ಬಿಸಿ ಬಿಸಿ ಸುದ್ದಿ

ಡೀಸೆಲ್ ದರ ಇಳಿಕೆ, ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಲಾರಿ ಮಾಲೀಕರ ಸಂಘಟನೆ ಆಗ್ರಹ

ಬೆಂಗಳೂರು: ಕೇಂದ್ರ ಸರಕಾರ ತೆರಿಗೆಯನ್ನು ಹೆಚ್ಚಿಸಿ ಕೃತಕವಾಗಿ ಡೀಸೆಲ್ ದರವನ್ನು ಹೆಚ್ಚಿಸಿರುವುದನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು. ಅಲ್ಲದೆ, ಡೀಸೆಲ್ ದರವನ್ನು ಜಿಎಸ್ಟಿವ್ಯಾಪ್ತಿಗೆ ಒಳಪಡಿಸುವಂತೆ ಫೆಡರೇಷನ್  ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಬಿಚನ್ನಾರೆಡ್ಡಿ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕೊರೋನಾ ಪರಿಸ್ಥಿತಿ ಇರುವುದರಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಏರುಪೇರಾಗಿದೆ. ಈ ಸಂಧರ್ಭದಲ್ಲಿನಮ್ಮಸರಕು ಸಾಗಾಣೆ ವಾಹನಗಳ ವ್ಯವಹಾರವು ಕುಂಠಿತಗೊಂಡಿದ್ದು, ಈ ಉದ್ದಿಮೆಯಲ್ಲಿ ಉಳಿಯುವುದೇಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಡೀಸೆಲ್ ದರಗಳನ್ನು ದಿನೇ ದಿನೇ ಹೆಚ್ಚಿನ ಉದ್ದಿಮೆಗೆ ದೊಡ್ಡಹೊಡೆತವನ್ನು ನೀಡಿದೆ. ರಾಷ್ಟ್ರಾದ್ಯಂತ ಲಾರಿ ಮಾಲೀಕರು ಕೇಂದ್ರ ಸರಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿ ಡೀಸೆಲ್ ದರವನ್ನು ತಗ್ಗಿಸಲು ಪ್ರಾರ್ಥಿಸಿರುತ್ತಾರೆ. ಈಗಿನ ಡೀಸೆಲ್ ಬೆಲೆಯುಕೃತಕವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ತಮ್ಮ ಪಾಲಿನತೆರಿಗೆಗಳನ್ನು ಹೆಚ್ಚಿಸಿರುವುದರಿಂದಲೇ ಆಗಿದೆ ಎಂದು ಹೇಳಿದರು.

ಅಮೇರಿಕಾ ದೇಶ ಡೀಸೆಲ್ ಮೇಲೆ ಶೇಕಡಾ 19 ರಷ್ಟು ತೆರಿಗೆಯನ್ನು ವಿಧಿಸಿದರೆ, ಫ್ರಾನ್ಸ್ ದೇಶದಲ್ಲಿ ಇದರ ಪ್ರಮಾಣ ಶೇಕಡಾ 63 ರಷ್ಟಿದೆ. ಆದರೆ, ಭಾರತ ದೇಶದಲ್ಲಿ ಮಾತ್ರ ಇದರ ಪ್ರಮಾಣ ಶೇಕಡಾ 250 ರಷ್ಟುಇದೆ. ಈದನ್ನು ನೋಡಿದರೆ ಕೇಂದ್ರ ಸರಕಾರ ಯಾವ ರೀತಿ ಸರಕು ಸಾಗಣೆ ವಾಹನಗಳ ಮಾಲೀಕರ ಮೇಲೆ ಅವೈಜ್ಞಾನಿಕ ತೆರಿಗೆ ಹೊರೆಯನ್ನು ಹಾಕುತ್ತಿದೆ ಎಂದು ಗೊತ್ತಾಗುತ್ತದೆ. ಈಗಿನ ಕೊರೋನಾ ವೈರಾಣು ಪರಿಣಾಮ ದೇಶದ ಆರ್ಥಿಕ ಚಟುವಟಿಕೆಗಳು ಸರಿಯಾಗಿ ನಡೆಯದೇ ಇರುವುದರಿಂದ ದುಬಾರಿ ಡೀಸೆಲ್ ದರವನ್ನು ತಡೆದುಕೊಳ್ಳಲು ಆಗುತ್ತಿಲ್ಲ.

ಆದ್ದರಿಂದ ರಾಷ್ಟ್ರವ್ಯಾಪಿ ಇರುವ ಎಲ್ಲಾ ಲಾರಿ ಮಾಲೀಕರ ಸಂಘಟನೆಗಳು ಜಂಟಿಯಾಗಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಪರಿಹಾರ ನೀಡಲು ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಡೀಸೆಲ್ ದರವನ್ನುಇಳಿಸುವುದು. ಧರ್ಡ್ ಪಾರ್ಟಿಇನ್ಸೂರೆನ್ಸ್ ನ್ನುಡಿಟ್ಯಾರೀಫ್ ಮಾಡುವುದು. 15 ವರ್ಷದಹಳೆಯವಾಹನಗಳನ್ನುಸ್ಕ್ರಾಪ್ ಮಾಡುವುದರ ಬಗ್ಗೆ ಚರ್ಚಸಿವುದು ಹಾಗೂ ಡೀಸೆಲ್  ದರಗಳನ್ನು ಜಿ.ಎಸ್.ಟಿವ್ಯಾಪ್ತಿಗೆ ಒಳಪಡಿಸುವುದು. ಈ ಮೇಲ್ಕಂಡ ನಾಲ್ಕುಬೇಡಿಕೆಗಳನ್ನು ಕೇಂದ್ರ ಸರಕಾರ ಒಂದು ತಿಂಗಳ ಒಳಗಾಗಿ ಪರಿಹರಿಸಬೇಕು. ಇಲ್ಲದೆ ಇದ್ದ ಪಕ್ಷದಲ್ಲಿ ರಾಷ್ಟ್ರವ್ಯಾಪಿ ಲಾರಿ ಮಾಲೀಕರ ಸಂಘಟನೆಗಳು ಮುಂದಿನ ಪ್ರತಿಭಟನಾ ಮಾರ್ಗವನ್ನು ಹಮ್ಮಿಕೊಳ್ಳಲು ತೀರ್ಮಾನಿಸುವುದು ಅನಿವಾರ್ಯವಾಗಲಿದೆ ಎಂದು ಇದೇ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದಯು. ಶ್ರೀನಿವಾಸ್, ಎನ್ ಶ್ರೀನಿವಾಸ್ ರಾವ್, ಗಾಯ್ಬುಸಾಬ್ ಹೊನ್ನಳ್, ಪ್ರಧಾನ ಕಾರ್ಯದರ್ಶಿ ಆರ್ ವಿ ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

sajidpress

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago