ಸುರಪುರ: ಕೇಂದ್ರ ಸರಕಾರ ಆದೇಶದ ಮೇರೆಗೆ ಇಂದು ಅನೇಕ ಕಡೆಗಳಲ್ಲಿ ತಳವಾರ, ಪರಿವಾರ ಜಾತಿಗಳಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ.ಅದರಂತೆ ನಮ್ಮ ತಾಲೂಕು ಆಡಳಿತವುಕೂಡ ಇಲ್ಲಿಯ ತಳವಾರ ಜನಾಂಗಕ್ಕೆ ಎಸ್ಟಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವಪ್ಪ ಕಟ್ಟಿಮನಿ ಆಗ್ರಹಿಸಿದರು.
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ತಳವಾರ ಸಮುದಾಯದ ಜನರು ತಾಲೂಕಿನಲ್ಲಿ ಅನೇಕ ಕುಟುಂಬಗಳಿವೆ,ಈ ಎಲ್ಲಾ ಕುಟುಂಬಗಳು ಬಹುಕಾಲದಿಂದ ತಳವಾರ ವೃತ್ತಿಯನ್ನು ಮಾಡಿಕೊಂಡು ಬರುತ್ತಿವೆ.ಇದನ್ನು ಪರಿಗಣಿಸಿ ಸದ್ಯ ನೀಡುತ್ತಿರುವ ಪ್ರವರ್ಗ-1 ಬದಲಾಗಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು. ಆದರೆ, ರಾಜ್ಯದಲ್ಲಿರುವ ಕೆಲ ವ್ಯಕ್ತಿಗಳು ಅಡ್ಡಿ ತರುತ್ತಿದ್ದಾರೆ. ನಾವು ಯಾರ ಹಕ್ಕನ್ನು ಕಸಿದುಕೊಳ್ಳುವುದಿಲ್ಲ. ಸಂವಿಧಾನ ಬದ್ಧವಾಗಿ ನಮ್ಮ ಹಕ್ಕನ್ನು ಪಡೆಯಲು ಯತ್ನಿಸುತ್ತಿದ್ದೇವೆ. ನಮ್ಮ ಹಕ್ಕು ಪಡೆಯಲು ಯಾರೂ ಭಂಗ ಉಂಟು ಮಾಡುವುದನ್ನು ಸಹಿಸುವುದಿಲ್ಲ.ರಾಜ್ಯ ಸರಕಾರವೂ ಕೂಡಲೇ ಯಾರ ಪ್ರಭಾವಕ್ಕೆ ಒಳಗಾಗದೇ ಒತ್ತಡಕ್ಕೆ ಮಣಿಯದೆ ಎಸ್‍ಟಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ತಳವಾರ ಸಮುದಾಯಕ್ಕೆ ನಮ್ಮ ಶಾಲೆಗಳ ದಾಖಲಾತಿ ಪ್ರಕಾರ ಉದ್ಯೋಗ, ವೃತ್ತಿಗಳಿಗೆ ಎಸ್‍ಟಿ ಪ್ರಮಾಣ ಪತ್ರ ವಿತರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ ಎಂದು ಎಚ್ಚರಿಸಿ ತಹಶೀಲ್ದಾರ್ ನಿಂಗಣ್ಣ ಬಿರೆದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಂಕಣ್ಣ ಕಟ್ಟಿಮನಿ, ಶಾಂತಪ್ಪ ತಾಳಿಕೋಟಿ, ದೊಡ್ಡಪ್ಪ ಮುದ್ನೂರ, ಹಣಮಂತ ಅಂಬಿಗೇರ, ಭೈರಣ್ಣ ಅಂಬಿಗೇರ, ಸಂಗಣ್ಣ ಬಾಕ್ಲಿ, ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡ, ನರಸಿಂಹಕಾಂತ ಪಂಚಮಗಿರಿ,ಮಲ್ಲು ವಿಷ್ಣುಸೇನಾ, ಯಂಕಣ್ಣ ಪರಾಸಿ, ಮೌನೇಶ ಬೋವಿ, ಸಣ್ಣ ವೆಂಕಟೇಶ, ರಾಘವೇಂದ್ರ, ಸೇರಿದಂತೆ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…