ಸುರಪುರ: ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದ್ದರು ಸುರಪುರ ನಗರದ ಜನತೆ ಸರಳವಾಗಿ ಈಬಾರಿಯ ವರಮಹಾಲಕ್ಷ್ಮೀಯ ಹಬ್ಬ ಆಚರಿಸಿದರು.ಹೊರಗಡೆ ಕೊರೊನಾ ಸೊಂಕಿನ ಭೀತಿ ಇರುವುದರಿಂದ ಬಹುತೇಕ ಜನರು ಮನೆಯಿಂದ ಹೊರಗೆ ಯಾವುದೇ ದೇವಸ್ಥಾನಗಳಿಗೆ ಹೋಗದೆ ತಮ್ಮ ತಮ್ಮ ಮನೆಗಳಲ್ಲಿಯೆ ಇರುವ ಮಹಾಲಕ್ಷ್ಮೀ ಮೂರ್ತಿಗೆ ಸಿಂಗರಿಸಿ ಪೂಜಿಸಿ ಸಂಭ್ರಮಿಸಿದರು.
ನಗರದ ಯಲ್ಲಪ್ಪ ಮಲ್ಲಿಬಾವಿ ಎಂಬುವವರ ಮನೆಯಲ್ಲಿನ ಎಲ್ಲ ಕುಟುಂಬಸ್ಥರು ಮಹಾಲಕ್ಷ್ಮೀ ದೇವಿಯ ಮೂರ್ತಿಗೆ ಆಭರಣಗಳಿಂದ ಸಿಂಗರಿಸಿ ಹೂ ಹಣ್ಣುಗಳನ್ನಿಟ್ಟು ಅಲಂಕಾರ ಮಾಡಿ ನೈವೆದ್ಯ ಅರ್ಪಿಸಿ ಪೂಜೆ ಸಲ್ಲಿಸುವ ಜೊತೆಗೆ ಪ್ರಾರ್ಥಿಸಿದರು.ಹಾಗೂ ಅಕ್ಕ ಪಕ್ಕದ ಮನೆಗಳ ಮಹಿಳೆಯರನ್ನು ಪೂಜೆಗೆ ಆಹ್ವಾನಿಸಿ ಫಲ ಪುಷ್ಪ ನೀಡಿ ಹಬ್ಬದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಮಲ್ಲಿಬಾವಿಯವರ ಕುಟುಂಬಸ್ಥ ಮಹಿಳೆಯರು ಮಾತನಾಡಿ,ಪ್ರತಿಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ತುಂಬಾ ಸಂಭ್ರಮದಿಂದ ಆಚರಿಸುತ್ತಿದ್ದೆವು.ನಮ್ಮ ಬಂಧು ಬಳಗದವರನ್ನೆಲ್ಲ ಹಬ್ಬಕ್ಕೆ ಆಹ್ವಾನಿಸಿ ಇನ್ನೂ ಅದ್ಧೂರಿಯಾಗಿ ಹಬ್ಬ ಆಚರಿಸಲಾಗುತ್ತಿತ್ತು.
ಆದರೆ ಈ ವರ್ಷ ಇಡೀ ದೇಶದಲ್ಲಿ ಕೊರೊನಾ ವೈರಸ್ ಹಾವಳಿಯಿಂದಾಗಿ ಎಲ್ಲರು ನಮ್ಮ ನಮ್ಮ ಮನೆಗಳಲ್ಲಿ ಸರಳವಾಗಿ ಹಬ್ಬವನ್ನು ಆಚರಿಸುತ್ತಿದ್ದೆವೆ.ನಮ್ಮ ಮನೆಯಲ್ಲಿಯೂ ಸರಳವಾಗಿ ಆಚರಿಸಿ ದೇಶದಕ್ಕೆ ಮಹಾಮಾರಿಯಾಗಿ ವಕ್ಕರಿಸಿರುವ ಕೊರೊನಾ ನಿರ್ಮೂಲನೆಯಾಗಲಿ ಹಾಗು ನಾಡಿಗೆ ಮಳೆ ಬೆಳೆ ಚೆನ್ನಾಗಿ ಬಂದು ಜನರು ನೆಮ್ಮದಿಯಿಂದ ಜೀವಿಸುವಂತಾಗಲಿ ಎಂದು ವರಮಹಾಲಕ್ಷ್ಮೀಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…