ಶಹಾಬಾದ-ನಗರಸಭೆಯಿಂದ ಕ್ರಿಮಿನಾಶಕ ಔಷಧಿ ಸಿಂಪರಣೆ

 

ಶಹಾಬಾದ:ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯಿಂದ ನಗರದ ಎಲ್ಲಾ ವ್ಯಾಪ್ತಿಯಲ್ಲಿ ಕ್ರಿಮಿನಾಶಕ ಔಷಧಿ ಮತ್ತು ಸ್ಯಾನಿಟೈಜರ್ ಸಿಂಪರಣೆ ಕಾರ್ಯ ಭರದಿಂದ ನಡೆದಿದೆ.
ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾವುದೇ ಕಾರಣಕ್ಕೂ ಇನ್ನು ಮುಂದೆ ನಗರದಲ್ಲಿ ಕೊರೊನಾ ಸೊಂಕು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ನಗರ ವ್ಯಾಪ್ತಿಯ ವಾರ್ಡಗಳಲ್ಲಿ ಕಂಡು ಬರುವ ಕಸವನ್ನು ವಿಲೇವಾರಿ ಮಾಡಿ, ಬ್ಲಿಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ. ನಗರಸಭೆಯ ಪ್ರತಿಯೊಂದು ವಾರ್ಡನ ಸದಸ್ಯರ ಜತೆಗೂಡಿ, ಅವರ ಸಲಹೆ ಮೇರೆಗೆ ಚರಂಡಿ ಸ್ವಚ್ಛತೆ ಹಾಗೂ ಔಷಧಿ ಸಿಂಪರಣೆ ಕಾರ್ಯ ಭರದಿಂದ ಸಾಗುತ್ತಿದೆ. ಮೊದಮೊದಲ ಬ್ಯಾಟರಿ ಪಾವರ್ ಸ್ಪ್ರೇ ಮೂಲಕ ಸಿಂಪರಣೆ ಮಾಡಲಾಗುತ್ತಿತ್ತು.ಇದರಿಂದ ಒಂದು ದಿನಕ್ಕೆ ಒಂದೆರಡು ಬಡಾವಣೆ ಮಾತ್ರ ಸಿಂಪರಣೆಯಾಗುತ್ತಿತ್ತು. ಎಚ್ಚೆತ್ತುಕೊಂಡ ನಗರಸಭೆಯ ಅಧಿಕಾರಿಗಳು ಎರಡು ಟ್ರ್ಯಾಕ್ಟರ್ ಸ್ಪ್ರೇ ವಾಹನಗಳನ್ನು ತಂದು ಅದರಿಂದ ಔಷಧ ಸಿಂಪರಣೆ ಬಹಳ ವೇಗವಾಗಿ ಮಾಡಲಾಗುತ್ತಿದೆ.

ಟ್ರ್ಯಾಕ್ಟರ್ ಎರಡು ಬದಿಯಲ್ಲಿ ಸುಮಾರು ನಾಲ್ಕು ನಾಜಲ್ಗಳನ್ನು ಅಳವಡಿಸಿ ಸ್ಪ್ರೇ ಇದಾಗಿದ್ದು, ರಸ್ತೆಯ ಮೇಲೆ ಹೋಗುವಾಗ ಎಲ್ಲಾ ಕಡೆ ಹರಡುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವಾಗುತ್ತಿರುವುದು ಕಂಡು ಬಂದಿದೆ.ಇದರಿಂದ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಗರದಲ್ಲಿ ಕೊರೊನಾ ಇಬ್ಬರಲ್ಲಿ ಕಂಡಿದ್ದರಿಂದ ಔಷಧ ಸಿಂಪರಣೆ ಹಾಗೂ ಸ್ವಚ್ಛತೆ ಕಾರ್ಯ ಎಡಬಿಡದೇ ನಡೆಯುತ್ತಿದೆ. ಇದಕ್ಕಾಗಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ತಿಳಿಸಿದ್ದಾರೆ.

ನಗರಸಭೆಯಿಂದ ಸ್ವಚ್ಛತೆ ಹಾಗೂ ಕ್ರಿಮಿನಾಶಕ ಸಿಂಪರಣೆ ಕಾರ್ಯ ಭರದಿಂದ ನಡೆಯುತ್ತಿದೆ. ಕೊರೊನಾ ವೈರಸ್ ತಡೆಗಟ್ಟಲು ಇದೊಂದೇ ಪರಿಹಾರವಲ್ಲ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಅನಾವಶ್ಯವಾಗಿ ಹೊರಗೆ ಬರದೇ ಮನೆಯಲ್ಲಿರುವುದೇ ಈ ರೋಗಕ್ಕೆ ಮದ್ದು ಎಂಬುದನ್ನು ತಿಳಿದುಕೊಳ್ಳಬೇಕು- ಕೆ.ಗುರಲಿಂಗಪ್ಪ ಪೌರಾಯುಕ್ತರು ನಗರಸಭೆ ಶಹಾಬಾದ.

emedia line

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

2 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420