ಬಿಸಿ ಬಿಸಿ ಸುದ್ದಿ

ಕೊರೋನಾ ನಿಯಂತ್ರಣಕ್ಕೆ ಆ.3 ರಿಂದ ವಿಶೇಷ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಧುಮೇಹ ಮತ್ತು ರಕ್ತದೊತ್ತಡವಿರುವ ವ್ಯಕ್ತಿಗಳಿಗೆ ವಿಶೇಷ ಆರೋಗ್ಯ ತಪಾಸಣಾ ಚಿಕಿತ್ಸೆ ನಡೆಸಲು ಆ.3 ರಿಂದ 10ರ ವರೆಗೆ ಕಲಬುರಗಿ ನಗರದ ವಿವಿಧ ನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವಿಶೇಷ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಕೋವಿಡ್-19ನಿಂದ ಮರಣ ಪ್ರಮಾಣ ತಗ್ಗಿಸಲು ಮಧುಮೇಹ ಮತ್ತು ರಕ್ತದೊತ್ತಡವಿರುವ ವ್ಯಕ್ತಿಗಳನ್ನು ಈಗಾಗಲೆ ಮನೆ-ಮನೆ ಸರ್ವೆ ಮೂಲಕ ಗುರುತಿಸಿದ್ದು, ಇವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆ ನೀಡಲು ಈ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಕೆಳಕಂಡ ದಿನಾಂಕ ಮತ್ತು ಸ್ಥಳದಂದು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಮತ್ತು ಸಲಹೆ ಪಡೆದುಕೊಳ್ಳುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಮನವಿ ಮಾಡಿದ್ದಾರೆ.

ಆರೋಗ್ಯ ತಪಾಸಣೆ ನಡೆಯುವ ದಿನಾಂಕ ಮತ್ತು ಸ್ಥಳದ ವಿವರ ಇಂತಿದೆ: ದಿ.03-08-2020 ರಂದು ಅಶೋಕ ನಗರ ಆರೋಗ್ಯ ಕೇಂದ್ರದಿಂದ ಅಶೋಕ ನಗರ ಆರೋಗ್ಯ ಕೇಂದ್ರ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಶಾಜಿಲಾನಿ ದರ್ಗಾ 2ನೇ ಅಂಗನವಾಡಿ ಕೇಂದ್ರ, ಐಸಿಡಿಎಸ್ ಆರೋಗ್ಯ ಕೇಂದ್ರದಿಂದ ಸಾಯಿ ಮಂದಿರ ಗಾರ್ಡನ್ ಹತ್ತಿರ ಹಾಗೂ ಖಾನಾಪುರ ನಗರ ಆರೋಗ್ಯ ಕೇಂದ್ರದಿಂದ ವೀರಭಧ್ರೇಶ್ವರ ಗುಡಿ ಹತ್ತಿರದಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.

ದಿ.04-08-2020 ರಂದು ಮಕ್ತಂಪೂರ ನಗರ ಆರೋಗ್ಯ ಕೇಂದ್ರದಿಂದ ಮಕ್ತಂಪುರ ಅಂಗನವಾಡಿ ಕೇಂದ್ರ-1, ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದಿಂದ ಎಸ್.ಎಂ.ಕೃಷ್ಣ ಕಾಲೋನಿ ಅಂಗನವಾಡಿ ಕೇಂದ್ರ, ಎಸ್.ಆರ್.ನಗರ ಆರೋಗ್ಯ ಕೇಂದ್ರದಿಂದ ಖಮರ್ ಕಾಲೋನಿ ಅಂಗನವಾಡಿ ಕೇಂದ್ರ ಹಾಗೂ ಶಹಾಬಜಾರ ನಗರ ಆರೋಗ್ಯ ಕೇಂದ್ರದಿಂದ ಫಿಲ್ಟರ್ ಬೆಡ್ ಅಂಗನವಾಡಿ ಕೇಂದ್ರ-1ರಲ್ಲಿ ಶಿಬಿರ ಆಯೋಜಿಸಲಾಗಿದೆ.

ದಿ.05-08-2020 ರಂದು ಶಿವಾಜಿನಗರ ನಗರ ಆರೋಗ್ಯ ಕೇಂದ್ರದಿಂದ ಮಹಾದೇವ ಮಂದಿರ ರಾಮ ನಗರ, ಸೆಂಟ್ ಜಾನ್ ಆರೋಗ್ಯ ಕೇಂದ್ರದಿಂದ ಸಮದಾಯ ಭವನ ಗಾಜೀಪೂರ, ಯು.ಎಫ್.ಡಬ್ಲ್ಯೂ.ಸಿ ಆರೋಗ್ಯ ಕೇಂದ್ರದಿಂದ ಅಂಬೇಡ್ಕರ ಸಮುದಾಯ ಭವನ ಹಾಗೂ ಯು.ಎಫ್.ಡಬ್ಲ್ಯೂ.ಸಿ ಆರೋಗ್ಯ ಕೇಂದ್ರದಿಂದ ಮಲ್ಲಿಕಾರ್ಜುನ ಗುಡಿ ಅಂಗನವಾಡಿ ಕೇಂದ್ರ-1ರಲ್ಲಿ ವಿಶೇಷ ಚಿಕಿತ್ಸಾ ಶಿಬಿರ ಇರಲಿದೆ.

