂತ ರಾಮಜಿ, ಯಶ್ವಂತರಾಯ ಮಾಲಿಪಾಟೀಲ, ಸುಭಾಷ್ ಬಿರಾದಾರ, ನಿಂಗಣ್ಣ ದುದ್ದಗಿ, ಶಂಕರ ಭೈರಾಮಡಗಿ, ಶಿವರಾಯ ಪೂಜಾರಿ, ಅಲಬಣ್ಣ ಬಿರಾದಾರ, ಎಸ್ ಎಸ್ ಪಾಟೀಲ ಯಳಸಂಗಿ, ತಿಪ್ಪಯ್ಯ ಗುತ್ತೇದಾರ, ಮಲ್ಲಿನಾಥ ನವಲಿ, ಸಿದ್ದಾರಾಮ ರಾಯಚೂರ, ನಾಗರಾಜ ದೇನಕ, ಬಸವರಾಜ ಕಲಶೆಟ್ಟಿ, ಲಾಲು ರಾಠೋಡ ಭಾಗವಹಿಸಿದ್ದರು. ನಿಂಗಣ್ಣ ಕಂಬಾರ ಕಾರ್ಯಕ್ರಮ ನಿರ್ವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…