ವಾಡಿ: ವಸ್ತುನಿಷ್ಠವಾಗಿ ಬರೆದು ನೇರವಾಗಿ ಮಾತನಾಡುವ ಪತ್ರಕರ್ತ, ಪ್ರಗತಿಪರ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ವಿರುದ್ಧ ಕೋಮುವಾದಿ ಮನಸ್ಸುಗಳು ದೂರು ದಾಖಲಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಿವೆ. ಕೂಡಲೇ ಪ್ರಕರಣ ಹಿಂಪಡೆಯಬೇಕು ಎಂದು ಸಂಚಲನ ಸಾಹಿತ್ಯ ವೇದಿಕೆ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ, ಪ್ರಗತಿಪರ ಬರಹಗಾರರು ಲೇಖನ ಅಥವಾ ಕವಿತೆ ಬರೆದರೆ, ಸಾರ್ವಜನಿಕವಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ವ್ಯಕ್ತಪಡಿಸಿದ್ದರೆ, ಬರಹದ ಮೂಲಕವೇ ಅವುಗಳಿಗೆ ಉತ್ತರ ನೀಡಬೇಕಾದ ಪ್ರತಿರೋಧ ಶಕ್ತಿಗಳು ಠಾಣೆಯಲ್ಲಿ ಕೇಸು ದಾಖಲಿಸುವ ಮೂಲಕ ಹೇಡಿತನವನ್ನು ಮತ್ತು ಮೌದ್ಧಿಕ ಅಜ್ಞಾನವನ್ನು ಪ್ರದರ್ಶಿಸಿವೆ. ಬಲಪಂಥೀಯ ಸಂಘಟನೆಗಳ ಮೂಲಕ ಜೀವ ಬೆದರಿಕೆ ಕರೆಗಳನ್ನು ಮಾಡಿಸಲಾಗುತ್ತಿದೆ. ಓರ್ವ ವೈಚಾರಿಕ ಬರಹಗಾರನನ್ನು ಹೆದರಿಸಿ ಬೆದರಿಸಿ ಮೂಲೆಗುಂಪು ಮಾಡಬೇಕೆಂಬ ದುರಾಸೆ ಫಲನೀಡಲು ಬಿಡುವುದಿಲ್ಲ. ಸಾಹಿತ್ಯ ಲೋಕ ಸಿಡಿದೇಳುವ ಮುಂಚೆ ಸತ್ಯಂಪೇಟೆ ಅವರ ವಿರುದ್ಧದ ಪ್ರಕರಣ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶ್ರೀ ವಿಶ್ವೇಶ್ವರಯ್ಯ ಶಿವಾಚಾರ್ಯರ ಕುರಿತು ಬರೆದ ಲೇಖನ ವೈಚಾರಿಕ ಭಿನ್ನಾಭಿಪ್ರಾಯ ಹಾಗೂ ಚಿಂತನಾರ್ಹ ಲೇಖನವಾಗಿದೆಯೇ ವಿನಹ ಟೀಕೆ ಅಥವಾ ತ್ಯೇಜೋವಧೆಯ ಬರಹವಲ್ಲ. ಚಿಂತನಾಹೀನರು ಇದನ್ನೆ ಮುಂದಿಟ್ಟುಕೊಂಡು ಅವರನ್ನು ಮಾನಸಿಕವಾಗಿ ಘಾಸಿಗೊಳಿಸುವ ಪ್ರಯತ್ನ ಮಾಡಲಾಗಿದೆ. ವಿಶ್ವರಾಧ್ಯ ಸತ್ಯಂಪೇಟೆ ಅವರು ಬದುಕಿಗಾಗಿ ಬರೆಯುವವರಲ್ಲ. ಸಮಾಜದ ಜಾಗೃತಿಗಾಗಿ, ವ್ಯವಸ್ಥೆಯ ಬದಲಾವಣೆಗಾಗಿ, ಅನಾಚಾರಗಳ ನಿರ್ಮೂಲನೆಗಾಗಿ, ಅಸತ್ಯಗಳ ವಿರುದ್ಧ ಪ್ರಖರವದ ಸಾಹಿತ್ಯವನ್ನು ಕಟ್ಟಿಕೊಟ್ಟು ವೈಚಾರಿಕ ಚಿಂತನೆಗಳನ್ನು ಎತ್ತಿ ಹಿಡಿದಿದ್ದಾರೆ.
ಬಸವಾದಿ ಶರಣರ ಸಮಾನತೆಯ ಕ್ರಾಂತಿಯನ್ನು ಬರಹದ ಮೂಲಕ ಮುನ್ನೆಡೆಸುತ್ತಿದ್ದಾರೆ. ಯಾವೂದೇ ವ್ಯಕ್ತಿಯ ಅಥವ ಸ್ವಾಮೀಜಿಗಳ ವಿರುದ್ಧ ಅವರು ಎಂದೂ ಮಾತನಾಡಿಲ್ಲ. ಸಮಾಜಕ್ಕೆ ತಪ್ಪು ಸಂದೇಶ ಕೊಡುವವರ ವಿರುದ್ಧ ಮತ್ತು ಸಮಾಜವನ್ನು ಹಿಂದಕ್ಕೆ ಕರೆದೊಯ್ಯುತ್ತಿರುವ ಮತಾಂಧದ ಚಿಂತನೆಗಳ ವಿರುದ್ಧ ಮಾತನಾಡುತ್ತಾರೆ.
ಇದನ್ನೇ ಮಹಾದ್ರೋಹ ಎಂಬಂತೆ ಮೈಪರಚಿಕೊಳ್ಳುತ್ತಿರುವ ಸರ್ವ ಸಮಾನತೆಯ ವಿರುದ್ಧದ ಸನಾತನಿಗಳು, ಸತ್ಯವನ್ನು ಸಹಿಸಿಕೊಳ್ಳದೆ ತಮ್ಮ ಧಾರ್ಮಿಕ ಪ್ರಭಾವವನ್ನು ಬಳಸಿ ತುಳಿಯುವ ಪ್ರಯತ್ನಕ್ಕೆ ಕೈಹಾಕಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಕ್ರಮ ನಿಂಬರ್ಗಾ, ಹಿಂದೆ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ದೈಹಿಕವಾಗಿ ಕೊಂದು ಬೀಗುತ್ತಿರಬಹುದು. ಆದರೆ ನೂರಾರು ಗೌರಿ ನೂರಾರು ಎಂ.ಎಂ.ಕಲಬುರ್ಗಿ ಜನಿಸಿದ್ದಾರೆ. ಕೇಸು ದಾಖಲಿಸಿದ ಮಾತ್ರಕ್ಕೆ ವೈಚಾರಿಕ ಬರಹ ನಿಲ್ಲುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…