ದಿ.06-08-2020 ರಂದು ಅಶೋಕ ನಗರ ಆರೋಗ್ಯ ಕೇಂದ್ರದಿಂದ ಕೃಷ್ಣಾ ನಗರ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಗಣೇಶ ನಗರ ಬಿದ್ದಾಪುರ ಕಾಲೋನಿ, ಐ.ಸಿ.ಡಿ.ಎಸ್ ಆರೋಗ್ಯ ಕೇಂದ್ರದಿಂದ ಸಮುದಾಯ ಭವನ ಪಂಚಶೀಲ ನಗರ ಹಾಗೂ ಖಾನಾಪುರ ನಗರ ಆರೋಗ್ಯ ಕೇಂದ್ರದಿಂದ ಯಾದುಲ್ಲಾ ಕಾಲೋನಿ ಅಂನವಾಡಿ ಕೇಂದ್ರ-2ರಲ್ಲಿ ತಪಾಸಣೆ ನಡೆಯಲಿದೆ.

ದಿ.07-08-2020 ರಂದು ಮಕ್ತಂಪೂರ ನಗರ ಆರೋಗ್ಯ ಕೇಂದ್ರದಿಂದ ಮಕ್ತಂಪುರ ಅಂಗನವಾಡಿ ಕೇಂದ್ರ-1, ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದಿಂದ ಶಿವಲಿಂಗೇಶ್ವರ ಮಂದಿರ ಅಂಗನವಾಡಿ ಕೇಂದ್ರ, ಎಸ್.ಆರ್.ನಗರ ಆರೋಗ್ಯ ಕೇಂದ್ರದಿಂದ ಮಹೆಬೂಬ್ ನಗರ ಅಂಗನವಾಡಿ ಕೇಂದ್ರ-1 ಹಾಗೂ ಶಹಾಬಜಾರ ನಗರ ಆರೋಗ್ಯ ಕೇಂದ್ರದಿಂದ ಫಿಲ್ಟರ್ ಬೆಡ್ ಅಂಗನವಾಡಿ ಕೇಂದ್ರ-2ರಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.

ದಿ.08-08-2020 ರಂದು ಶಿವಾಜಿನಗರ ನಗರ ಆರೋಗ್ಯ ಕೇಂದ್ರದಿಂದ ಅಂಭಾಭವಾನಿ ಗುಡಿ ಶಿವಾಜಿನಗರ ಅಂಗನವಾಡಿ ಕೇಂದ್ರ-1, ಸೆಂಟ್ ಜಾನ್ ಆರೋಗ್ಯ ಕೇಂದ್ರದಿಂದ ಭವಾನಿ ಮಂದಿರ, ಯು.ಎಫ್.ಡಬ್ಲ್ಯೂ.ಸಿ ಆರೋಗ್ಯ ಕೇಂದ್ರದಿಂದ ಮಲ್ಲಿಕಾರ್ಜುನ ಮಂದಿರ ಹಾಗೂ ಯು.ಎಫ್.ಡಬ್ಲ್ಯೂ.ಸಿ ಆರೋಗ್ಯ ಕೇಂದ್ರದಿಂದ ಹೆರಿಗೆ ಆರೋಗ್ಯ ಕೇಂದ್ರ ತಾರಫೈಲ್ ಇಲ್ಲಿ ಶಿಬಿರ ನಡೆಯಲಿದೆ.

ದಿ.10-08-2020 ರಂದು ಅಶೋಕ ನಗರ ಆರೋಗ್ಯ ಕೇಂದ್ರದಿಂದ ಶಿವದತ್ತ ಮಠ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಅಂಗನವಾಡಿ ಕೇಂದ್ರ-4 ಬಿದ್ದಾಪುರ, ಐ.ಸಿ.ಡಿ.ಎಸ್ ಆರೋಗ್ಯ ಕೇಂದ್ರದಿಂದ ಡಿಸ್ಪೆನ್ಸರಿ ಪೊಲೀಸ್ ಕಾಲೋನಿ ಹಾಗೂ ಖಾನಾಪೂರ ನಗರ ಆರೋಗ್ಯ ಕೇಂದ್ರದಿಂದ ಸೈಯದ್ ಗಲ್ಲಿ ಇಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago