ಅಂಕಣ ಬರಹ

ಶರಣ ಚರಿತೆ: ಶರಣ ಸ್ಮಾರಕಗಳಲ್ಲಿ ಶರಣ ರೇವಣಸಿದ್ಧೇಶ್ವರರು

ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಶರಣ ರೇವಣಸಿದ್ಧೇಶ್ವರರ ಸ್ಮಾರಕಗಳನ್ನು ನಾವು ಕಾಣಬಹುದು. ಜನರ ಬಗ್ಗೆ ಅತೀವ ಪ್ರೀತಿ-ಕಾಳಜಿ ಇವರಿಗಿತ್ತು ಎನ್ನುವುದಕ್ಕೆ ಅವರು ಕಟ್ಟಿಸಿದ ಗುಡಿ-ಗುಂಡಾರ, ಕೆರೆ-ಕಟ್ಟೆಗಳನ್ನು ಇಂದಿಗೂ ನೋಡಬಹುದು. ಮಂಗಳವೇಡೆಯಲ್ಲಿ ಅವರ ಪ್ರಮುಖ ಸ್ಮಾರಕವಿದೆ, ಅವರು ಕಟ್ಟಿಸಿದ ಸಿದ್ಧನಕೆರೆಯ ಸುತ್ತ ಇದೀಗ ದೊಡ್ಡ ಊರಾಗಿ ಪರಿಣಮಿಸಿದೆ. ಇವರ ಮಕ್ಕಳಾದ ರುದ್ರಮುನಿ ಹಾಗೂ ಚೆನ್ನರೇವಣದೇವಿ ಎಂದು ಹೇಳಲಾಗುತ್ತಿದೆ.

ರೇವಣಸಿದ್ಧರಿಗೆ ಸಂಬಂಧಿಸಿದಂತೆ ಅವಿಭಜಿತ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಅನೇಕ ಶಾಸನ ಮತ್ತು ದೇವಸ್ಥಾನಗಳನ್ನು ಕಾಣಬಹುದು. ಅವರು ಇದೇ ಭಾಗದಲ್ಲಿ ಸಾಕಷ್ಟು ಅಡ್ಡಾಡಿದ್ದಾರೆ. ತಮ್ಮ ಕೊನೆಗಾಲವನ್ನು ಇಲ್ಲಿಯೇ ಕಳೆದಿದ್ದಾರೆ ಎನ್ನುವುದಕ್ಕೆ ಅನೇಕ ಸಾಕ್ಷಾಧಾರಗಳು ದೊರೆಯುತ್ತವೆ. ಇಂಗಳೇಶ್ವರದಲ್ಲಿ ಬೆಟ್ಟದ ಬಲ ತುದಿಯಲ್ಲಿ ರೇವಣಸಿದ್ದೇಶ್ವರರ ಮಂದಿರವಿದೆ. ಒಳಗಡೆ ಮಂಟಪವಿದ್ದು, ಗುಡಿ ಪ್ರವೇಶದ ನಂತರ ಎಡಗಡೆ ಗವಿಯ ಬಾಗಿಲು ಮೂಲಕ ಪ್ರವೇಶಿಸಿ ರೇವಣಸಿದ್ಧೇಶ್ವರ ದರ್ಶನ ಪಡೆದು ಬಲಗಡೆಯ ಗವಿಯ ಬಾಗಿಲಿನಿಂದ ಹೊರ ಬರಬಹುದು.

ಶಹಾಪುರ ತಾಲ್ಲೂಕಿನ ಶಿರವಾಳದಲ್ಲಿ ಸಿದ್ಧಲಿಂಗೇಶ್ವರ ಮಂದಿರವಿದೆ. ಇಲ್ಲಿ ಸುಮಾರು ೨೦ ಹಳೆಯ ದೇವಾಲಯಗಳಿವೆ. ಪಂಚಲಿಂಗ ಹೊಂದಿರುವ ದೊಡ್ಡ ಮಂದಿರ ಕೂಡ ಇದೆ. ಅಲ್ಲಿರುವ ಶಿಲಾ ಶಾಸನದ (೧೧೨೮) ಪ್ರಕಾರ ಶಿರವಾಳ ಆಗ ದಕ್ಷಿಣ ವಾರಣಾಸಿ, ಧರ್ಮದ ತವರುಮನೆ ಆಗಿತ್ತು. ರೇವಣಸಿದ್ಧರು ಪ್ರಸಾದ ಬಡಿಸುವ, ಹರಿಯುವ ನದಿ ದಾಟುವ ಸಂಗೀತ, ನೃತ್ಯ ಪ್ರವೀಣರಾಗಿದ್ದರು ಎಂಬುದನ್ನು ಹೇಳುತ್ತೆ ಇಡೀಯಾಗಿ ಅವರ ರೇವಣಸಿದ್ಧೇಶ್ವರರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ರೇವಣಸಿದ್ಧೇಶ್ವರರ ಗುರು ಶಾಂತಿಮಯ್ಯನವರ ಹೆಸರು ಸಿದ್ಧಶಾಂತೇಶ್ವರ, ಸಿದ್ಧಸಾತೇಶ್ವರ, ಸಿದ್ದೇಶ್ವರ, ಸಿದ್ಧಲಿಂಗೇಶ್ವರ ಆಗಿದೆ. ಅವರ ಹೆಸರಿನಿಂದ ಈ ಗುಡಿ ಕಟ್ಟಲಾಗಿದೆ ಎಂದು ತಿಳಿದು ಬರುತ್ತದೆ. ಕೆಲ್ಲೂರಿನಲ್ಲಿರುವ ತ್ರಿಕುಟ ದೇವಾಲಯದ ಎದುರು ಸಿದ್ಧಲಿಂಗೇಶ್ವರ ದೇವಸ್ಥಾನವಿದೆ. ಕೆಲ್ಲೂರು ಶಾಸನದ ಪ್ರಕಾರ ಶಾಂತಿಮಯ್ಯ ಶರಣ ರೇವಣಸಿದ್ಧರ ಗುರು ಇಲ್ಲವೇ ತಂದೆ ಕೂಡ ಆಗಿರಬಹುದು ಎಂದು ಡಾ. ಎಂ. ಎಂ. ಕಲ್ಬುರ್ಗಿ ತಿಳಿಸುತ್ತಾರೆ.

ಶಿರವಾಳದಲ್ಲಿ ರೇವಣಸಿದ್ಧರ ಶಿಷ್ಯರ ಮಠಗಳಿವೆ. ಮಲ್ಲಿಕಾರ್ಜುನ ದೇವಾಲಯ, ಸುಜ್ಞಾನೇಶ್ವರ ಮಂದಿರ, ನನ್ನಯ್ಯ, ನಾದಯ್ಯ ಮಂದಿರಗಳನ್ನು ಕಾಣಬಹುದು. ಇಲ್ಲಿಂದ ಉತ್ತರ ದಿಕ್ಕಿಗೆ ೧೨ ಕಿ. ಮೀ ಹೋದರೆ ಹೋತಗಲ್ ಎಂಬ ಊರು ಸಿಗುತ್ತದೆ. ಅಲ್ಲೊಂದು ದಿಬ್ಬ ಇದೆ. ಇದು ರೇವಣಸಿದೇಶ್ವರ ದೇವಸ್ಥಾನವಾಗಿದೆ. ಆದರೆ ಇದು ಸಂಪೂರ್ಣ ಹಾಳಾಗಿದೆ. ೧೧೭೫ನೇ ಹಾಗೂ ೧೨೦೮ರಲ್ಲಿ ದೊರೆತ ಶಾಸನ ರೇವಣಸಿದ್ಧರು ಕೊನೆಗಾಲದಲ್ಲಿ ಎಲ್ಲಿದ್ದರು? ಅವರು ಎಷ್ಟು ವರ್ಷ ಬದುಕಿದ್ದರು ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಮೇಲಾಗಿ ಸಿರವಾಳ ಹಾಗೂ ಹೋತಗಲ್ ಗ್ರಾಮದವರು ಸಿದ್ಧಲಿಂಗೇಶ್ವರ ಗುಡಿಕಟ್ಟಲು ರೇವಣಸಿದ್ಧರಿಗೆ ದತ್ತಿ ಕೊಟ್ಟರು ಎಂಬುದು ತಿಳಿದು ಬರುತ್ತದೆ.

೧೧೮೦ರಲ್ಲಿ ಸಿಕ್ಕ ಕೋಳಕೂರ ಶಾಸನದಲ್ಲಿ “ರೇವಣರೇಶ್ವರ ದೇವರು” ಎಂಬ ಪದ ಬಳಕೆ ಮಾಡಿರುವುದನ್ನು ನೋಡಿದರೆ ರೇವಣಸಿದ್ಧರು ಸುಮಾರು ೧೨೦ ವರ್ಷಗಳ ಕಾಲ ಬದುಕಿದ್ದರು. ಕಲ್ಯಾಣ ಸಮೃದ್ಧವಾಗಿ ಬೆಳೆದದ್ದು ಹಾಗೂ ಹಾಳಾಗಿರುವುದನ್ನು ಅವರು ನೋಡಿದ್ದಾರೆ. ಹೀಗಾಗಿ ಅವರು ಹೋತಗಲ್ ಅವರ ಲಿಂಗೈಕ್ಯರಾದ ಸ್ಥಳಬಾಗಿರಬಹುದು.

ಸ್ಥಳ: ಅನುಭವ ಮಂಟಪ,
ಜಯನಗರ,ಕಲಬುರಗಿ
sajidpress

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago