ಬಿಸಿ ಬಿಸಿ ಸುದ್ದಿ

ಯಡಿಯೂರಪ್ಪ ಸರಕಾರದ ಮಂತ್ರಿಗಳು ತನಗೆಷ್ಟು ಸಿಗುತ್ತದೆ ಅಂತ ಭ್ರಷ್ಟಾಚಾರದ ಬಗ್ಗೆ ಯೋಚಿಸುತ್ತಿದ್ದಾರೆ: ಡಿಕೆ ಶಿ

ಕಲಬುರಗಿ: 21 ದಿನದಲ್ಲೇ ಕೊರೋನಾ ಯುದ್ದ ಗೆಲ್ಲುವುದಾಗಿ ಪಿಎಂ ಹೇಳಿದ್ರು. ನಾವೆಲ್ಲ ಬೆಂಬಲ ಕೊಟ್ಟೆವು. ಲಾಕ್ ಡೌನ್ , ಸೀಲ್ ಡೌನ್ ಎಲ್ಲ ಮುಗಿದು, 120 ದಿನ ಮುಗಿದ ನಂತರವೂ ನಾವು ಮೊದಲು ಯಾವ ಸ್ಥಿತಿಯಲ್ಲಿ ಇದ್ದೆವೋ ಅಲ್ಲೇ ಇದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದ್ದಾರೆ.

ಇಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊವೀಡ್ ಬಂದ ನಂತರ ಹಣ ಲೂಟಿಯಾಗುತ್ತಿದೆ. ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ.‌ ಪ್ರತಿಯೊಬ್ಬ ಮಂತ್ರಿ ತನಗೆಷ್ಟು ಸಿಗುತ್ತದೆ ಅಂತ ಯೋಚಿಸುತ್ತಿದ್ದಾರೆ. ಹಾಗಾಗಿ, ನಾವು ಲೆಕ್ಕ ಕೇಳುತ್ತಿದ್ದೇವೆ.

ಸರಕಾರ ಹೇಳಿದಂತೆ ನಾವೂ ಸಹಕಾರ ನೀಡಿದೆವು. ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದೆವು. ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಸೇರಿ ಕೊವೀಡ್ ನಿರ್ವಹಣೆಗೆ ಸಲಹೆ ನೀಡಿದ್ದೇವೆ. ದೇಶದಲ್ಲಿಯೇ ರಾಜ್ಯದಲ್ಲಿ ಉತ್ತಮ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿವೆ. ಅವರನ್ನು ಕರೆದು ಮಾತನಾಡಲಿಲ್ಲ. ಅವರೆಲ್ಲ ಬಂದರೆ ತಮಗೆ ಸಿಗಬಹುದಾದ್ದು ಸಿಗಲ್ಲ ಎಂದು ಭಾವಿಸಿದರು.

ಸರಕಾರದವರು ತಾವೇ 10,500 ಬೆಡ್ ಆಸ್ಪತ್ರೆ ಮಾಡಿದರು. ಮೊದಲು ದಿನವೊಂದಕ್ಕೆ 800 ರಂತೆ ಬಾಡಿಗೆಗೆ ಆಧಾರದ ಮೇಲೆ ಬುಕ್ ಮಾಡಿದರು. ಅಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಂದ‌ನಂತರ ಖರೀದಿ ಮಾಡುವುದಾಗಿ ಹೇಳಿದರು. ಸೋಂಕಿತರು ಬಳಸಿದ ನಂತರ ಬೆಡ್ ಗಳನ್ನು  ಹಾಸ್ಟೆಲ್ ಗಳಿಗೆ ಬಳಸುವುದಾಗಿ ಹೇಳಿದರು. ಯಾವಾಗ ನಾವು ವಿರೋಧ ಮಾಡಿದೆವು, ಹಾಗೆ ಬಳಸಲ್ಲ ಸುಡುವುದಾಗಿ ಹೇಳಿದರು.

ಆಹಾರ ಧಾನ್ಯ ವಿತರಣೆಯಲ್ಲಿ ಅವ್ಯವಹಾರ ನಡೆದು ನಾವು ಅದನ್ನು ಹಿಡಿದು ಒಪ್ಪಿಸಿದಾಗ ಒಂದೇ ಒಂದು ದೂರು ದಾಖಲಾಗಲಿಲ್ಲ, ಅವ್ಯವಹಾರದಲ್ಲಿ ಭಾಗಿಯಾದವರನ್ನ ಅರೆಸ್ಟ್ ಮಾಡಲಿಲ್ಲ. 4000 ಕೋಟಿಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿರುವುದನ್ನು ಸಿದ್ದರಾಮಯ್ಯ, ಹೆಚ್ ಕೆ ಪಾಟೀಲ್, ನಾನು ಲೆಕ್ಕ ಕೇಳಿದ್ದೇವೆ ಎಂದರು.

ತಮಿಳುನಾಡಲ್ಲಿ‌ ಸಿಗುವ 5. 18 ಲಕ್ಷದ ಕಿಟ್ 18 ಲಕ್ಷಕ್ಕೆ ಖರೀದಿ ಮಾಡಲಾಗಿದೆ. 50 ರೂಪಾಯಿ ಸ್ಯಾನಿಟೈಜರ್‌ 600 ರೂಪಾಯಿ ತೆತ್ತು ಖರೀದಿ ಮಾಡಿದ್ದೀರಿ. ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನ್,  ಮಾಸ್ಕ್, ಆಕ್ಷಿಜನ್ ಹೀಗೆ ಎಲ್ಲದರಲ್ಲೂ ಮೂರು ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಖರೀದಿ ಮಾಡಿ ಅವ್ಯವಹಾರದಲ್ಲಿ ತೊಡಗಿದರೆ ನಾವು ಸರಕಾರಕ್ಕೆ‌ ಸಹಕಾರ‌ ನೀಡಬೇಕಾ? ಸಚಿವರು ಸೋಂಕಿತರನ್ನ ಭೇಟಿ ಮಾಡಲಿಲ್ಲ. ಯಾಕೆ ನೀವು ಹೋಗಿ ಅವರನ್ನ ಭೇಟಿ ಮಾಡಿ ಧೈರ್ಯ ಹೇಳಿದರೆ ನಿಮಗೆ ಸೋಂಕು ತಗುಲುತ್ತಾ? ಇದನ್ನೆಲ್ಲ ಪ್ರಶ್ನೆ ಮಾಡಿದರೆ ನನಗೆ ಸಿದ್ದರಾಮಯ್ಯನವರಿಗೆ ನೋಟಿಸು ಕೊಡ್ತಿರಾ. ನಿಮ್ಮ ಅವ್ಯವಹಾರ ಬಯಲು ಮಾಡಿದ ಮಾಧ್ಯಮವರಿಗೆ ನೋಟಿಸು ಕೊಡಿ‌ ನೋಡೋಣ.

ಅವರ್ಯಾರೋ ಬಿಜೆಪಿ ಕಾರ್ಯದರ್ಶಿಯಂತೆ ನೋಟಿಸು ಕೊಡ್ತಾರಂತೆ. ಎಂತೆಂಥದೋ ನೋಟಿಸುಗಳಿಗೆ ಹೆದರಿಲ್ಲ ನಿಮ್ಮ ನೋಟಿಸಿಗೆ ಹೆದರ್ತೀವಾ?. ನಾವೂ ನಿಮ್ಮ ಮೇಲೆ ಮಾನನಷ್ಟ ಮೊಕದ್ದುವೆ ಹಾಕ್ತೀವಿ. ನಿಮ್ಮ ನೂರು ನೋಟಿಸು ಎದುರಿಸುವ ತಾಕತ್ತು ಜನ ನಮಗೆ ನೀಡಿದ್ದಾರೆ. ಮೋದಿಯವರು ನಮ್ಮ ಸರಕಾರವನ್ನು ಹತ್ತು ಪರ್ಸೆಂಟ್ ಸರಕಾರ ಎಂದಿದ್ದರು. ಈಗ ಎಷ್ಟಿದೆ ಗೊತ್ತಾ? ಇನ್ನೂರು ಮುನ್ನೂರು ಪರ್ಸೆಂಟ್ ನಡೀತಿದೆ. ನಮ್ಮ ಸರಕಾರದಲ್ಲಿ ಅವ್ಯವಹಾರ ನಡೆದಿದ್ದರೆ ತಪ್ಪು ಮಾಡಿದ್ದರೆ ನಮಗೆ ಶಿಕ್ಷಿಸಿ ಎಂದರು.

ಸಂಕಷ್ಟದಲ್ಲಿದ್ದ ಸಾವಿರಾರು ಕಾರ್ಮಿಕರು ಬೆಂಗಳೂರಿನಿಂದ ಅವರ ಊರುಗಳಿಗೆ ವಾಪಸ್ ಹೋಗಲು ಸಾವಿರಾರು ದುಡ್ಡು ನಿಗದಿ ಮಾಡಿದರು. ಅವರ ಕಷ್ಟ ನೋಡದೆ ನಾನು ಒಂದು ಕೋಟಿ ಚೆಕ್ ಕೊಟ್ಟೆ. ಪುಡ್ ಕಿಟ್ ಕೊಟ್ಟಿದ್ದಾರಂತೆ ಎಷ್ಟು ಜನಕ್ಕೆ‌ ಕೊಟ್ಟರೋ ಲೆಕ್ಕ ಇಲ್ಲ. ಐದು ಲಕ್ಷ ಜನ ರಾಜ್ಯ ನಿರ್ಮಾತೃಗಳು ವಾಪಸ್ ಹಳ್ಳಿಗಳಿಗೆ ಹೋದರು ಅವರನ್ನ ಯಾವ ರೀತಿ ನಡೆಸಿಕೊಂಡ್ರಿ. ವಿಮಾನದಲ್ಲಿ ಬಂದವರಿಗೆ ರಾಜ ಮರ್ಯಾದೆ ಬಡವರಿಗೆ ದನದ ಕೊಟ್ಟಿಗೆಯಲ್ಲಿ ಹಾಕಿದರು ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಈಶ್ವರಪ್ಪ ಖಂಡ್ರೆ, ಶಾಸಕ ಅಜಯ ಸಿಂಗ್, ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ್, ಸುಭಾಷ್ ರಾಠೋಡ್ ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago